ಭಟ್ಕಳ(ಉತ್ತರ ಕನ್ನಡ): ತಾಲೂಕಿನಾದ್ಯಂತ ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ದಾಳಿ ನಡೆದ ಪೋಲಿಸರು 25 ಸೈಕಲ್ ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡ ಘಟನೆ ಭಟ್ಕಳದ ಕೊಟೇಶ್ವರ ರೋಡ್ ಬಳಿ ನಡೆದಿದೆ. ಆರೋಪಿ ಇಲ್ಲಿನ ಕೋಟೇಶ್ವರ ನಗರದ ನಿವಾಸಿ ಮಂಜು ಕೊರಗರ ಎಂದು ತಿಳಿದು ಬಂದಿದೆ.
ಈತ ತಾಲೂಕಿನ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ ಸೈಕಲ್ ಹಾಗೂ ಬೈಕ್ಗಳನ್ನು ತನ್ನ ಮನೆಯಲ್ಲಿ ತಂದು ಜಮಾ ಮಾಡುತ್ತಿದ್ದನು ಎಂದು ಹೇಳಲಾಗ್ತಿದೆ. ಇದರ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಸಿಪಿಐ ದಿವಾಕರ ಪಿ ನೇತೃತ್ವದ ತಂಡ ದಾಳಿ ನಡೆಸಿ, ಮನೆಯಲ್ಲಿ ಜಮಾ ಮಾಡಿಟ್ಟಿದ್ದ 25 ಸೈಕಲ್ ಹಾಗೂ 3 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೇ ವೇಳೆ ಬಟ್ಟೆ ಬದಲಾವಣೆ ಮಾಡುವ ನೆಪದಲ್ಲಿ ಮನೆಯ ಹಿಂಬದಿಯಿಂದ ಆರೋಪಿ ಮಂಜು ಕೊರಗರ ಪರಾರಿಯಾಗಿದ್ದಾನೆ. ಸೈಕಲ್ ಕಳೆದುಕೊಂಡ ಹಲವಾರು ಯುವಕರು ಈ ಬಗ್ಗೆ ಸುದ್ದಿ ತಿಳಿದು ತಮ್ಮ ಸೈಕಲ್ ಹಾಗೂ ಬೈಕ್ ಯಾವುದೆಂದು ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರುಗಳಲ್ಲಿ 3 ಕೋಟಿಗೂ ಅಧಿಕ ನಗದು ಪತ್ತೆ: ನಾಲ್ವರ ಬಂಧನ