ETV Bharat / state

ಕೊರೊನಾ ಭೀತಿಯ ನಡುವೆಯೂ ನಿಜ ನಾಗರನಿಗೆ ಪೂಜೆ ಸಲ್ಲಿಸಿದ ಶಿರಸಿಯ ಜನ - Real snake worship in shirasi

ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಇವರು ಅನುಸರಿಸಿ ಪೂಜೆ ಮಾಡುತ್ತಿದ್ದಾರೆ. ಪ್ರಶಾಂತ್ ಪತ್ನಿ, ಮಗಳು ಹಾಗೂ ಮಗ ಕೂಡ ನಿಜ ಹಾವನ್ನ ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ್ಯಕರ..

real-snake-worshiped-by-devotees-in-shirasi
ನಿಜ ನಾಗರನಿಗೆ ಪೂಜೆ
author img

By

Published : Aug 13, 2021, 3:36 PM IST

ಶಿರಸಿ : ನಾಗರ ಪಂಚಮಿ ಹಿನ್ನೆಲೆಯಲ್ಲಿ ತಾಲೂಕಿನ ಉರಗ ಪ್ರೇಮಿಯೊಬ್ಬರು ನೈಜ ನಾಗರಹಾವಿಗೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ. ಭುಸುಗುಟ್ಟುವ ನಾಗರ ಹಾವಿನ ಆರ್ಭಟಕ್ಕೆ ಭಯಪಡದೇ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಉರಗ ಲೋಕದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಇವರದ್ದಾಗಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ಬಾರಿ ಕೂಡ ನಿಜ ನಾಗರಕ್ಕೆ ಹಾಲೆರೆದು ಪಂಚಮಿ ಪೂಜೆ ಆಚರಿಸಿದರು.

ಉರಗ ತಜ್ಞ ಪ್ರಶಾಂತ ಹುಲೆಕಲ್

ಪ್ರತಿ ವರ್ಷ ಒಂದು ನಾಗರಹಾವನ್ನ ಪೂಜೆ ಮಾಡುತ್ತಿದ್ದ ಪ್ರಶಾಂತ್ ಕುಟುಂಬ, ಈ ಬಾರಿ ಎರಡು ನಾಗರಹಾವುಗಳನ್ನ ತಂದು ಪೂಜೆ ಸಲ್ಲಿಸಿದ್ದಾರೆ. ಕಳೆದ 35 ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ತೋರುತ್ತ ಬಂದಿರುವುದು ಇವರ ಹೆಗ್ಗಳಿಕೆ.

ಕುಟುಂಬದ ಹಿರಿಯ ಸುರೇಶಣ್ಣ ಹಾವಿನ ಕಡಿತದಿಂದ ಮರಣ ಹೊಂದಿದ್ದಾರೆ. ಇದರ ನಂತರ ಅವರ ಮಕ್ಕಳಾದ ಪ್ರಶಾಂತ್, ಪ್ರಕಾಶ್ ಹಾಗೂ ಪ್ರಣವ್ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ.

ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಇವರು ಅನುಸರಿಸಿ ಪೂಜೆ ಮಾಡುತ್ತಿದ್ದಾರೆ. ಪ್ರಶಾಂತ್ ಪತ್ನಿ, ಮಗಳು ಹಾಗೂ ಮಗ ಕೂಡ ನಿಜ ಹಾವನ್ನ ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ್ಯಕರ.

ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ : ಮನೆಯ ಸದಸ್ಯರೆಲ್ಲ ಸೇರಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ನಾಗರಪಂಚಮಿ ಆಚರಿಸುತ್ತಾರೆ. ಹುಲೇಕಲ್ ಕುಟುಂಬದ ಪ್ರಶಾಂತ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಾವುಗಳನ್ನು ಹಾಗೂ ಅಪಾಯದಲ್ಲಿರುವ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಿ, ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ದೌಡಾಯಿಸಿ ಎಂತಹ ಘಟಸರ್ಪವನ್ನಾದರೂ ಸರಾಗವಾಗಿ ಚೀಲದಲ್ಲಿ ತುಂಬಿ ಕಾಡಿಗೆ ಮರಳಿಸುತ್ತಾರೆ.

ಅರಣ್ಯ ಇಲಾಖೆಯವರೂ ಹೆಚ್ಚಾಗಿ ಹಾವಿನ ರಕ್ಷಣೆ ಸನ್ನಿವೇಶ ಎದುರಾದರೆ ನೆನಪಿಸಿಕೊಳ್ಳುವುದು ಪ್ರಶಾಂತ ಅವರನ್ನೇ.. ಕೆಲವು ವರ್ಷದಿಂದಲೂ ಕಾಡಿಗೆ ಹೋಗಿ ಹಾವು ಹಿಡಿದು ಪೂಜೆ ಸಲ್ಲಿಸುತ್ತ ಬರುತ್ತಿದ್ದ ಪ್ರಶಾಂತ್ ಕುಟುಂಬ, ಇದೀಗ ಮನೆಯಲ್ಲೇ ಹಾವು ತಂದು ಪೂಜೆ ಮಾಡಿದ್ದಾರೆ. ಅಲ್ಲದೆ ನಿಜ ನಾಗನಿಗೆ ಪೂಜೆ ಮಾಡೋದನ್ನ ಕಂಡು ಸ್ಥಳೀಕರು ಕೂಡ ಸಂತೋಷ ಪಟ್ಟಿದ್ದಾರೆ. ಸಾಮಾನ್ಯವಾಗಿ ಕಲ್ಲಿನ ಹಾವಿನ ಪೂರ್ತಿಗೆ ಪೂಜೆ ಸಲ್ಲಿಸುತ್ತಿದ್ದ ಸಾರ್ವಜನಿಕರು ನಿಜ ನಾಗನಿಗೆ ಪೂಜೆ ಸಲ್ಲಿಸಿ ಸಂತೋಷ ಪಟ್ಟಿದ್ದಾರೆ.

ಓದಿ: ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದ ಸಚಿವರು: ಕೋವಿಡ್ ನಿಯಮ ಉಲ್ಲಂಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.