ETV Bharat / state

ಭಟ್ಕಳದಲ್ಲಿ ಹೊರಗೆ ಬಂದ್ರೆ ಲಾಠಿ ಏಟು... ಮತ್ತೆ ಕಾರ್ಯಾಚರಣೆಗಿಳಿದ ಪೊಲೀಸರು

ಸಂಶುದ್ದೀನ್​ ಸರ್ಕಲ್, ತಾಲೂಕು ಪಂಚಾಯತ್ ಎದುರು ಸೇರಿದಂತೆ ಭಟ್ಕಳ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ಮಾಡುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳನ್ನು ತಡೆದು ವಿಚಾರಣೆ ಮಾಡಲಾಗುತ್ತಿದೆ. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಕೆಲವರ ಮೇಲೆ ಲಾಠಿ ಪ್ರಯೋಗವೂ ಕೂಡ ನಡೆದಿದೆ.

Re-operation police in Bhatkal
ಮತ್ತೆ ಕಾರ್ಯಾಚರಣೆಗಿಳಿದ ಪೊಲೀಸರು
author img

By

Published : May 28, 2020, 12:08 PM IST

ಭಟ್ಕಳ: ನಾಲ್ಕನೇ ಹಂತದ ಲಾಕ್​ಡೌನ್ ಕೊಂಚ ಮಟ್ಟಿಗೆ ಸಡಿಲವಾದ ಕಾರಣ ಜನರು ಹಲವು ದಿನಗಳಿಂದ ಸ್ಥಗಿತವಾಗಿದ್ದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಪೇಟೆ ಕಡೆ ಮುಖ ಮಾಡಿದ್ದರು. ಆದರೆ ಏಕಾಏಕಿ ಕಾರ್ಯಾಚರಣೆಗಿಳಿದ ಪೊಲೀಸರು ಮತ್ತೆ ತಮ್ಮ ಲಾಠಿಗೆ ಕೆಲಸ ಕೊಡಲು ಶುರು ಮಾಡಿದ್ದಾರೆ.

ಮತ್ತೆ ಕಾರ್ಯಾಚರಣೆಗಿಳಿದ ಪೊಲೀಸರು

ಸಂಶುದ್ದೀನ್​ ಸರ್ಕಲ್, ತಾಲೂಕು ಪಂಚಾಯತ್ ಎದುರು ಸೇರಿದಂತೆ ಭಟ್ಕಳ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ಮಾಡುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳನ್ನು ತಡೆದು ವಿಚಾರಣೆ ಮಾಡಲಾಗುತ್ತಿದೆ. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಕೆಲವರ ಮೇಲೆ ಲಾಠಿ ಪ್ರಯೋಗವೂ ಕೂಡ ನಡೆದಿದೆ.

ಭಟ್ಕಳದಲ್ಲಿ ಲಾಕ್​ಡೌನ್ 4.0 ಕೂಡ ಅತ್ಯಂತ ಕಠಿಣವಾಗಿ ಜಾರಿಗೆ ತರಲಾಗಿದೆ. ಆದರೆ ಭಟ್ಕಳದ ಹೊರಗಿನ ಪರಿಸ್ಥಿತಿ ಕೊಂಚ ಮಟ್ಟಿಗೆ ಸಹಜವಾಗಿದ್ದು, ಭಟ್ಕಳದಲ್ಲಿ ಮಾತ್ರ ಕಠಿಣ ನಿಲುವು ತಳೆಯುತ್ತಿರುವುದೇಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಂದು ಕಡೆ ಕೋವಿಡ್-19 ಸೋಂಕು ಭಟ್ಕಳದಲ್ಲಿ ಸಮುದಾಯ ಹಂತಕ್ಕೆ ತಲುಪಿಲ್ಲ ಎನ್ನುತ್ತಿರುವ ಜಿಲ್ಲಾಡಳಿತ, ಮತ್ತೊಂದು ಕಡೆ ಇದ್ದಕ್ಕಿದ್ದಂತೆ ಲಾಕ್​​ಡೌನ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.