ETV Bharat / state

ಕಾರ್ಗಿಲ್ ಯುದ್ಧದ ಸ್ಮರಣೆ: 3 ಗುಂಡು ತಲೆಗೆ ಹೊಕ್ಕರೂ ಶತ್ರುಗಳನ್ನು ಬೇಟೆಯಾಡಿದ್ದ ಕಾರವಾರದ ಯೋಧ!

ಪಾಕ್‌ ಸೈನಿಕರು ವಶಪಡಿಸಿಕೊಂಡಿದ್ದ ಕಾರ್ಗಿಲ್‌ ಪ್ರದೇಶವನ್ನು ಭಾರತೀಯ ಯೋಧರು ಮರುವಶಪಡಿಸಿಕೊಂಡು ಗೆದ್ದು ಬೀಗಿದ ದಿನವಿದು. ಅವರ ಪ್ರಾಣತ್ಯಾಗ, ಕೆಚ್ಚೆದೆಯ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ. ಸಂಭ್ರಮದ ಈ ದಿನಕ್ಕೆ ಇಂದಿಗೆ 20 ವರ್ಷ. ಈ ಯದ್ಧದಲ್ಲಿ ತಲೆಗೆ ಮೂರು ಗುಂಡುಗಳು ಹೊಕ್ಕರೂ ವೈರಿಗಳನ್ನು ಸದೆಬಡಿದ ಕಾರವಾರ ಯೋಧನ ಪರಾಕ್ರಮದ ಸ್ಟೋರಿ ಇಲ್ಲಿದೆ...

author img

By

Published : Jul 26, 2019, 7:54 AM IST

ಮಾಕಾಂತ ಮುಕುಂದ ಸಾವಂತ್​

ಕಾರವಾರ: ಅವರು ದೇಶದ ಹೆಮ್ಮೆಯ ಪುತ್ರ. 1999ರಲ್ಲಿ ಪಾಪಿ ಪಾಕಿಸ್ತಾನದ ವಶವಾಗುತ್ತಿದ್ದ ಕಾರ್ಗಿಲ್ ಪ್ರದೇಶದ ಉಳಿಸಿಕೊಳ್ಳಲು ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಡಿದ ಧೀರ. ಮೂರು ಗುಂಡುಗಳು ತಲೆಗೆ ಹೊಕ್ಕರೂ ತಂಡದೊಂದಿಗೆ ಮೂವರು ಶತ್ರುಗಳನ್ನು ಹೊಡೆದುರುಳಿಸಿದ ಅವರು ಕಾರ್ಗಿಲ್ ಯುದ್ಧದ ವೇಳೆ ಸಾವನ್ನೇ ಗೆದ್ದು ಬಂದ ವೀರ ಯೋಧನ ಕಥೆ ಇದು.

ಹೌದು, ಕಾರವಾರ ತಾಲೂಕಿನ ಮಾಂಡೆಬೋಳದ ರಮಾಕಾಂತ ಮುಕುಂದ ಸಾವಂತ್​ ಅವರು, ಕಾರ್ಗಿಲ್ ಯುದ್ಧದ ವೇಳೆ ಸಾವನ್ನೇ ಗೆದ್ದು ಬಂದ ಪರಾಕ್ರಮಿ. ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯ್​ ದಿವಸ್​​ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಾವಂತ್​ ಅವರಂತಹ ಧೀರ ಪುತ್ರರನ್ನು ದೇಶದ ಜನ ಕೊಂಡಾಡುತ್ತಿದ್ದಾರೆ. ರಮಾಕಾಂತ ಅವರ ಸಾಹಸಗಾಥೆ ದೇಶವೇ ಹೆಮ್ಮೆ ಪಡುವಂತಿದೆ.

ಆ ದಿನದ ಕಾರ್ಯಾಚರಣೆ ಹೀಗಿತ್ತು...!

1983 ರಲ್ಲಿ ಸೇನೆಗೆ ಸೇರಿದ ರಮಾಕಾಂತ್​ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ಇತರ ಕಡೆ ಸೇವೆ ಸಲ್ಲಿಸಿ 1998ರಲ್ಲಿ ಮತ್ತೆ ಕಾರ್ಗಿಲ್​​ಗೆ ಬಂದಿದ್ದರು. ಆದರೆ, ಬಂದ ಮರು ವರ್ಷವೇ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾಗಿತ್ತು. ದಿನವಿಡೀ ಕಾರ್ಯಾಚರಣೆಯಲ್ಲಿರುತ್ತಿದ್ದ ಅವರಿಗೆ ಊಟ, ನಿದ್ರೆ ಸಹ ಇರುತ್ತಿರಲಿಲ್ಲವಂತೆ. ಕೆಲವು ವೇಳೆ ಒಂದೇ ಒಂದು ಬಿಸ್ಕೆಟ್ ಪೊಟ್ಟಣದಲ್ಲಿ ವಾರ ಕಳೆದ ಉದಾಹರಣೆ ಕೂಡ ಇದೆಯಂತೆ.

ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಕಾರವಾದ ಯೋಧ ರಮಾಕಾಂತ ಮುಕುಂದ ಸಾವಂತ್

1999 ಮೇ 21 ರಂದು ಹವಾಲ್ದಾರ್​ ನಾಯಕ್ ಜೊತೆ 13 ಜನ ಸೈನಿಕರು ದೋಢಾ ಜಿಲ್ಲೆಯ ಗುಡ್ಡದಲ್ಲಿ ಐವರು ಉಗ್ರರು ಅಡಗಿರುವ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆಗೆ ಇಳಿದು ಬೆಟ್ಟ ಏರುತ್ತಿದ್ದಂತೆ ಮೂವರನ್ನು ಹೊಡೆದುರುಳಿಸಿದೆವು. ನಾನು ಮುಂದಾಳತ್ವ ತೆಗೆದುಕೊಂಡು ಮುನ್ನುಗ್ಗಿದ್ದೆ. ಆದರೆ, ತಲೆಯಿಂದ ಜಾರಿದ ಹೆಲ್ಮೆಟ್ ಎತ್ತಿಕೊಳ್ಳುವಾಗ ಉಗ್ರರ ಮೂರು ಗುಂಡುಗಳು ತಲೆಗೆ ಹೊಕ್ಕಿದ್ದವು. ಒಂದು ಕ್ಷಣ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ಬಳಿಕ ಅಲ್ಲಿಯೇ ಕುಸಿದು ಬಿದ್ದಿದ್ದೆ ಎಂದು ಅಂದಿನ ಯುದ್ಧದ ಸನ್ನಿವೇಶವನ್ನು ತೆರೆದಿಟ್ಟರು ವೀರ ಯೋಧ ರಮಾಕಾಂತ್​.

ಸಾವನ್ನಪ್ಪಿದ್ದಾರೆಂದು ಕಟ್ಟಿಗೆ ಸಹ ಸಂಗ್ರಹಿಸಿದ್ದರು!

ನನ್ನ ಸ್ಥಿತಿ ನೋಡಿದ ಅಧಿಕಾರಿಗಳು ಕೂಡ ಬದುಕುಳಿಯುವುದು ಕಷ್ಟ ಎಂದು ಶವ ಪೆಟ್ಟಿಗೆ ಸಿದ್ಧಪಡಿಸಿದ್ದರು. ಇತ್ತ ಊರಿನಲ್ಲಿಯೂ ಸಾವನ್ನಪ್ಪಿದ ಸುದ್ದಿ ಹಬ್ಬಿತ್ತು. ಕಟ್ಟಿಗೆ ಸಹ ರೆಡಿ ಮಾಡಿದ್ದರು. ಆದರೆ, ನಾನು ಬದುಕಿದ್ದೆ. ನನಗೆ 21 ದಿನಗಳ ಕಾಲ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ಬಳಿಕ ಎಚ್ಚರವಾದಾಗ ನನ್ನಂತೆಯೇ ಹಲವು ದೊಡ್ಡ ಅಧಿಕಾರಿಗಳು ಹಾಗೂ ಸೈನಿಕರು ಗಾಯಗೊಂಡಿದ್ದರು. ಬಳಿಕ ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಗುಣಮುಖವಾಗಿ ಊರಿಗೆ ಬಂದಾಗ ಅಚ್ಚರಿಯೇ ಎದುರಾಗಿತ್ತು. ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು ಎನ್ನುತ್ತಾರೆ ರಮಾಕಾಂತ್​.

ಇನ್ನು ಮಾಂಡೆಬಾಳ ಗ್ರಾಮದಲ್ಲಿ ಸಾಕಷ್ಟು ಯೋಧರು ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇಂತದರಲ್ಲಿ ಅವರು ದೇಶ ಸೇವೆಯಲ್ಲಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ, ಬಳಿಕ ಬದುಕಿರುವ ಸುದ್ದಿ ತಿಳಿದು ಖುಷಿಯಾಯಿತು. ಇದೀಗ ಆರೋಗ್ಯವಾಗಿದ್ದಾರೆ. ಅಲ್ಲದೆ ಮಾಕಾಂತ್ ಅವರಿಗೆ ಮೂರು ಗುಂಡು ತಾಗಿದರೂ ಸಾವನ್ನೇ ಗೆದ್ದು ಬಂದಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಸ್ಥಳೀಯರು.

ಸೌಲಭ್ಯ ಕಲ್ಪಿಸಲು ಮರೆತ ಸರ್ಕಾರ:

ದೇಶಕ್ಕಾಗಿ ಹೋರಾಡಿದ ನನಗೆ ಸೇನೆಯಿಂದ ಎಲ್ಲವೂ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕಳೆದ ವರ್ಷ ಹೋರಾಟ ಮಾಡಿದ ಫಲವಾಗಿ ಕಾರವಾರದ ಸಾವಂತವಾಡದ ಆರವ್ ಎಂಬಲ್ಲಿ ಒಂದು ಎಕರೆ ಭೂಮಿ ಮಂಜೂರಿ ಮಾಡಲಾಗಿದೆ. ಆದರೆ, ಇದೇ ಜಾಗದಲ್ಲಿ ಇನ್ನೂ ಇಬ್ಬರಿಗೆ ತಲಾ ಒಂದು ಎಕರೆ ನೀಡಿದ್ದು, ಇನ್ನು ಕೂಡ ಗಡಿ ಗುರುತು ಮಾಡಿಕೊಟ್ಟಿಲ್ಲ. ಇದರಿಂದ ಕೊಟ್ಟ ಭೂಮಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ನಮ್ಮದಾಗಿದ್ದು ಕೂಡಲೇ ಈ ಬಗ್ಗೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎನ್ನುತ್ತಾರೆ ರಮಾಕಾಂತ್​.

Intro:(ಹಿಂದಿ ಬೈಟ್ ಕೂಡ ಇದರಲ್ಲಿ ಕಳುಹಿಸಲಾಗಿದೆ.‌ ದಯಮಾಡಿ ವೈಸ್ ಓವರ್ ಕೊಡಲು ಮನವಿ)

ಕಾರವಾರ: ಅವರು ದೇಶದ ಹೆಮ್ಮೆಯ ಪುತ್ರ. ೧೯೯೯ರಲ್ಲಿ ಪಾಪಿ ಪಾಕಿಸ್ತಾನದ ವಶವಾಗುತ್ತಿದ್ದ ಕಾರ್ಗಿಲ್ ರಕ್ಷಣೆಗಾಗಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಡಿದ ಧೀರ. ಮೂರು ಗುಂಡುಗಳು ತಲೆಗೆ ಹೊಕ್ಕರೂ ತಂಡದೊಂದಿಗೆ ಮೂವರು ಶತ್ರುಗಳನ್ನು ಹೊಡೆದುರುಳಿಸಿದ ಅವರು ಕಾರ್ಗಿಲ್ ಯುದ್ಧದ ವೇಳೆ ಸಾವನ್ನೆ ಗೆದ್ದು ಬಂದಿದ್ದು ಈ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು, ಕಾರವಾರ ತಾಲ್ಲೂಕಿನ ಮಾಂಡೆಬೋಳದ ರಮಾಕಾಂತ ಮುಕುಂದ ಸಾವಂತ ಕಾರ್ಗಿಲ್ ಯುದ್ಧದ ವೇಳೆ ಸಾವನ್ನೆ ಗೆದ್ದು ಬಂದ ವೀರ ಯೋಧ. ದೇಶದಾಂದ್ಯಂತ ಇಂದು ೨೦ ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಗುತ್ತಿದೆ. ಇಂತಹ ಗಳಿಗೆಗಾಗಿ ನೂರಾರು ಯೋಧರು ಪ್ರಾಣತ್ತಾಗ ಮಾಡಿದರೆ, ಇನ್ನು ಕೆಲವರು ಕೆಚ್ಚೆದೆಯಿಂದ ಹೋರಾಡಿ ಸಾವನ್ನೆ ಗೆದ್ದು ಬಂದಿದ್ದಾರೆ. ಇಂತಹ ಯೋಧರ ಪೈಕಿ ಕಾರವಾರದ ರಮಾಕಾಂತ ಕೂಡ ಒಬ್ಬರಾಗಿದ್ದು ಅವರ ಸಾಹಸಗಾಥೆ ಕಣ್ಣೀರು ತರಿಸುವಂತಿದೆ.

ಆ ದಿನದ ಕಾರ್ಯಾಚರಣೆ ಹೀಗಿತ್ತು...!
೧೯೮೩ ರಲ್ಲಿ ಸೇನೆಗೆ ಸೇರಿದ್ಧ ರಮಾಕಾಂತ ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್, ಅಂಡಮಾನ್ ನಿಕೋಬಾರ್ ಸೇರಿದಂತೆ ಇತರ ಕಡೆ ಸೇವೆ ಸಲ್ಲಿಸಿ ೧೯೯೮ ರಲ್ಲಿ ಮತ್ತೆ ಕಾರ್ಗಿಲ್ ಗೆ ಬಂದಿದ್ಧರು. ಆದರೆ ಬಂದ ಮರು ವರ್ಷವೇ ಪಾಕಿಸ್ತಾನದ ವಿರುದ್ಧ ಘೋಷಣೆಯಾಗಿತ್ತು. ದಿನವಿಡಿ ಕಾರ್ಯಾಚರಣೆಯಲ್ಲಿರುತ್ತಿದ್ದ ನಮಗೆ ಊಟ ನಿದ್ರೆ ಇರುತ್ತಿರಲಿಲ್ಲ. ಕೆಲವು ವೇಳೆ ಒಂದು ಬಿಸ್ಕೆಟ್ ಪೊಟ್ಟಣದಲ್ಲಿ ವಾರ ಕಳೆದ ಉದಾಹರಣೆ ಕೂಡ ಇದೆ.
ಇಂತಹ ಸಂದರ್ಭದಲ್ಲಿ ೧೯೯೯ರ ಮೇ ೨೧ ರಂದು ಹವಲ್ದಾರ್ ನಾಯಕ್ ಜೊತೆ ೧೩ ಜನ ಸೈನಿಕರು ದೋಢಾ ಜಿಲ್ಲೆಯ ಗುಡ್ಡದಲ್ಲಿ ಐವರು ಉಗ್ರರು ಅಡಗಿರುವ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಬೆಟ್ಟ ಏರುತ್ತಿದ್ಧಂತೆ ಮೂವರನ್ನು ಹೊಡೆದುರುಳಿಸಿದ್ದೇವು. ಆದರೆ ಇನ್ನಿಬ್ಬರು ಗುಡ್ಡದ ಬುಡದಲ್ಲಿದ್ಧ ಮನೆಯಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ತಕ್ಷಣ ಅಲ್ಲಿಗೆ ತೆರಳಿ ಮನೆಯಲ್ಲಿದ್ಧ ಅಜ್ಜಿಯನ್ನು ಕೇಳಿದಾಗ ಯಾರು ಇಲ್ಲ ಎಂದಿದ್ಧಳು. ಬಳಿಕ ಕೊಟ್ಟಿಗೆಯಲ್ಲಿರುವ ಮಾಹಿತಿ ತಿಳಿದು ನಿಧಾನವಾಗಿ ಸುತ್ತುವರಿದಾಗ ಯಾವುದೇ ಶಬ್ದ ಇರಲಿಲ್ಲ. ಅದರಲ್ಲಿ ಮುಂದಿದ್ದ ಹವಲ್ದಾರ್ ಒಳ ಹೋಗುತ್ತಿದ್ದಂತೆ ಹುಲ್ಲಿನಡಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಮೊದಲು ತೆರಳಿದ ಹವಲ್ದಾರ್ ಮೃತಪಟ್ಟು ಎರಡನೇ ತೆರಳಿದ ಯೋಧನ ಕಣ್ಣಿಗೆ ಗುಂಡು ತಾಗಿತ್ತು. ಮೂರನೆವನಾಗಿದ್ದ ನಾನು ಮುಂದಾಳತ್ವ ತೆಗೆದುಕೊಂಡು ಮುನ್ನುಗ್ಗಿದೆ. ಆದರೆ ತಲೆಯಿಂದ ಜಾರಿದ ಹೆಲ್ಮೆಟ್ ಎತ್ತಿಕೊಳ್ಳುವಾಗ ಉಗ್ರರ ಮೂರು ಗುಂಡುಗಳು ತಲೆಗೆ ಹೊಕಿತ್ತು. ಒಂದು ಕ್ಷಣ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ಬಳಿಕ ಅಲ್ಲಿಯೇ ಕುಸಿದು ಬಿದ್ದಿದ್ದೆ ಎನ್ನುತ್ತಾರೆ ವೀರ ಯೋಧ ರಮಾಕಾಂತ.

ಸಾವನ್ನಪ್ಪಿದ್ದಾರೆಂದು ಕಟ್ಟಿಗೆ ಒಟ್ಟು ಮಾಡಿದ್ದರು!
ಆದರೆ ನನ್ನ ಸ್ಥಿತಿ ನೋಡಿ ಅಧಿಕಾರಿಗಳು ಕೂಡ ಬದುಕುಳಿಯುವುದು ಕಷ್ಟ ಎಂದು ಶವ ಪೆಟ್ಟಿಗೆ ಸಿದ್ದಪಡಿಸಿದ್ದರು. ಇತ್ತ ಊರಿನಲ್ಲಿಯೂ ಸಾವನ್ನಪ್ಪಿದ ಸುದ್ದಿ ಕಟ್ಟಿಗೆ ಒಟ್ಟು ಮಾಡಿದ್ದರು. ಆದರೆ ನಾನು ಬದುಕಿದ್ದೆ. ನನಗೆ ೨೧ ದಿನಗಳ ಕಾಲ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ಬಳಿಕ ಎಚ್ಚರವಾದಾಗ ನನ್ನಂತೆಯೇ ಹಲವು ದೊಡ್ಡ ಅಧಿಕಾರಿಗಳು ಹಾಗೂ ಸೈನಿಕರು ಗಾಯಗೊಂಡಿದ್ದರು. ಬಳಿಕ ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಗುಣಮುಖವಾಗಿ ಊರಿಗೆ ಬಂದಾಗ ಅಚ್ಚರಿಯೇ ಎದುರಾಗಿತ್ತು. ಅಭಿನಂದನೆಗಳ ಮಹಾಪುರವೇ ಹರುದುಬಂದಿತ್ತು ಎನ್ನುತ್ತಾರೆ ರಮಾಕಾಂತ.

ಇನ್ನು ಮಾಂಡೆಬಾಳ ಗ್ರಾಮದಲ್ಲಿ ಸಾಕಷ್ಟು ಯೋಧರು ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂತದರಲ್ಲಿ ರಮಾಕಾಂತ ಅವರು ದೇಶಸೇವೆಯಲ್ಲಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ ಬಳಿಕ ಬದುಕಿರುವ ಸುದ್ದಿ ತಿಳಿದು ಖುಷಿಯಾಗಿತ್ತು. ಇದೀಗ ಆರೋಗ್ಯವಾಗಿದ್ದಾರೆ. ಅಲ್ಲದೆ ಮೂರು ಗುಂಡು ತಾಗಿದರು ಸಾವನ್ನೆ ಗೆದ್ದು ರಮಾಕಾಂತ ಸಾವನ್ನೆ ಗೆದ್ದು ಬಂದಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಸ್ಥಳೀಯರಾದ ರವಿ ಕಸಬೇಕರ್.

ಸೌಲಭ್ಯ ಕಲ್ಪಿಸಲು ಮರೆತ ಸರ್ಕಾರ:
ದೇಶಕ್ಕಾಗಿ ಹೋರಾಡಿದ ನನಗೆ ಸೇನೆಯಿಂದ ಎಲ್ಲವೂ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕಳೆದ ವರ್ಷ ಹೋರಾಟ ಮಾಡಿದ ಫಲವಾಗಿ ಕಾರವಾರದ ಸಾವಂತವಾಡದ ಆರವ್ ಎಂಬಲ್ಲಿ ಒಂದು ಎಕರೆ ಮಂಜೂರಿ ಮಾಡಲಾಗಿದೆ. ಆದರೆ ಇದೆ ಜಾಗದಲ್ಲಿ ಇನ್ನು ಇಬ್ಬರಿಗೆ ತಲಾ ಒಂದು ಎಕರೆ ನೀಡಿದ್ದು, ಇನ್ನು ಕೂಡ ಗಡಿಗುರುತು ಮಾಡಿಕೊಟ್ಟಿಲ್ಲ. ಇದರಿಂದ ಕೊಟ್ಟ ಭೂಮಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ನಮ್ಮದಾಗಿದ್ದು ಕೂಡಲೇ ಈ ಬಗ್ಗೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎನ್ನುತ್ತಾರೆ ರಮಾಕಾಂತ.
ಒಟ್ಟಿನಲ್ಲಿ ದೇಶ ಸೇವೆಗಾಗಿ ತಮ್ಮ ಜೀವವನ್ನೆ ಪಣಕಿಟ್ಟು ಬಂದ ರಮಾಕಾಂತ ೨೦೦೦ ರಲ್ಲಿ ನಿವೃತ್ತಿ ಪಡೆದಿದ್ದಾರೆ. ಆದರೆ ಸರ್ಕಾರ ಕೊಟ್ಟಿರುವ ಭರವಸೆಗಳನ್ನು ಈಡೆರಿಸಲು ಮರೆತಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಯೋಧರು ಕ್ರಮವಹಿಸುವ ಅಗತ್ಯವಿದೆ.

ಬೈಟ್ ೧ ರಮಾಕಾಂತ ಸಾವಂತ, ವೀರ ಯೋಧ

ಬೈಟ್ ೨ ರವಿ ಕಸಬೇಕರ್, ಸ್ಥಳೀಯರು

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.