ಕಾರವಾರ(ಉತ್ತರ ಕನ್ನಡ) : ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿರುವ ಕೇಂದ್ರ ಸಚಿವ ರಾಜನಾಥ ಸಿಂಗ್ ಐಎನ್ಎಸ್ ಖಂಡೇರಿ ಸಬ್ ಮೆರಿನ್ ಮೂಲಕ ಇಂದು ಸಮುದ್ರಯಾನ ನಡೆಸಿದರು.
ಅರಗಾದ ಕದಂಬ ನೌಕಾನೆಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಗ್ಗೆ ಯೋಗಾಭ್ಯಾಸದ ಬಳಿಕ ಭಾರತೀಯ ತಂತ್ರಜ್ಞಾನದಿಂದ ನಿರ್ಮಾಣವಾದ ಐಎನ್ಎಸ್ ಖಂಡೇರಿ ಜಲಾಂತರ್ಗಾಮಿ ಮೂಲಕ ಸಮುದ್ರಯಾನ ಕೈಗೊಂಡರು. ಸಮುದ್ರ ವಿಹಾರದ ಸಮಯದಲ್ಲಿ ನೀರೊಳಗಿನ ಡೊಮೇನ್‌ನಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: ವಿಡಿಯೋ: ಕಾರವಾರ ನೌಕಾನೆಲೆ ಸಿಬ್ಬಂದಿಯೊಂದಿಗೆ ರಾಜನಾಥ್ ಸಿಂಗ್ ಯೋಗಾಭ್ಯಾಸ
ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಮುಂಬೈನ ಮಜಗಾನ ಡಾಕ್ಸ್‌ನಲ್ಲಿ ನಿರ್ಮಿಸಲಾದ ಈ ಸಬ್ ಮೆರಿನ್ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೆಯದಾಗಿದೆ. 2019ರಲ್ಲಿ ರಕ್ಷಣಾ ಸಚಿವರಿಂದ ಸೇವೆಗೆ ಐಎನ್‌ಎಸ್ ಖಂಡೇರಿ ಸಬ್ ಮೆರಿನ್ ನಿಯುಕ್ತಿಗೊಂಡಿತ್ತು.