ETV Bharat / state

ವರುಣಾರ್ಭಟ: ಗೋಕರ್ಣದ ಮಹಾಬಲೇಶ್ವರನ ಗರ್ಭಗುಡಿಗೂ ನುಗ್ಗಿದ ನೀರು! - ಗೋಕರ್ಣ ಮಹಾಬಲೇಶ್ವರ ದೇಗುಲ

ಕಳೆದ ಕೆಲ ದಿನಗಳಿಂದ ಉತ್ತರ ಕನ್ನಡದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅದರ ಪರಿಣಾಮ ವಿಶ್ವವಿಖ್ಯಾತ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ತುಂಬಿದೆ.

gokarna mahabaleshwar temple
gokarna mahabaleshwar temple
author img

By

Published : Jul 16, 2021, 1:53 AM IST

Updated : Jul 16, 2021, 6:37 AM IST

ಕಾರವಾರ: ನಾಲಾ ಸ್ವಚ್ಚಗೊಳಿಸುವಲ್ಲಿ ನಿರ್ಲಕ್ಷ್ಯ ಮತ್ತು ಅಸಮರ್ಪಕ ಕಾಮಗಾರಿಯಿಂದಾಗಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿ, ಕೆಲ ಕಾಲ ಪೂಜಾ ವಿಧಿ ವಿಧಾನಕ್ಕೆ ಅಡ್ಡಿಯಾಗಿರುವ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಶ್ರಿ ಕ್ಷೇತ್ರ ಗೋಕರ್ಣದಲ್ಲಿಯೂ ಮಳೆಯಾರ್ಭಟ ಜೋರಾಗಿದೆ. ಮಳೆಯಿಂದಾಗಿ ಇಲ್ಲಿನ ಮಹಾಬಲೇಶ್ವರ ದೇವಾಲಯದ ಗರ್ಭ ಗುಡಿಗೆ ನೀರು ತುಂಬಿ ನಿತ್ಯ ಪೂಜಾ ವಿಧಿ ವಿಧಾನಕ್ಕೆ ಕೆಲಕಾಲ ವಿಳಂಬವಾದ ಘಟನೆ ಕೂಡ ಸಂಭವಿಸಿದೆ.

ಗೋಕರ್ಣದ ಮಹಾಬಲೇಶ್ವರನ ಗರ್ಭಗುಡಿಗೂ ನುಗ್ಗಿದ ನೀರು

ತಕ್ಷಣವೇ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳು ನೀರು ಹೊರಗಡೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿವರ್ಷ ಮಳೆಗಾಲ ಪೂರ್ವದಲ್ಲಿ ದೇವಾಲಯದ ತೀರ್ಥ, ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲಾ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಈ ಕೆಲಸ ಮಾಡಿಲ್ಲ. ಅಲ್ಲದೆ ಗ್ರಾಮ ಪಂಚಾಯತ್ ಈ ನೀರು ಸೇರುವ ಸಂಗಮ ನಾಲಾದಲ್ಲಿ ಮರಳಿನ ಚೀಲವನ್ನು ಅಡ್ಡಲಾಗಿ ಹಾಕಲಾಗಿದ್ದು ಇದರಿಂದ ಹರಿದು ಹೋಗಬೇಕಾಗಿರುವ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿರಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ನಮ್ಮ ಬೆಂಬಲ: ಅಣ್ಣಾಮಲೈ ಘೋಷಣೆ

ಮಂದಿರದಿಂದ ಸಂಗಮ ನಾಲಾಕ್ಕೆ ಸೇರಲು 300 ಮೀಟರ ಅಧಿಕ ಉದ್ದದ ಕಾಲುವೆ ಇದ್ದು, ಈ ಕಾಲುವೆ ಖಾಸಗಿ ಜಮೀನಿನಲ್ಲಿ ಹಾದು ಹೋಗಿದೆ. ಏಳು ಅಡಿ ಆಳವಾದ ಈ ಕಾಲುವೆಗೆ ಎರಡು ಕಡೆ ಕಟ್ಟೆ ( ಪಿಚ್ಚಿಂಗ ) ಕಟ್ಟಲಾಗಿತ್ತು. ಆದರೆ ಬಹು ಪುರಾತನ ಕಾಲುವೆ ಕಟ್ಟಿದ ಕಟ್ಟೆ ಹಲವೆಡೆ ಕುಸಿದು ಬಿದ್ದಿದ್ದು, ಚಿಕ್ಕ ಜಾಗದಲ್ಲಿ ನೀರು ಹೋಗುತ್ತಿದೆ. ಇದನ್ನು ತೆರವುಗೊಳಿಸಿ, ಹೊಸದಾಗಿ ಕಾಲುವೆಯ ಅಂಚನ್ನು ಕಟ್ಟಿದ್ದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬುದು ಇಲ್ಲಿನ ಸ್ಥಳೀಯ ಪುರೋಹಿತರ ಅಭಿಪ್ರಾಯವಾಗಿದೆ.

Last Updated : Jul 16, 2021, 6:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.