ETV Bharat / state

ರಾಜ್ಯಾದ್ಯಂತ ವರುಣಾರ್ಭಟ : ಮಳೆಗೆ ಧರೆಗುರುಳಿದ ಮರ, ಬ್ಯಾರೇಜ್ ಒಡೆದು ಹೊಲಕ್ಕೆ ನುಗ್ಗಿದ ನೀರು

ಮೈಸೂರು ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಮಳೆಗೆ ವಿದ್ಯುತ್ ಕಂಬ ಹಾಗೂ ಮರ ರಸ್ತೆ ಮಧ್ಯೆದಲ್ಲಿಯೇ ಉರುಳಿ ಬಿದ್ದಿವೆ. ಮೈಸೂರಿನ ಜಿಲ್ಲಾ ವರಿಷ್ಠಾಧಿಕಾರಿ ನಿವಾಸದ ಸಮೀಪವೇ ಈ ಘಟನೆ ನಡೆದಿದೆ..

ರಾಜ್ಯಾದ್ಯಂತ ವರುಣಾರ್ಭಟ
ರಾಜ್ಯಾದ್ಯಂತ ವರುಣಾರ್ಭಟ
author img

By

Published : Jul 18, 2021, 4:33 PM IST

ಕೊಪ್ಪಳ/ಮೈಸೂರು : ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ವರುಣ ಕೆಲವೆಡೆ ಅವಾಂತರ ಸೃಷ್ಟಿಸಿದ್ದಾನೆ. ಕೊಪ್ಪಳದಲ್ಲಿ ಬ್ಯಾರೇಜ್ ಒಡೆದು ಹೋಗಿದ್ದು, ಮೈಸೂರಿನಲ್ಲಿ ವಿದ್ಯುತ್ ಕಂಬ ಹಾಗೂ ಮರ ಧರೆಗುರುಳಿವೆ.

ನಿನ್ನೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಕೊಪ್ಪಳ ತಾಲೂಕಿನ ಡೊಂಬ್ರಳ್ಳಿ ಗ್ರಾಮದ ಬಳಿಯ ಬ್ಯಾರೇಜ್​ನ ಒಂದು ಭಾಗ ಒಡೆದು ಹೋಗಿದೆ. ಡೊಂಬ್ರಳ್ಳಿ ಹಾಗೂ ಗೊಂಡಬಾಳ‌ ನಡುವೆ ಇರುವ ಹಿರೇಹಳ್ಳದಲ್ಲಿ ಈ ಬ್ಯಾರೇಜ್ ನಿರ್ಮಿಸಲಾಗಿದೆ. ನೀರಿನ ರಭಸಕ್ಕೆ ಬ್ಯಾರೇಜ್​ನ ಒಂದು ಭಾಗ ಒಡೆದು ಹೋಗಿದ್ದು, ರೈತರ ಹೊಲಕ್ಕೆ ನೀರು ನುಗ್ಗಿದೆ.

ರಾಜ್ಯಾದ್ಯಂತ ವರುಣಾರ್ಭಟ

ಮೈಸೂರು ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಮಳೆಗೆ ವಿದ್ಯುತ್ ಕಂಬ ಹಾಗೂ ಮರ ರಸ್ತೆ ಮಧ್ಯೆದಲ್ಲಿಯೇ ಉರುಳಿ ಬಿದ್ದಿವೆ. ಮೈಸೂರಿನ ಜಿಲ್ಲಾ ವರಿಷ್ಠಾಧಿಕಾರಿ ನಿವಾಸದ ಸಮೀಪವೇ ಈ ಘಟನೆ ನಡೆದಿದೆ.

ಗಾಯಿತ್ರಿಪುರಂ-ನಜರ್ ಬಾದ್ ರಸ್ತೆಯಲ್ಲಿ ಮಳೆಗೆ ವಿದ್ಯುತ್ ಕಂಬ ಹಾಗೂ ಮರ ಬಿದ್ದಿದ್ದರಿಂದ, ಕೂಡಲೇ ಸಾರ್ವಜನಿಕರು ಚೆಸ್ಕಾಂ ಕಚೇರಿಗೆ ಕರೆ ಮಾಡಿದ್ದಾರೆ. ‌ಸ್ಥಳಕ್ಕಾಗಮಿಸಿದ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಲ್ಲದೇ ರಸ್ತೆಯ ಒಂದು ಭಾಗದಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.