ಕಾರವಾರ: ಜಿಲ್ಲೆಯ ಕೋವಿಡ್ ಸೇನಾನಿಗಳಿಗೆ ಅನುಕೂಲ ಕಲ್ಪಿಸಲು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ 5 ಸಾವಿರ ಮಾಸ್ಕ್, 25 ಸಾವಿರ ಜಿಂಕ್ ಮಾತ್ರೆಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಡಳಿತದ ಕೋರಿಕೆ ಮೇರೆಗೆ 50 ಆಕ್ಸಿಜನ್ ಜಂಬೋ ಸಿಲಿಂಡರ್ ಒದಗಿಸಿರುವ ಶಾಸಕರು, ಇನ್ನೂ 50 ಸಿಲಿಂಡರ್ಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. 1,500 ವಿಪಿಇ ಕಿಟ್ಗಳನ್ನು ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ಹಸ್ತಾಂತರಿಸಿದ್ದು ಇದೀಗ ಮತ್ತಷ್ಟು ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎನ್ನುತ್ತಾರೆ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಜಿಲ್ಲಾಧ್ಯಕ್ಷ ಮಾಧವ ನಾಯಕ.
ಇದನ್ನೂ ಓದಿ: ಜುಲೈ ತಿಂಗಳಲ್ಲಿ ಐಟಿ ಕಚೇರಿಗಳು ತೆರೆಯೋದು ಡೌಟ್: ಇದೇ ಉದ್ಯಮವನ್ನು ನಂಬಿದವರ ಕತೆ ಏನು..?