ಭಟ್ಕಳ : ಭಾರಿ ಮಳೆ ಗಾಳಿಗೆ ಸಮುದ್ರದ ಮಧ್ಯದಲ್ಲಿ ಸಿಲುಕಿ ರಕ್ಷಣೆಗೆ ಮೊರೆಯಿಟ್ಟ ಮೀನುಗಾರರನ್ನು ಇನ್ನೊಂದು ಮೀನುಗಾರಿಕೆಗೆ ತೆರಳಿದ ತಂಡ ಅಪಾಯದಲ್ಲಿರುವ ಮೀನುಗಾರರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿ ದಡಕ್ಕೆ ಕರೆ ತಂದು ಬಿಟ್ಟ ಘಟನೆ ನಡೆಸಿದೆ.
![Protection of four fishermen who are in danger](https://etvbharatimages.akamaized.net/etvbharat/prod-images/kn-bkl-01-engine-in-the-deep-sea-the-four-fishermen-in-dangerwere-defense-kac-10002_20092020185810_2009f_1600608490_178.jpg)
ಭಾನವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಮಾದೇವ ತಿಮ್ಮಪ್ಪ ಮೊಗೇರ ಅಳ್ವೆಕೋಡಿ ಭಟ್ಕಳ ಇವರ ಮಾಲೀಕತ್ವದ ಗಿಲ್ನೇಟ್ ದೋಣಿ ನಂ IND KA-04 MO-2631 ರ ಮೂಲಕ ಬೆಳಗಿನಜಾವ 05 ಗಂಟೆಗೆ 4 ಜನ ಮೀನುಗಾರು ಸೇರಿಕೊಂಡು ಅಳ್ವೆಕೋಡಿ ಬಂದರು ಮೂಲಕ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು.
ಮುಂಜಾನೆಯಿಂದ ಶುರುವಾದ ಭಾರಿ ಗಾಳಿ ಮಳೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಿ ದೋಣಿ ತೀರಕ್ಕೆ ಬರಲಾಗದೆ ಸಮುದ್ರದ ನಡುವೆ ಇರುವ ಕಾಗೆ ಗುಡ್ಡದ ಹತ್ತಿರ ಇರುವ ಬಗ್ಗೆ ತಿಳಿದುಬಂದಿರುತ್ತದೆ.
ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರು ದೂರವಾಣಿ ಮೂಲಕ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಕೇಳಿಕೊಂಡಿರುತ್ತಾರೆ. ಅದರಂತೆ ಈ ಮೀನುಗಾರರ ಕುಟುಂಬದವರು ಮೀನುಗಾರಿಕಾ ಇಲಾಖೆಗೆ ಸಂಕಷ್ಟದಲ್ಲಿರುವ ನಮ್ಮವರನ್ನು ರಕ್ಷಿಸಿ ದಡಕ್ಕೆ ಕರೆತರುವಂತೆ ತಿಳಿಸಿದ್ದಾರೆ.
ಈ ಸುದ್ದಿ ತಿಳಿದ ಮೀನುಗಾರಿಕೆಗೆ ತೆರಳಿದ ಇನ್ನೊಂದ ತಂಡ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ.