ಶಿರಸಿ: ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಶಿರ್ಲೆ ಫಾಲ್ಸ್ಗೆ ಪ್ರವಾಸಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ್ದ 6 ಜನರನ್ನು ರಕ್ಷಿಸಲಾಗಿದೆ.
ಹುಬ್ಬಳ್ಳಿಯಿಂದ 10 ಜನರ ತಂಡ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಸಿರ್ಲೆ ಫಾಲ್ಸ್ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಪ್ರವಾಹದಿಂದ ಫಾಲ್ಸ್ನಲ್ಲಿ ನೀರು ಹೆಚ್ಚಾಗಿ ಮಧ್ಯದಲ್ಲಿ ಸಿಲುಕೊಂಡಿದ್ದರು. ಇಡೀ ರಾತ್ರಿ 6 ಜನರು ನೀರಲ್ಲೇ ಸಿಲುಕಿದ್ದರು.
ಯಲ್ಲಾಪುರದ ಅಗ್ನಿಶಾಮಕ ಅಧಿಕಾರಿ ಟಿ.ಎನ್. ಗೊಂಡ ನೇತೃತ್ವದಲ್ಲಿ ವಿನೋದ್ ಕಿಂದಾಳ್ಕರ್, ಜೋಗಿ, ರಮೇಶ್ ಬಿರಾದಾರ್ ತಂಡವೂ ಸ್ಥಳಕ್ಕಾಗಮಿಸಿ ಮರದ ಸಂಕವನ್ನು ನಿರ್ಮಾಣ ಮಾಡಿ, ಎಲ್ಲರನ್ನೂ ರಕ್ಷಿಸಿದ್ದಾರೆ.
ಹುಬ್ಬಳ್ಳಿ ಮೂಲದ ನವೀನ್ ರೇವಣ್ಕರ್ , ಆನಂದ್ ಕೋರಿ, ಬಸು, ಆರತಿ, ಪ್ರಸಾದ್ ಕಾಮತ್, ಯಲ್ಲಾಪುರದ ರಾಮಕೃಷ್ಣ ಭಟ್ ರಕ್ಷಿಸಲ್ಪಟ್ಟವರು. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.