ETV Bharat / state

Traffic Rules ಉಲ್ಲಂಘಿಸುವವರಿಗೆ ಕಾದಿದೆ ಗ್ರಹಚಾರ; ಪೊಲೀಸ್ ಇಲ್ಲದಿದ್ರು ಮನೆ ಬಾಗಿಲಿಗೆ ಬರುತ್ತೆ ನೋಟಿಸ್​ - CC camera install in uttarakannada

ರಸ್ತೆಗಳಲ್ಲಿ ಟ್ರಾಫಿಕ್​ ಪೊಲೀಸರು ಇಲ್ಲ ಎಂದು ಬಿಂದಾಸ್ ಸಂಚರಿಸುವ ವಾಹನ ಸವಾರರಿಗೆ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಹೆಲ್ಮೆಟ್ ಧರಿಸದೆ ಓಡಾಡುವ, ನೋ ಪಾರ್ಕಿಂಗ್‌ನಲ್ಲಿ ನಿಲ್ಲುವ ವಾಹನಗಳ ಫೋಟೋ ತೆಗೆಯಲಾಗುತ್ತದೆ. ನಂತರ ವಾಹನ ಮಾಲೀಕರ ಮನೆಗೆ ನೇರವಾಗಿ ನೋಟಿಸ್​ನ್ನು ಕಳುಹಿಸಲಾಗುತ್ತದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

cc-camera
ವೈರ್​ಲೆಸ್​ PTZ ಕ್ಯಾಮೆರಾ
author img

By

Published : Sep 9, 2021, 3:39 PM IST

Updated : Sep 9, 2021, 4:24 PM IST

ಕಾರವಾರ: ಪೊಲೀಸರು ಎಷ್ಟೇ ಜಾಗೃತರಾಗಿದ್ದರೂ ಟ್ರಾಫಿಕ್ ನಿಯಮಗಳನ್ನ ಪಾಲಿಸದೆ ಓಡಾಡುಡುವ ಜನರನ್ನು ತಪ್ಪಿಸೋಕೆ ಸಾಧ್ಯವಾಗುವುದಿಲ್ಲ. ಹಾಗಂತ ಎಷ್ಟೇ ಸಿಬ್ಬಂದಿ ಇದ್ರೂ ವಾಹನ ಸವಾರರನ್ನ ನಿಯಂತ್ರಣದಲ್ಲಿಡೋದು ಸುಲಭದ ಕೆಲಸವಲ್ಲ. ಹೀಗಾಗಿ, ಉತ್ತರಕನ್ನಡ ಪೊಲೀಸ್ ಇಲಾಖೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್​ ದೇವರಾಜು ಮಾತನಾಡಿದರು

ನಗರದಲ್ಲಿ ಉಂಟಾಗಿದ್ದ ಟ್ರಾಫಿಕ್ ಕಿರಿಕಿರಿಯನ್ನ ನಿಯಂತ್ರಿಸೋದಕ್ಕೆ ಪೊಲೀಸ್ ಇಲಾಖೆ ವಿನೂತನ ಪ್ಲಾನ್ ಮಾಡಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಸಂಚಾರ ನಿರ್ವಹಣಾ ಕೇಂದ್ರವನ್ನ ಪ್ರಾರಂಭಿಸಿದೆ. ಬೆಂಗಳೂರು ನಗರದ ಮಾದರಿಯ ರೀತಿಯಲ್ಲಿಯೇ ತಾಲೂಕಿನಲ್ಲೂ 360 ಡಿಗ್ರಿಯಲ್ಲಿ ತಿರುಗುವ ವೈರ್​ಲೆಸ್​ PTZ ಕ್ಯಾಮರಾಗಳನ್ನ ಅಳವಡಿಸಿದೆ.

ನಗರದಲ್ಲಿ ಪ್ರತಿನಿತ್ಯ ಹೆಚ್ಚು ವಾಹನ ದಟ್ಟಣೆ ಇರುವ ಸುಭಾಷ್ ವೃತ್ತ, ಸವಿತಾ ಸರ್ಕಲ್, ಶಿವಾಜಿ ಸರ್ಕಲ್ ಹಾಗೂ ಹೂವಿನ ಚೌಕದಲ್ಲಿ ಅತ್ಯಾಧುನಿಕ ಮಾದರಿಯ 4 ಹೆಚ್.ಡಿ ಸಿಸಿಕ್ಯಾಮರಾಗಳನ್ನ ಹಾಕಲಾಗಿದೆ. ಇದರೊಂದಿಗೆ ಮೈಕ್ ವ್ಯವಸ್ಥೆ ಸಹ ಇದೆ. ಹೀಗಾಗಿ, ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನಗಳನ್ನ ಸಿಸಿಕ್ಯಾಮರಾದಲ್ಲಿ ವೀಕ್ಷಿಸಿ ಕೂಡಲೇ ಮೈಕ್ ಮೂಲಕ ಸವಾರರಿಗೆ ಎಚ್ಚರಿಕೆಯನ್ನ ನೀಡಲಾಗುತ್ತದೆ.

ಹೆಲ್ಮೆಟ್ ಧರಿಸದೆ ಓಡಾಡುವ, ನೋ ಪಾರ್ಕಿಂಗ್‌ನಲ್ಲಿ ನಿಲ್ಲುವ ವಾಹನಗಳ ಫೋಟೋ ತೆಗೆಯಲಾಗುತ್ತದೆ. ನಂತರ ವಾಹನ ಮಾಲೀಕರ ಮನೆಗೆ ನೇರವಾಗಿ ನೋಟಿಸ್​ನ್ನು ಕಳುಹಿಸಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ನಗರಸಭೆ ವತಿಯಿಂದ 23 ಸಿಸಿಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಅವುಗಳನ್ನ ಸಹ ಸಂಚಾರ ನಿರ್ವಹಣಾ ಕೇಂದ್ರದಿಂದಲೇ ವೀಕ್ಷಣೆ ಮಾಡಬಹುದಾಗಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ನಡೆಯಬಹುದಾದ ಕಳ್ಳತನ, ದರೋಡೆಯಂತಹ ಅಪರಾಧ ಪ್ರಕರಣಗಳ ಪತ್ತೆಗೂ ಸಹ ಸಹಕಾರಿಯಾಗಲಿದೆ ಎಂದಿದ್ದಾರೆ.

ಜಿಲ್ಲಾ ಪೊಲೀಸ್​ ಇಲಾಖೆಯಿಂದ ಕೈಗೊಂಡಿರುವ ಸಿಸಿ ಕ್ಯಾಮರಾ ವ್ಯವಸ್ಥೆ ಉತ್ತಮವಾಗಿದೆ. ಇದರಿಂದ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನ ಪಾಲಿಸುವಂತೆ ಮಾಡಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಇದೇ ರೀತಿಯ ವ್ಯವಸ್ಥೆಯನ್ನ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಓದಿ: 5 ದಿನ ಮಾತ್ರ ಗಣೇಶೋತ್ಸವ ಆಚರಣೆ: ತಮಟೆ ಬಾರಿಸುವವರಿಗೆ ಸಂಕಷ್ಟ

Last Updated : Sep 9, 2021, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.