ಶಿರಸಿ (ಉತ್ತರ ಕನ್ನಡ): ಒಂದೆಡೆ ವೈದ್ಯರು ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಪೊಲೀಸರಿಗೆ ಜನರನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ವೈದ್ಯರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದಲ್ಲದೆ, ವೈರಸ್ ನಿರ್ಮೂಲನೆ ಮಾಡಲು ಕಷ್ಟಪಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಪೊಲೀಸರಿಗೆ ಜನರನ್ನು ಮನೆಯಿಂದ ಹೊರಬಾರದಂತೆ ತಡೆಯುವುದು ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯದ ಬಹುತೇಕ ಕಡೆ ಘೋಷವಾಕ್ಯಗಳ ಮೂಲಕ, ರಸ್ತೆಯಲ್ಲಿ ಪೇಯ್ಟಿಂಗ್ ಮಾಡುವ ಮೂಲಕ , ಸೆಲಬ್ರಿಟಿಗಳ ಮೂಲಕ ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಜನರು ಮಾತ್ರ ಯಾವುದಕ್ಕೂ ಬಗ್ಗುತ್ತಿಲ್ಲ. ಲಾಕ್ ಡೌನ್ ಹಿನ್ನೆಲೆ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬಾರದೆ ಸರ್ಕಾರದ ಆದೇಶ ಪಾಲನೆ ಮಾಡಬೇಕು ಎಂದು ಶಿರಸಿ ಪೊಲೀಸರು ಮನವಿ ಮಾಡಿದ್ದಾರೆ. ನಗರಾದ್ಯಂತ ವಾಹನಗಳನ್ನು ಓಡಿಸಿ ಇಂದು ರೂಟ್ ಮಾರ್ಚ್ ಕೂಡಾ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದರೂ ಸಹ ಸಾರ್ವಜನಿಕರು ಬೇಕಾಬಿಟ್ಟಿ ಓಡಾಡುತ್ತಿರುವ ಕಾರಣ ರೂಟ್ ಮಾರ್ಚ ಮಾಡಿ, ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.