ETV Bharat / state

ಮದ್ಯಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ: ಮೂವರು ಆರೋಪಿಗಳ ಬಂಧನ, ಓರ್ವ ಪರಾರಿ - ಕಾರವಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ನಿನ್ನೆ ರಾತ್ರಿ ಕುಮಟಾ ತಾಲೂಕಿನ ಮಿರ್ಜಾನದ ಎತ್ತಿನಬೈಲ್ ಸಮೀಪ ನಾಲ್ಕು ಜನ ಯುವಕರು ರಸ್ತೆ ಪಕ್ಕದಲ್ಲಿ ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡು ಕೇಳಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಸಹ ನಡೆಸಿದ್ದರು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೂವರು ಆರೋಪಿಗಳ ಬಂಧನ
Police arrested three accused
author img

By

Published : Jan 10, 2021, 5:09 PM IST

ಕಾರವಾರ: ತಡರಾತ್ರಿ ಹೆದ್ದಾರಿ ಬದಿ ಮದ್ಯಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದವರಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಚಿನ್ ಹರಿಕಾಂತ, ವಿಶಾಲ್ ಪುರುಷೋತ್ತ,‌ ಮಂಜುನಾತ್​ ಪಟಗಾರ ಬಂಧಿತ ಆರೋಪಿಗಳು. ಕುಮಟಾ ತಾಲೂಕಿನ ಮಿರ್ಜಾನದ ಎತ್ತಿನಬೈಲ್ ಸಮೀಪ ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೈವೇ ಪ್ಯಾಟ್ರೋಲಿಂಗ್​​​​ನಲ್ಲಿ ಸಿವಿಲ್ ಪೊಲೀಸ್ ಹೆಡ್​​ ಕಾನ್ಸ್​​​ಸ್ಟೇಬಲ್ ನಾಗೇಶ್​​ ನಾಯ್ಕ್​​​ ಹಾಗೂ ಚಾಲಕ ಕಮಲಾಕರ ನಾಯ್ಕ್​​​ ಹೋಗುತ್ತಿದ್ದರು. ಈ ವೇಳೆ ಎತ್ತಿನಬೈಲ್ ಬಳಿ ಈ ನಾಲ್ಕು ಜನ ಯುವಕರು ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡು ಅಲ್ಲಿಗೆ ತೆರಳಿದ ಸಿಬ್ಬಂದಿ, ಮದ್ಯಪಾನ ಮಾಡದಂತೆ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.

ಓದಿ: ಕೌಟುಂಬಿಕ ಕಲಹ ಹಿನ್ನೆಲೆ: ಪತಿಯಿಂದ ಪತ್ನಿಯ ಕೊಲೆ

ಈ ವೇಳೆ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಯುವಕರು, ಹಲ್ಲೆ ನಡೆಸಿ ಸಮವಸ್ತ್ರಗಳನ್ನು ಹರಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ನಾಲ್ವರ ವಿರುದ್ಧ ನಾಗೇಶ್​​​ ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಜಗನ್ನಾಥ್​​ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.