ಭಟ್ಕಳ (ಉತ್ತರಕನ್ನಡ ): ಅಮೆರಿಕದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ 2021ರ 'ಪೀಪಲ್ಸ್ ಚಾಯ್ಸ್' ಪ್ರಶಸ್ತಿಯನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಮುರುಡೇಶ್ವರ ದೇವಾಲಯ ಪಡೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ ಜಗತ್ತಿನ ಒಟ್ಟು 25 ಗ್ಲೋಬಲ್ ಪ್ರಾಜೆಕ್ಟ್ ಸಂಸ್ಥೆಗಳು ಭಾಗವಹಿಸಿದ್ದವು. ಆನ್ಲೈನ್ ಮೂಲಕ 6,871 ಜನರು ಮತ ಚಲಾಯಿಸಿದ್ದರು. ಇದರಲ್ಲಿ 2,500 ಮತ ಪಡೆಯುವ ಮೂಲಕ ಜಗತ್ತಿನ 24 ಗ್ಲೋಬಲ್ ಪ್ರಾಜೆಕ್ಟ್ಗಳನ್ನು ಹಿಂದಿಕ್ಕಿ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯದ ವಿದ್ಯುತ್ ದೀಪ ಅಲಂಕಾರದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇದು ಭಾರತದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇನ್ನು ಜಗತ್ತಿನಾದ್ಯಂತ ಇರುವ ಶಿವನ ಮೂರ್ತಿಗಳಿಗೆ ಹೋಲಿಸಿದರೆ ಮುರುಡೇಶ್ವರದ ಶಿವನ ಮೂರ್ತಿ 2ನೇ ಸ್ಥಾನದಲ್ಲಿದೆ. ಈ ದೇವಾಲಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಬೆಂಗಳೂರಿನ ಸಂಚನಾ ಗುರು ಡಿಸ್ಟ್ರಿಬ್ಯೂಟರ್ಸ್ಗೆ ಈ ವರ್ಷದ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ: ಮಗಳ ಬಾಲ್ಯ ವಿವಾಹ ತಡೆದು ಹೀರೋ ಆದ ಅಪ್ಪ...!