ETV Bharat / state

ರಾಷ್ಟ್ರೀಯ ಹೆದ್ದಾರಿ ಸೆಂಟರ್ ಲೈನ್ ಬದಲಾವಣೆ ಆರೋಪ: ಹೆಚ್ಚುವರಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ಜನ - etv bharat kannada

ಐಆರ್​ಬಿ ಕಂಪನಿ ಕೆಲವೆಡೆ ಸೆಂಟರ್ ಲೈನ್ ಬದಲಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮುಂದಾಗಿದೆ.‌ ಇದರಿಂದ ಈ ಹಿಂದೆ ಸರ್ವೆ ಮಾಡಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಭೂಮಿ ಹೋಗುತ್ತಿದೆ. ಆದರೆ, ಸಂತ್ರಸ್ತರಿಗೆ ಈ ಹಿಂದೆ ನಿಗದಿ ಮಾಡಿದಷ್ಟು ಜಮೀನಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಸೆಂಟರ್ ಲೈನ್ ಬದಲಿಸುವ ಅಧಿಕಾರ ಇಲ್ಲದೇ ಇದ್ದರೂ ಈ ರೀತಿ ಮಾಡಲಾಗುತ್ತಿದ್ದು, ಸರ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

people-worried-about-losing-land-for-national-high-way-project
ರಾಷ್ಟ್ರೀಯ ಹೆದ್ದಾರಿ ಸೆಂಟರ್ ಲೈನ್ ಬದಲಾವಣೆ ಆರೋಪ: ಹೆಚ್ಚುವರಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ಜನ
author img

By

Published : Oct 8, 2022, 10:46 PM IST

ಕಾರವಾರ(ಉತ್ತರ ಕನ್ನಡ): ರಾಜ್ಯದ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳೆಂಟು ವರ್ಷದಿಂದ ಕುಂಟುತ್ತಿದೆ. ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಖಡಕ್ ಸೂಚನೆ ಬೆನ್ನಲ್ಲೇ ಐಆರ್​​ಬಿ ಕಂಪನಿ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಮುಂದಾಗಿದೆ. ಆದರೆ, ಹಿಂದೊಮ್ಮೆ ಸರ್ವೇ ನಡೆಸಿದ್ದರೂ ಇದೀಗ ಮತ್ತೆ ಕಂಪನಿಯವರು ಹೆದ್ದಾರಿಯ ಸೆಂಟರ್ ಲೈನ್ ಬದಲಿಸಿ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಆರೋಪ ಕೇಳಿಬಂದಿದ್ದು, ಹೆದ್ದಾರಿಯಂಚಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ಪನ್ವೇಲ್​ನಿಂದ ಕನ್ಯಾಕುಮಾರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಪಶ್ಚಿಮ‌ ಘಟ್ಟಗಳ ಅಂಚಿನಲ್ಲಿ ಹಾದು ಹೋಗುತ್ತದೆ. ಎಲ್ಲ ಕಡೆ ಬಹುತೇಕ ಕಾಮಗಾರಿ ಮುಕ್ತಾಯವಾಗಿದೆಯಾದರೂ ಕರ್ನಾಟಕದಲ್ಲಿ ಮಾತ್ರ ಕುಂಟುತ್ತ ಸಾಗುತ್ತಿದೆ. ಉತ್ತರಕನ್ನಡದ ಕರಾವಳಿ ಉದ್ದಕ್ಕೂ ಅರೆಬರೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತೀಚೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್​ಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.

ಇದೀಗ ಕಾಮಗಾರಿಗೆ ವೇಗ ನೀಡಲು ಮುಂದಾಗಿರುವ ಐಆರ್​ಬಿ ಕಂಪನಿ ಕೆಲವೆಡೆ ಸೆಂಟರ್ ಲೈನ್ ಬದಲಿಸಿ ಕಾಮಗಾರಿಗೆ ಮುಂದಾಗಿದೆ.‌ ಇದರಿಂದ ಈ ಹಿಂದೆ ಸರ್ವೆ ಮಾಡಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಭೂಮಿ ಹೋಗುತ್ತಿದೆ. ಆದರೆ ಸಂತ್ರಸ್ತರಿಗೆ ಈ ಹಿಂದೆ ನಿಗದಿ ಮಾಡಿದಷ್ಟು ಜಮೀನಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಸೆಂಟರ್ ಲೈನ್ ಬದಲಿಸುವ ಅಧಿಕಾರ ಇಲ್ಲದೇ ಇದ್ದರೂ ಈ ರೀತಿ ಮಾಡಲಾಗುತ್ತಿದ್ದು, ಸರ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸೆಂಟರ್ ಲೈನ್ ಬದಲಾವಣೆ ಆರೋಪ

ಕಾರವಾರದ ಮಾಜಾಳಿಯ ಭಾಗದಲ್ಲಿ ಹೆದ್ದಾರಿಗಾಗಿ ಕೆಲವರ ಮನೆಗಳು ಹಾಗೂ ಜಮೀನುಗಳು ಶೇ 90ರಷ್ಟು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಸ್ವಾಧೀನ ಭೂಮಿಯ ಶೇ. 15ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಪರಿಹಾರ ನೀಡುವ ಕುರಿತು ಜಮೀನು ಮಾಲೀಕರನ್ನು ಕೇಳದೇ ನೇರವಾಗಿ ನ್ಯಾಯಾಲಯಕ್ಕೆ ಠೇವಣಿ ಮಾಡಿದ್ದಾರೆ. ಈ ಬಗ್ಗೆ ಜಮೀನು ಮಾಲೀಕರಿಗೆ ತಿಳಿದು ಕಂಗಲಾಗಿದ್ದಾರೆ.

ಅಧಿಕಾರಿಗಳನ್ನು ಕೇಳಿದರೆ ಅವರ ಲೆಕ್ಕಕ್ಕೂ, ಜಮೀನಿನ ಸ್ವಾಧೀನದ ಲೆಕ್ಕಕ್ಕೂ ತಾಳೆಯಾಗುವುದಿಲ್ಲ. ಅಲ್ಲದೇ ಜಮೀನಿನ ಸ್ವಾಧೀನದ ಅಂಕಿ - ಅಂಶಗಳನ್ನು ಲಿಖಿತವಾಗಿಯೂ ನೀಡುತ್ತಿಲ್ಲ. ಕಳೆದುಕೊಂಡ ಜಮೀನಿಗೆ ತಕ್ಕಂತೆ ಪರಿಹಾರ ಸಿಗದೇ ಮುಂದೇನು ಎನ್ನುವ ಪ್ರೆಶ್ನೆ ಕಾಡುತ್ತಿದೆ. ಮೇಲಿಂದ ಅ. 10ರಂದು ಜೆಸಿಬಿಯೊಂದಿಗೆ ಭೂ ಸ್ವಾಧೀನಕ್ಕೆ ಬರುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಇದಲ್ಲದೇ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ಹೆದ್ದಾರಿಗಾಗಿ 4 ಸಾವಿರಕ್ಕೂ ಹೆಚ್ಚು ಸರ್ವೇ ನಂಬರ್​​ಗಳಲ್ಲಿನ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಬಳಿಕ ಆಯಾ ಸರ್ವೆ ನಂಬರ್​​​​ನಲ್ಲಿ ಉಳಿದ ಜಮಿನುಗಳ ಸರ್ವೆ ಮಾಡಿ ಕೆಡಿಪಿ ಮಾಡಬೇಕಾಗಿತ್ತಾದರೂ ಈವರೆಗೂ ಅದನ್ನು ಮಾಡಿಲ್ಲ. ಒಂದೊಮ್ಮೆ ಸರ್ವೆ ಮಾಡಿ ಗಡಿ ಗುರುತು ಮಾಡದೇ ಇದ್ದಲ್ಲಿ ಮುಂದೆ ಜಮೀನು ವಾರಸುದಾರರಿಗೆ ಸಮಸ್ಯೆಯಾಗಲಿದೆ.‌ ಅಲ್ಲದೇ ಜಮೀನು ಕೊಟ್ಟ ತಪ್ಪಿಗೆ ಸ್ವಂತ ಕರ್ಚಿನಲ್ಲಿ ಇದೆಲ್ಲವನ್ನು ಮಾಡಿಸಬೇಕಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನರಿಕಲ್ಲು ಮಾರಮ್ಮನ ಪವಾಡ: ಈ ಹೆದ್ದಾರಿಯ ಕಲ್ಲು ಪೂಜಿಸಿದ್ರೆ ಮಂಡಿ, ಕೀಲು ನೋವು ಮಾಯ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.