ETV Bharat / state

ಪೂರ್ಣವಾಗದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ: ಗುಡ್ಡ ಕುಸಿತ ಆತಂಕದಲ್ಲಿ ವಾಹನ ಸವಾರರು - ಈಟಿವಿ ಭಾರತ ಕರ್ನಾಟಕ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ​ಗುಡ್ಡ ಕುಸಿತ ಉಂಟಾದರೆ ತಕ್ಷಣವೇ ಜೆಸಿಬಿ ಮೂಲಕ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

people-worried-about-land-slides-in-uttara-kannada
ಪೂರ್ಣವಾಗದ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಕಾಮಗಾರಿ: ಗುಡ್ಡ ಕುಸಿತ ಆತಂಕದಲ್ಲಿ ವಾಹನ ಸಾವರರು..
author img

By

Published : Jun 4, 2023, 6:43 PM IST

Updated : Jun 4, 2023, 8:31 PM IST

ಪೂರ್ಣವಾಗದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ

ಕಾರವಾರ: ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸರಣಿಯನ್ನು ಹೊಂದಿರುವ ವಿಶಿಷ್ಟ ಜಿಲ್ಲೆ. ಕರಾವಳಿ ಹಾಗೂ ಘಟ್ಟದ ಭಾಗಗಳಿಗೆ ಸಂಚರಿಸಲು ಇರುವ ಮೂರ್ನಾಲ್ಕು ರಸ್ತೆಗಳೇ ಪ್ರಮುಖ ಕೊಂಡಿಯಾಗಿದ್ದು, ಇದೀಗ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕಳೆದ ಬಾರಿ ಮಳೆಗಾಲದಲ್ಲಿ ಎದುರಾಗಿದ್ದ ಭೂಕುಸಿತ ಪ್ರಕರಣಗಳು ಇದೀಗ ಮತ್ತೆ ಮರುಕಳಿಸುವ ಸಾಧ್ಯತೆಗಳಿದ್ದು, ಮಳೆ‌ ಜೋರಾಗಿ ಬಂದರೆ ಯಾವಾಗ ರಸ್ತೆಯ ಮೇಲೆ ಗುಡ್ಡ ಕುಸಿದು ಬೀಳುತ್ತೋ ಎಂದು ಸವಾರರು ಭೀತಿಗೊಳಗಾಗುವಂತಾಗಿದೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ.‌ ಅಲ್ಲದೇ, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಹಾಗೆಯೇ ಬಿಡಲಾಗಿದೆ. ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇರಲಿಲ್ಲವಾದರೂ, ಮಳೆಗಾಲದಲ್ಲಿ ಇವು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಹೋರಾಟಗಾರ ಮಂಜುನಾಥ ಗೌಡ ಮಾತನಾಡಿ, ಐಆರ್​ಬಿ ಕಾಮಗಾರಿಯಿಂದ ತುಂಬ ತೊಂದರೆಯಾಗುತ್ತಿದೆ. ಮಳೆಗಾಲ ಆರಂಭಕ್ಕೂ ಮೊದಲು ಮುನ್ನೆಚ್ಚರಿಕೆ ಕ್ರಮಗಳನ್ನು ದಯವಿಟ್ಟು ಈಗಲೇ ತೆಗೆದುಕೊಳ್ಳಬೇಕು. ಹಲವು ಭಾಗಗಳಲ್ಲಿ ಗುಡ್ಡ ಕುಸಿತವಾಗುತ್ತಿದೆ. ಅಪಘಾತ ವಲಯಗಳನ್ನು ಗುರುತಿಸಿ, ಅಲ್ಲೆಲ್ಲ ಸಮೀಕ್ಷೆಯನ್ನು ನಡೆಸಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಅಪಘಾತವಾದ ನಂತರ ಅಲ್ಲಿಗೆ ಅಧಿಕಾರಿಗಳು ಬಂದು ಪರಿಹಾರ ಕೊಡುವುದು ಬೇಡ. ನಮಗೆ ಜನರ ಜೀವದ ರಕ್ಷಣೆಯಾಗಬೇಕು, ಏಕೆಂದರೆ ಜೀವ ಹಾನಿಯಾದ ನಂತರ ಪರಿಹಾರ ಕೇಳುವುದಕ್ಕೆ ಯಾರು ಇಷ್ಟಪಡುವುದಿಲ್ಲ ಎಂದರು.

ಸ್ಥಳೀಯ ರವಿ ಕಸಬೇಕರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಮಳೆಗಾಲ ಎಂದರೆ ಅವಾಂತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಏಳು ವರ್ಷದಿಂದ ಐಆರ್​ಬಿ ಹೆದ್ದಾರಿ ಕಾಮಗಾರಿಯನ್ನು ನಡೆಸುತ್ತಿದೆ. ಆದರೆ ಇನ್ನೂ ಕೂಡ ಕೆಲಸ ಪೂರ್ಣಗೊಂಡಿಲ್ಲ ಮತ್ತು ಮಾಡಿರುವ ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಇದರಿಂದ ಪ್ರತಿ ಮಳೆಗಾಲದಲ್ಲಿಯೂ ಸಹ ಗುಡ್ಡ ಕುಸಿತ ಅವಾಂತರಗಳು ಸೃಷ್ಟಿಯಾಗುತ್ತಿದೆ. ಮಳೆಗಾಲ ಆರಂಭವಾಗಿದ್ದು, ಹೆದ್ದಾರಿ ಕಾಮಗಾರಿಯಿಂದ ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಗುಡ್ಡ ಕುಸಿತದ ಸಾಧ್ಯತೆ ಇರುವ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ನಮ್ಮ ಏಜೆನ್ಸಿಗಳಾದ ಪಿಡಬ್ಲೂಡಿ, ಎನ್​ಹೆಚ್​, ಎನ್​ಹೆಚ್​ಎಐ, ಸೀಬರ್ಡ್ ಮತ್ತು ರೈಲ್ವೆಸ್​ ಜೊತೆ ಸಂಯೋಜನೆಗೊಂಡು ಎಲ್ಲಾದರೂ ​ಗುಡ್ಡ ಕುಸಿತದ ಸಂದರ್ಭ ಉಂಟಾದರೆ ತಕ್ಷಣವೇ ಜೆಸಿಬಿ ಮೂಲಕ ಅದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಗುಡ್ಡ ಕುಸಿತ ಪರಿಸ್ಥಿತಿಯನ್ನು ಎದುರಿಸಲು ತಜ್ಞರು ಸನ್ನದ್ಧರಾಗಿದ್ದಾರೆ ಎಂದರು.

ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲೂ ಹೆದ್ದಾರಿ ಅಗಲೀಕರಣದ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದ್ದು, ಈ ಬಾರಿಯಾದರೂ ಎದುರಾಗಬಹುದಾದ ದೊಡ್ಡ ಗಂಡಾಂತರ ತಪ್ಪಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:ಮುಂದಿನ ಮೂರು ದಿನ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Last Updated : Jun 4, 2023, 8:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.