ಕಾರವಾರ: ಕೊರೊನಾ ಹಾಗೂ ಒಮಿಕ್ರಾನ್ ತಡೆಗೆ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ನಡುವೆಯೂ ಕಾರವಾರದ ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಜನ ಸೇರಿದ್ದರು.
ಶನಿವಾರ ವಾರಾಂತ್ಯದ ಕರ್ಫ್ಯೂಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಆದರೆ ಭಾನುವಾರ ಕಾರವಾರ ನಗರದಲ್ಲಿ ಜನ ಸಂಚಾರ ಸಹಜ ಸ್ಥಿತಿಯಲ್ಲಿದೆ. ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೆ, ಇನ್ನೂ ಕೆಲವು ಅಂಗಡಿಗಳು ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.
ನಗರದ ಮುಖ್ಯ ಮೀನು ಮಾರುಕಟ್ಟೆ ಬಂದ್ ಮಾಡಲಾಗಿದೆ. ಆದರೆ, ಮಾರುಕಟ್ಟೆ ಹೊರಗಡೆ ಮಾರಾಟ ಮಾಡಲಾಗುತ್ತಿದ್ದ ಮೀನಿಗಾಗಿ ಜನ ಮುಗಿಬಿದ್ದಿದ್ದಾರೆ. ಜತೆಗೆ ನಗರದ ಚಿಕನ್, ಮಟನ್ ಅಂಗಡಿಗಳಲ್ಲಿಯೂ ಜನ ಸಾಲುಗಟ್ಟಿ ಖರೀದಿಗೆ ಮುಂದಾಗಿದ್ದಾರೆ.
ನಗರದ ಕೆಲ ಭಾಗಗಳಿಗೆ ಬಸ್ ಸಂಚಾರ ಆರಂಭಿಸಲಾಗಿತ್ತು. ಜನರಿಲ್ಲದ ಕಾರಣ ಬಸ್ ಚಾಲಕರೂ ಕಾಯಬೇಕಾಯಿತು. ಆಟೋ ಸಂಚಾರ ಇದ್ದರೂ ಕೂಡ ಪ್ರಯಾಣಿಕರಿಲ್ಲದೇ, ಚಾಲಕರು ಖಾಲಿ ಕೂರುವ ಸ್ಥಿತಿ ಕಂಡುಬಂತು.
ಇದನ್ನೂ ಓದಿ: Day-2 of weekend curfew.. ಹೀಗಿದೆ ನೋಡಿ ವಿವಿಧ ಜಿಲ್ಲೆಗಳಲ್ಲಿ ಜನರ ಪ್ರತಿಕ್ರಿಯೆ..