ETV Bharat / state

ಕರಾವಳಿಯಲ್ಲಿ ಮರಳುಗಾರಿಕೆ ಬಂದ್​.. ಬೀದಿಗೆ ಬಂದ ಸಾವಿರಾರು ಕುಟುಂಬಗಳು ! - ಕರಾವಳಿಯಲ್ಲಿ ಮರಳುಗಾರಿಕೆ ಬಂದ್​ನಿಂದ ಕೆಲಸ ಕಳೆದುಕೊಂಡ ಕಾರ್ಮಿಕರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಪ್ರದೇಶ ಬಿಟ್ಟು ಬೇರೆ ಯಾವ ತಾಲೂಕಿನಲ್ಲೂ ಮರಳು ತೆಗೆಯಲು ಅನುಮತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿಯಲ್ಲಿ ತೆಗೆದ ಮರಳೇ ಎಲ್ಲ ಕಡೆ ಸಾಗಾಟವಾಗುತ್ತಿತ್ತು. ಅಲ್ಲದೇ, ಬೇರೆ ಜಿಲ್ಲೆಯಿಂದಲೂ ಮರಳು ಜಿಲ್ಲೆಗೆ ಬರಲು ಅವಕಾಶವಿಲ್ಲದ ಕಾರಣ ಸದ್ಯ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮರಳೇ ಇಲ್ಲದಂತಾಗಿದೆ..

ಕಾರವಾರ
ಕಾರವಾರ
author img

By

Published : Jun 7, 2022, 4:14 PM IST

ಕಾರವಾರ: ಅಭಿವೃದ್ದಿ ಚಟುವಟಿಕೆಗಳಿಗೆ, ಸಾರ್ವಜನಿಕರ ಮನೆ ನಿರ್ಮಾಣ ಇನ್ನಿತರ ಕಾಮಗಾರಿಗಳಿಗೆ ಮರಳೇ ಮುಖ್ಯವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನದಿಗಳಲ್ಲಿ ಸರ್ಕಾರದಿಂದ ಪರವಾನಗಿ ಪಡೆದ ನೂರಕ್ಕೂ ಅಧಿಕ ಪರವಾನಗಿದಾರರು ಮರಳನ್ನ ಸಾಗಣೆ ಮಾಡುವ ಕಾಯಕವನ್ನ ಮಾಡುತ್ತಿದ್ದರು. ಆದರೆ, ಎನ್​​ಜಿಟಿ ಮರಳುಗಾರಿಕೆ ಬಂದ್ ಮಾಡಲು ಆದೇಶಿರುವುದು ನೂರಾರು ಜನರ ಕೆಲಸ ಕಳೆದುಕೊಳ್ಳುವಂತಾಗಿದ್ದು, ಇನ್ನೊಂದೆಡೆ ಅಭಿವೃದ್ದಿ ಚಟುವಟಿಕೆಗಳು ಕುಂಠಿತವಾಗುವಂತಾಗಿದೆ.

ಮರಳು ಪರವಾನಿಗೆದಾರ ಹಾಗೂ ಸ್ಥಳೀಯರು ಮಾತನಾಡಿದ್ದಾರೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಮಾಡುವ ಮೂಲಕ ಅಭಿವೃದ್ದಿ ಚಟುವಟಿಕೆಗಳ ಮೇಲೆ ದೊಡ್ಡ ಹೊಡೆತ ಬೀಳುವಂತಾಗಿದೆ. ಇಡೀ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕರಾವಳಿ ಭಾಗದ ನದಿಗಳಲ್ಲಿ ತೆಗೆದ ಮರಳನ್ನೇ ಅಭಿವೃದ್ದಿ ಚಟುವಟಿಕೆಗಳಿಗೆ ಬಳಸಲು ಸಾಗಣೆ ಮಾಡಲಾಗುತ್ತಿತ್ತು. ರಸ್ತೆ, ಚರಂಡಿ, ಮನೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಮರಳನ್ನ ಬಳಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿಗೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ಸಿಆರ್​​ಜೆಡ್​​ ವಲಯದಲ್ಲಿ ಮರಳುಗಾರಿಕೆ ಮಾಡುವ ಸಂಬಂಧ ಉಡುಪಿಯ ಪ್ರಕರಣವೊಂದರ ಸಂಬಂಧ ತೀರ್ಪು ನೀಡಿದ್ದು ಸಿಆರ್​​​​ಜೆಡ್​​ ವಲಯದಲ್ಲಿ ತೆಗೆದ ಮರಳನ್ನ ಮಾರಾಟ ಮಾಡದಂತೆ ಆದೇಶಿಸಿತ್ತು.

ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮರಳುಗಾರಿಕೆ ಬಂದ್ ಮಾಡಿದ್ದು, ಅಭಿವೃದ್ದಿ ಚಟುವಟಿಕೆಗಳು ಮರಳು ಇಲ್ಲದೇ ಬಂದ್ ಆಗುವಂತಾಗಿದೆ. ಇನ್ನು ಜಿಲ್ಲೆಯಲ್ಲಿ ಮರಳು ತೆಗೆದು ಸಾಗಣೆ ಮಾಡುವ ಕಾಯಕವನ್ನೇ ನಂಬಿ ಸಾವಿರಾರು ಜನರು ಜೀವನ ಸಾಗಿಸುತ್ತಿದ್ದು, ಮರಳುಗಾರಿಕೆ ಬಂದ್ ಆಗಿದ್ದರಿಂದ ಅವರಿಗೆ ದಿಕ್ಕು ತೋಚದಂತಾಗಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಮರಳೇ ಇಲ್ಲ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಪ್ರದೇಶ ಬಿಟ್ಟು ಬೇರೆ ಯಾವ ತಾಲೂಕಿನಲ್ಲೂ ಮರಳು ತೆಗೆಯಲು ಅನುಮತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿಯಲ್ಲಿ ತೆಗೆದ ಮರಳೇ ಎಲ್ಲ ಕಡೆ ಸಾಗಾಟವಾಗುತ್ತಿತ್ತು. ಅಲ್ಲದೇ, ಬೇರೆ ಜಿಲ್ಲೆಯಿಂದಲೂ ಮರಳು ಜಿಲ್ಲೆಗೆ ಬರಲು ಅವಕಾಶವಿಲ್ಲದ ಕಾರಣ ಸದ್ಯ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮರಳೇ ಇಲ್ಲದಂತಾಗಿದೆ.

ಇನ್ನು ಮರಳಿಗೆ ಪರ್ಯಾಯವಾಗಿ ಎಂ ಸ್ಯಾಂಡ್ ಬಳಕೆಯನ್ನ ಮಾಡಲಾಗುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಅರಣ್ಯವೇ ಇರುವುದರಿಂದ ಕಲ್ಲುಕ್ವಾರಿಗಳ ಸಂಖ್ಯೆ ಸಹ ಬೇರೆ ಜಿಲ್ಲೆಗೆ ಹೋಲಿಸಿದರೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಎಂ ಸ್ಯಾಂಡ್ ಸಹ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೂ ಕಷ್ಟವಾಗುವಂತಾಗಿದ್ದು, ಸರ್ಕಾರ ಹಸಿರುವ ಪೀಠದಲ್ಲಿ ಸಮರ್ಥವಾಗಿ ವಾದ ಮಾಡದೇ ಜನರು ಸಮಸ್ಯೆಯಲ್ಲಿ ಸಿಲುಕುವಂತೆ ಮಾಡಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸಾವಿರಾರು ಕುಟುಂಬಗಳು ಬೀದಿಗೆ.. ಕೇವಲ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ಕರಾವಳಿ ಜಿಲ್ಲೆಯಾದ ಉಡುಪಿ ಹಾಗೂ ಮಂಗಳೂರಿನಲ್ಲೂ ಮರಳುಗಾರಿಕೆಯನ್ನ ಬಂದ್ ಮಾಡಲಾಗಿದೆ. ಹಸಿರು ಪೀಠ ಆದೇಶವನ್ನ ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದೇ ಏಕಾಏಕಿ ಮರಳುಗಾರಿಕೆ ಬಂದ್ ಆಗಿರುವುದು ಸಾರ್ವಜನಿಕರು ಒಂದೆಡೆ ಪರದಾಡುವಂತಾದರೆ, ಇನ್ನೊಂದೆಡೆ ಮರಳು ತೆಗೆದು ಸಾಗಾಟ ಮಾಡುವುದನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದ್ದು, ಸರ್ಕಾರ ಯಾವ ಕ್ರಮಕ್ಕೆ ಮುಂದಾಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ಓದಿ: ಕರ್ನಾಟಕದ ಸಾರ್ವಕಾಲಿಕ 'ಮುಖ್ಯಮಂತ್ರಿ' ಈಗ ಆಮ್​ ಆದ್ಮಿ.. AAP​ ಸೇರ್ಪಡೆಯಾದ ಹಿರಿಯ ನಟ ಚಂದ್ರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.