ETV Bharat / state

ಕಾರವಾರದಲ್ಲಿ 'ಕೆರೆ ಬೇಟೆ' ಸಂಘರ್ಷ: ಮೀನು ಸಿಗದಿದ್ದಕ್ಕೆ ಶಾಮಿಯಾನ, ಸ್ಪೀಕರ್ ಕಿತ್ತೊಯ್ದು ಗಲಾಟೆ - ಈಶ್ವರ ದೇವಸ್ಥಾನ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಕೆರೆ ಮೀನು ಬೇಟೆ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮದಲ್ಲಿ ಈಶ್ವರ ದೇವಸ್ಥಾನ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ 'ಕೆರೆ ಮೀನು ಬೇಟೆ' ಆಯೋಜನೆ ಮಾಡಿತ್ತು.‌ ಈ ಬಗ್ಗೆ ಸಾಕಷ್ಟು ಪ್ರಚಾರ ಸಹ ಕೊಡಲಾಗಿದೆ. ಆದರೆ ಬೇಟೆಗಾಗಿ ಬಂದವರಿಗೆ ಮೀನು ಸಿಗಲಿಲ್ಲ. ಇದು ಹೊಡೆದಾಟಕ್ಕೆ ಕಾರಣವಾಯಿತು.

Let people down without getting fish
ಕೆರೆ ಬೇಟೆಗೆ ಬಂದ ಸಾವಿರಾರು ಮಂದಿ
author img

By

Published : May 30, 2022, 7:34 AM IST

ಕಾರವಾರ: ಇಲ್ಲಿನ ದೇವಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥ ಕೆರೆಯಲ್ಲಿ ಮೀನು ಹಿಡಿಯುವುದಕ್ಕಾಗಿ ದೇವಸ್ಥಾನ ಕಮಿಟಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಮೀನು ಬೇಟೆಗಾಗಿ ಆಗಮಿಸಿದ್ದ ಸಾವಿರಾರು ಮಂದಿ ಕೆರೆಗೆ ಇಳಿದಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಮೀನು ಬೇಟೆ ಆಯೋಜಿಸಿದ ಸಮಿತಿ ವಿರುದ್ಧವೇ ಕೋಪಗೊಂಡು ಗಲಾಟೆ ನಡೆಸಿದರು. ಪೆಂಡಾಲ್ ಸೇರಿದಂತೆ ಸಿಕ್ಕ ವಸ್ತುಗಳನ್ನೆಲ್ಲಾ ಹೊತ್ತೊಯ್ದರು.

ಶಿವಮೊಗ್ಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಕರೆ ಮೀನುಬೇಟೆಗಾಗಿ ಆಗಮಿಸಿದ್ದರು. ಈ ಹಿಂದೆಲ್ಲಾ ಪ್ರತಿ ವರ್ಷವೂ ಕೆರೆಬೇಟೆ ಆಯೋಜಿಸಲಾಗುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಬೇಟೆ ಮಾಡಿರಲಿಲ್ಲ. ಅನೇಕ ವರ್ಷಗಳ ನಂತರದಲ್ಲಿ ಕಾರ್ಯಕ್ರಮ ಮಾಡಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಆದರೆ ಕೆರೆಯಲ್ಲಿ ಮೀನುಗಳಿಲ್ಲದ ಕಾರಣ ಜನರು ಸಮಿತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

600 ರೂ ಟಿಕೆಟ್​: ಮೀನು ಬೇಟೆಗಾಗಿ ಸಮಿತಿಯವರು ಪ್ರತಿ ಕೂಣಿಕೆಗೆ 600 ರೂಪಾಯಿ ಹಣ ಪಡೆದುಕೊಂಡಿದ್ದರು. ಅದರಂತೆ, 3,000 ಸಾವಿರ ಜನರು 600 ರೂಪಾಯಿ ಹಣ ನೀಡಿ ಪ್ರವೇಶ ಪಡೆದು ಕೆರೆಯಲ್ಲಿ ಮೀನು ಬೇಟೆಗೆ ಇಳಿದಿದ್ದಾರೆ.

Let people down without getting fish

ಕೆರೆಗಿಳಿದ ಬಹುತೇಕರಿಗೆ ಒಂದೇ ಒಂದು ಮೀನು ಕೂಡಾ ಸಿಕ್ಕಿರಲಿಲ್ಲ. ಇದರಿಂದ ಕುಪಿತಗೊಂಡ ಮತ್ಸ್ಯ ಪ್ರೀಯರು ಸಂಘಟಕರ ವಿರುದ್ದ ಕೋಪಗೊಂಡು ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಶಾಮಿಯಾನ ಕಿತ್ತರಲ್ಲದೆ, ಸೌಂಡ್ ಬಾಕ್ಸ್ , ಸ್ಪೀಕರ್ ಸೇರಿದಂತೆ ಕೈಗೆ ಸಿಕ್ಕಸಿಕ್ಕ ವಸ್ತುಗಳನ್ನು ಹೊತ್ತೊಯ್ದರು. ಸಮಿತಿ ಸದಸ್ಯರ ಮೇಲೂ ಹಲ್ಲೆ ನಡೆಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಜನರ ಕೋಪತಾಪ ತಣ್ಣಗಾಗಲಿಲ್ಲ.

ಹಣ ಮರಳಿಸಿದ ಕಮಿಟಿ: ಅಂತಿಮವಾಗಿ, ಪೊಲೀಸರು ಜನರು ಮತ್ತು ಕಮಿಟಿ ಜೊತೆ ಮಾತನಾಡಿ 500ರೂ ಹಿಂತಿರುಗಿಸುವಂತೆ ಸಮಿತಿಗೆ ಹೇಳಿದ್ದಾರೆ. ಮೀನು ಹಿಡಿಯಲು ಬಂದವರೂ 100 ರೂಪಾಯಿಯನ್ನು ದೇವಾಲಯದ ಅಭಿವೃದ್ಧಿಗಾಗಿ ಕೊಡುವುದಾಗಿ ಒಪ್ಪಿಕೊಂಡು ಸಂಘರ್ಷ ಸುಖಾಂತ್ಯ ಕಂಡಿತು.

ಇದನ್ನೂ ಓದಿ: ಲಡಾಖ್‌ನಲ್ಲಿ ಸೇನಾ ಬಸ್​ ದುರಂತ ಪ್ರಕರಣ : ಚಾಲಕನ ಪಾತ್ರದ ಬಗ್ಗೆ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.