ETV Bharat / state

ಯುದ್ದ ನೌಕೆ ವಿಕ್ರಮಾದಿತ್ಯ ನೋಡಲು ಜನಸಾಗರ - kannada newspaper, etvbharat,  people, arrived, vikramaditya war ship, karavara, kadamba, kargil vijay divas, ins suvarna war ship

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, 10  ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಅಪರೂಪದ ನೌಕೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಕ್ರಮಾದಿತ್ಯ ಯುದ್ದ ನೌಕೆ
author img

By

Published : Jul 20, 2019, 11:11 PM IST

ಕಾರವಾರ: ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಅಪರೂಪದ ನೌಕೆಯನ್ನು ಕಣ್ತುಂಬಿಕೊಂಡಿದ್ದಾರೆ.

ವರ್ಷವಿಡಿ ಭಾರೀ ಭದ್ರತೆಯಲ್ಲಿರುವ ನೌಕೆಯನ್ನು ನೋಡಲು ಸಿಗುವುದೇ ಅಪರೂಪ. ಕಾರವಾರದ ಕದಂಬ ನೌಕಾನೆಲೆಯಲ್ಲಿ ತಂಗಿದ್ದ ಐಎನ್ಎಸ್ ವಿಕ್ರಮಾದಿತ್ಯ ಹಾಗೂ ಐಎನ್ಎಸ್ ಸುವರ್ಣ ಯುದ್ಧ ನೌಕೆಗಳ ವೀಕ್ಷಣೆಗೆ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಅವಕಾಶ ಕಲ್ಪಿಸಲಾಗಿತ್ತು.

ಯುದ್ದ ನೌಕೆ ವಿಕ್ರಮಾದಿತ್ಯ ನೋಡಲು ಜನಸಾಗರ

ಏಷ್ಯಾದಲ್ಲಿಯೇ ಅತಿ ದೊಡ್ಡ ವಿಮಾನ ವಾಹಕ ಯುದ್ದ ನೌಕೆಯಾದ ಇದು ಸುಮಾರು 44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ದ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಇದಕ್ಕಿದೆಯೆಂದು ವಿಮಾನ ವಾಹಕ ಯುದ್ದ ನೌಕೆ ಬಗ್ಗೆ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೌಕಾನೆಲೆ ವೀಕ್ಷಣೆಗೆ ಆಗಮಿಸಿದ್ದರಿಂದ ನೌಕಾನೆಲೆ ಮುಂಭಾಗ ಹೆದ್ದಾರಿವರೆಗೆ ಜನಸಂದಣಿ ಚಾಚಿಕೊಂಡಿತ್ತು. ಗೇಟ್ ಒಳಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಇದ್ದ ಕಾರಣ ಸಾರ್ವಜನಿಕರು ಗಂಟೆ ಗಟ್ಟಲೇ ಸರದಿ ಸಾಲಿನಲ್ಲಿ ಕಾದು ಬಳಿಕ ವಿಕ್ರಮಾದಿತ್ಯ ನೌಕೆಯ ಮೆಟ್ಟಿಲೇರುವಂತಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಅಧಿಕಾರಿಗಳು, ವಿವಿಧ ಇಲಾಖೆ ನೌಕರರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

Intro:ನೌಕಾನೆಲೆಗೆ ಮುಕ್ತ ಅವಕಾಶ.. ಯುದ್ದ ನೌಕೆ ವಿಕ್ರಮ ಆದಿತ್ಯ ನೋಡಲು ಜನವೋ ಜನ

ಕಾರವಾರ: ಅದು ದೇಶದ ಹೆಮ್ಮೆಯ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ. ವರ್ಷವಿಡಿ ಭಾರಿ ಭದ್ರತೆಯಲ್ಲಿರುವ ನೌಕೆಯನ್ನು ನೋಡಲು ಸಿಗುವುದೇ ಅಪರೂಪ. ಆದರೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, ೧೦ ಸಾವಿರಕ್ಕೂ ಹೆಚ್ಚು ಜನರು ಅಪರೂಪದ ನೌಕೆಯನ್ನು ಕಣ್ತುಂಬಿಕೊಂಡಿದ್ದಾರೆ.
ಹೌದು, ಕಾರವಾರದ ಕದಂಬ ನೌಕಾನೆಲೆಯಲ್ಲಿ ತಂಗಿದ್ದ ಐಎನ್ಎಸ್ ವಿಕ್ರಮಾದಿತ್ಯ ಹಾಗೂ ಐಎನ್ಎಸ್ ಸುವರ್ಣ ಯುದ್ಧ ನೌಕೆಗಳ ವೀಕ್ಷಣೆಗೆ ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಿಂದ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.
ಕದಂಬ ನೌಕಾನೆಲೆಯ ಮುಖ್ಯ ದ್ವಾರದ ಮೂಲಕ ಗುರುತಿನ ಚೀಟಿಯನ್ನು ಪರಿಶೀಲಿಸಿ ಪ್ರವೇಶ ನೀಡಲಾಗಿತ್ತು. ಆದರೆ ಈ ಭಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೌಕಾನೆಲೆ ವೀಕ್ಷಣೆಗೆ ಆಗಮಿಸಿದ್ದರಿಂದ ನೌಕಾನೆಲೆ ಮುಂಭಾಗ ಹೆದ್ದಾರಿವರೆಗೆ ಸಾಲು ಚಾಚಿಕೊಂಡಿತ್ತು. ಗೇಟ್ ಒಳಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಸಾರ್ವಜನಿಕರು ಗಂಟೆ ಗಟ್ಟಲೇ ಸರದಿ ಸಾಲಿನಲ್ಲಿ ಕಾದು ಬಳಿಕ ವಿಕ್ರಮಾದಿತ್ಯದ ಮೆಟ್ಟಿಲೇರುವಂತಾಯಿತು.
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಅಧಿಕಾರಿಗಳು, ವಿವಿಧ ಇಲಾಖೆ ನೌಕರರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ವಿಕ್ರಮಾದಿತ್ಯದ ಮೇಲ್ಭಾಗದಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪೋಟೊ, ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂತು.
ಇನ್ನು ಏಷ್ಯಾದಲ್ಲಿಯೇ ಅತಿ ದೊಡ್ಡ ವಿಮಾನ ವಾಹಕ ಯುದ್ದ ನೌಕೆ ಬಗ್ಗೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸುಮಾರು 44,500 ಟನ್ ತೂಕವಿರುವ ನೌಕೆಯು 284 ಮೀಟರ್ ಉದ್ದ 60 ಮೀಟರ್ ಎತ್ತರ ಇದೆ. 34 ಯುದ್ದ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಇದಕ್ಕಿದೆ.
ಇಂತಹ ಅಪರೂಪದ ನೌಕೆಯನ್ನು ವೀಕ್ಷಿಸಿದ ಜನರು ಕೂಡ ಫುಲ್ ಖುಷಿಯಾಗಿದ್ದರು. ಸಾಮಾನ್ಯ ದಿನದಲ್ಲಿ ಒಂದು ಸಣ್ಣ ಪ್ರಾಣಿಯು ಒಳಗೆ ತೆರಳು ಅವಕಾಶವಿಲ್ಲದಷ್ಟು ಬೀಗಿ ಭದ್ರತೆ ಇರುವಾಗಿ ಇಂದು ಮುಕ್ತವಾಗಿ ನೋಡಲು ಮತ್ತು ಓಡಾಡಲು ಅವಕಾಶ ಕೊಟ್ಟಿರುವುದು ತುಂಬಾ ಖುಷಿಯಾಗಿದೆ. ಇಂತಹದೊಂದು ಅವಕಾಶ ಸಿಗುವುದೇ ಅಪರೂಪ. ಇಂತಹ ಯುದ್ಧ ನೌಕೆಯನ್ನು ನೋಡಿರುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಯುದ್ಧ ನೌಕೆ ವೀಕ್ಷಣೆ ಮಾಡಿದ ಪ್ರವಾಸಿಗ ದೇವರಾಜ್.
ಇನ್ನು ವೀಕ್ರಮಾದಿತ್ಯದ ಜೊತೆಗೆ ಸುವರ್ಣ ನೌಕೆಯನ್ನು ಕೂಡ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಿಸಲಾಗಿತ್ತು. ಇದನ್ನು ಕೂಡ ಸಾರ್ವಜನಿಕರು ವೀಕ್ಷಣೆ ಮಾಡಿ ಖುಷಿ ಪಟ್ಟರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ನೇಹಿರರೊಂದಿಗೆ ಬಂದು ವೀಕ್ಷಣೆ ಮಾಡಿದರು. ನೌಕೆಗಳ ಬಗ್ಗೆ ಮತ್ತು ಅದು ಕಾರ್ಯ ನಿರ್ವಹಿಸುವ ಬಗ್ಗೆ ಇಲ್ಲಿನ ಸಿಬ್ಬಂದಿ ವಿವರಿಸಿದರು. ಇದೊಂದು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ದಿನ ಎನ್ನುತ್ತಾರೆ ವಿದ್ಯಾರ್ಥಿನಿ ಲಕ್ಷ್ಮಿ.
ಒಟ್ಟಿನಲ್ಲಿ ದೇಶದ ಹೆಮ್ಮೆಯ ಯುದ್ಧ ನೌಕೆಯನ್ನು ಮೊಬೈಲ್ ಇಲ್ಲವೇ ಟಿವಿ ಮೂಲಕ ನೋಡಿ ಖುಷಿ ಪಡುತ್ತಿದ್ದವರಿಗೆ ಇಂದು ನಿಜವಾಗಿ ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿದೆ.

ಬೈಟ್ ೧. ದೇವರಾಜ್, ವೀಕ್ಷಣೆ ಮಾಡಿದ ಪ್ರವಾಸಿಗ
ಬೈಟ್ ೨. ಲಕ್ಷ್ಮೀ ವಿದ್ಯಾರ್ಥಿನಿ

Body:ಕ

Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.