ಕಾರವಾರ: ಕೊಯ್ಲು ಮಾಡಿ ರಾಶಿ ಹಾಕಿದ್ದ ಭತ್ತದ ಬಣವೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದ ಘಟನೆ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲಕ್ಕಿಯಲ್ಲಿ ನಡೆದಿದೆ.
ವಿಪರೀತ ಗಾಳಿಯಿಂದಾಗಿ ವಿದ್ಯುತ್ ಲೈನ್ಗಳು ಒಂದಕ್ಕೊಂದು ಸ್ಪರ್ಶಿಸಿ, ಹತ್ತಿರದಲ್ಲಿದ್ದ ಬಣವೆಗೆ ಬೆಂಕಿ ತಗುಲಿದೆ. ತಕ್ಷಣ ವಿಷಯ ತಿಳಿದ ಮನೆಯವರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ 2 ಲಕ್ಷ ರೂ. ಮೌಲ್ಯದ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: ಶಿಸ್ತು ಉಲ್ಲಂಘಿಸಿ ಮಾತನಾಡುವವರ ವಿರುದ್ಧ ಶಿಸ್ತು ಕ್ರಮ: ಸಚಿವ ಆರ್. ಅಶೋಕ್
ಗ್ರಾಮದ ನಾಲ್ವರು ರೈತರು ತಮ್ಮ ಗದ್ದೆಗಳಲ್ಲಿ ಕೊಯ್ಲು ಮಾಡಿದ್ದ ಬೆಳೆಯನ್ನು ಒಂದೆಡೆ ಬಣವೆ ಮಾಡಿದ್ದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.