ETV Bharat / state

ಕಾರವಾರದಲ್ಲಿ ಮರಾಠಿ ಸಿನಿಮಾ ಪ್ರದರ್ಶನಕ್ಕೆ ವಿರೋಧ: ಪ್ಲೆಕ್ಸ್​ಗೆ ಮಸಿ ಬಳಿದು ಕರವೇ ಆಕ್ರೋಶ - karwar suddi

ಕಾರವಾರದ ಚಿತ್ರಮಂದಿರದಲ್ಲಿ ಮರಾಠಿ ಬಾಷೆಯ ಚಲನಚಿತ್ರವನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಚಲನಚಿತ್ರದ ಪ್ಲೆಕ್ಸ್​ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

opposition-to-marathi-movie-screening-in-karwar
ಮರಾಠಿ ಸಿನಿಮಾ ಪ್ರದರ್ಶನಕ್ಕೆ ವಿರೋಧ: ಪ್ಲೆಕ್ಸ್​ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಕರವೇ
author img

By

Published : Dec 18, 2022, 9:52 PM IST

Updated : Dec 18, 2022, 10:09 PM IST

ಮರಾಠಿ ಸಿನಿಮಾ ಪ್ರದರ್ಶನಕ್ಕೆ ವಿರೋಧ: ಪ್ಲೆಕ್ಸ್​ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಕರವೇ

ಕಾರವಾರ: ಕನ್ನಡ ಹೊರತುಪಡಿಸಿ ಮರಾಠಿ ಭಾಷೆಯ ಚಿತ್ರ ಪ್ರದರ್ಶಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಕಾರವಾರದ ಅರ್ಜುನ್ ಥಿಯೇಟರ್ ಬಳಿ ಫ್ಲೆಕ್ಸ್ ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದರು.

ಅರ್ಜುನ್ ಥಿಯೇಟರ್​ನಲ್ಲಿ 'ಧೋಂಡಿ ಚಂಪ್ಯಾ ಏಕ್ ಪ್ರೇಮ್ ಕಥಾ' ಎಂಬ ಮರಾಠಿ ಸಿನಿಮಾವನ್ನು ಶುಕ್ರವಾರದಿಂದ ಪ್ರದರ್ಶಿಸಲಾಗುತ್ತಿತ್ತು. ಅಲ್ಲದೇ ಈ ಸಿನಿಮಾಕ್ಕೆ ಸಂಬಂಧಿಸಿದ ಬೃಹತ್ ಫ್ಲೆಕ್ಸ್, ಪೋಸ್ಟರ್ ಗಳನ್ನು ಥಿಯೇಟರ್ ಮೇಲೆ ಅಳವಡಿಸಿ, ಕಾಂತಾರ ಸಿನಿಮಾದ ಪೋಸ್ಟರನ್ನ ಥಿಯೇಟರ್ ನ ಹೊರ ಭಾಗದಲ್ಲಿ ಕೆಳಕ್ಕೆ ಇಡಲಾಗಿತ್ತು.

ಇದರಿಂದಾಗಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು, ಥಿಯೇಟರ್ ಎದುರು ಜಮಾಯಿಸಿ ಥಿಯೇಟರ್​ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡದೆ ಮರಾಠಿ ಭಾಷೆ ಬೆಳೆಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಕಾರ್ಯಕರ್ತರ ಆಗ್ರಹದ ಬಳಿಕ ಥಿಯೇಟರ್​ನ ಸಿಬ್ಬಂದಿ ಮರಾಠಿ ಸಿನಿಮಾದ ಪೋಸ್ಟರ್ ತೆರವುಗೊಳಿಸಿದ್ದಾರೆ. ಇನ್ನು, ಮರಾಠಿ ಸಿನಿಮಾ ಪ್ರದರ್ಶನ ಮಾಡದಂತೆಯೂ ಕರವೇ ಕಾರ್ಯಕರ್ತರು ಆಗ್ರಹಿಸಿದ್ದು, ಈ ಬಗ್ಗೆ ಥಿಯೇಟರ್ ಸಿಬ್ಬಂದಿ ಮಾಲೀಕರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಂಕೋಲಾದ ವರಿಲ್ ಬೇಣಕ್ಕಿಲ್ಲ ರಸ್ತೆ ಸಂಪರ್ಕ: ಜೋಳಿಗೆ ಮೂಲಕ ಆಸ್ಪತ್ರೆ ಸೇರಿದ ವೃದ್ಧ

Last Updated : Dec 18, 2022, 10:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.