ETV Bharat / state

ಚಂದ್ರ ಗ್ರಹಣದ ನಡುವೆಯೂ ಆತ್ಮಲಿಂಗ ದರ್ಶನಕ್ಕೆ ಅವಕಾಶ - ಈಟಿವಿ ಭಾರತ್ ಕನ್ನಡ

ಖಗ್ರಾಸ ಚಂದ್ರಗ್ರಹಣದ ನಡುವೆಯೂ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ದರ್ಶನ ಹಾಗೂ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿದೆ.

Opportunity for Atmalinga darshan even during lunar eclipse
ಚಂದ್ರಗ್ರಹಣದ ನಡುವೆಯೂ ಆತ್ಮಲಿಂಗ ದರ್ಶನಕ್ಕೆ ಅವಕಾಶ
author img

By

Published : Nov 8, 2022, 5:25 PM IST

ಕಾರವಾರ(ಗೋಕರ್ಣ): ಖಗ್ರಾಸ ಚಂದ್ರಗ್ರಹಣದ ನಡುವೆಯೂ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ದರ್ಶನ ಹಾಗೂ ಸ್ಪರ್ಶಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕುಮಟಾದ ಗೋಕರ್ಣದ ಮಹಾಬಲೇಶ್ವರ ದೇವಾಲದಲ್ಲಿ ಪೂಜಾ ಸಮಯ ಬದಲಾವಣೆ ಮಾಡಿ ಮಧ್ಯಾಹ್ನ 2:30 ರಿಂದ ಸಂಜೆ 6:30ರ ವರೆಗೆ ಆತ್ಮಲಿಂಗ ಸ್ಪರ್ಶ ಹಾಗೂ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.

ಚಂದ್ರಗ್ರಹಣದ ನಡುವೆಯೂ ಆತ್ಮಲಿಂಗ ದರ್ಶನಕ್ಕೆ ಅವಕಾಶ

ಇದರಿಂದ ಗೋಕರ್ಣಕ್ಕೆ ಆಗಮಿಸಿದ ಭಕ್ತರು ಗ್ರಹಣ ಕಾಲದ ನಡುವೆಯೂ ಆತ್ಮಲಿಂಗ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ತೆರಳುತ್ತಿದ್ದಾರೆ. ಆದರೆ, ದೇವಸ್ಥಾನದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ಭೋಜನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಚಂದ್ರಗ್ರಹಣ ಹಿನ್ನೆಲೆಯಿಂದಾಗಿ ಪ್ರಸಾದ ಸೇವೆ ಇರುವುದಿಲ್ಲ. ಗ್ರಹಣ ಮೋಕ್ಷದ ಬಳಿಕ ದೇವಸ್ಥಾನದಲ್ಲಿ ಶುದ್ದೀಕರಣ, ಪ್ರಾಯಶ್ಚಿತ್ತ ಹೋಮ ನಡೆಸಿ ಬಳಿಕ ಎಂದಿನಂತೆ ಮಹಾಪೂಜೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ:ಚಂದ್ರಗ್ರಹಣ: ದೇವಾಲಯಗಳ ಪೂಜಾ ಪ್ರಸಾದದ ವ್ಯವಸ್ಥೆಯಲ್ಲಿ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.