ETV Bharat / state

ಕಾರವಾರ ಸುರಂಗ ಮಾರ್ಗ ಲೋಕಾರ್ಪಣೆ: ಏಕಮುಖ ಸಂಚಾರದಿಂದ ಅಪಘಾತ ಹೆಚ್ಚಳ ಆತಂಕ

author img

By

Published : Jan 8, 2023, 1:18 PM IST

ಇಷ್ಟು ದಿನ ಸಂಚಾರಕ್ಕೆ ಲಭ್ಯವಾಗದೇ ಇದ್ದುದಕ್ಕೆ ಟೀಕೆಗೆ ಗುರಿಯಾಗಿದ್ದ ಕಾರವಾರ ಫ್ಲೈಓವರ್, ಟನಲ್​ನಲ್ಲಿ ಇದೀಗ ಏಕಮುಖ ಸಂಚಾರ ಆರಂಭವಾಗಿದೆ. ಪರಿಣಾಮ, ಅಪಘಾತಗಳು ಹೆಚ್ಚಾಗುವ ಆತಂಕ ಸಾರ್ವಜನಿಕರದ್ದು!.

flyover
ಕಾರವಾರ ಫ್ಲೈಓವರ್, ಟನಲ್‌ನಲ್ಲಿ ಏಕಮುಖ ಸಂಚಾರ ಆರಂಭ

ಕಾರವಾರ: ನಗರದ ಫ್ಲೈಓವರ್, ಸುರಂಗ ಮಾರ್ಗವನ್ನು ಸಂಸದ ಅನಂತ ಕುಮಾರ ಹೆಗಡೆ ಕಳೆದ ಕೆಲ ದಿನಗಳ ಹಿಂದಷ್ಟೇ ಉದ್ಘಾಟಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಓನ್​ವೇ ಸಂಚಾರವಿದ್ರೂ ಕೂಡ ಅಪಾಯವನ್ನು ಲೆಕ್ಕಿಸದೇ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಸವಾರರು ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಅಂಗವಾಗಿ ನಗರದ ಹೆದ್ದಾರಿಗೆ ಫ್ಲೈಓವರ್​ ನಿರ್ಮಾಣ ಮಾಡಲಾಗಿದೆ. ಚತುಷ್ಪಥ ರಸ್ತೆಗಾಗಿ ಈಗಾಗಲೇ ಒಂದು ಭಾಗದ ಫ್ಲೈಓವರ್ ಹಾಗೂ ಟನಲ್‌ಗಳು ನಿರ್ಮಾಣಗೊಂಡಿದ್ದು, ಪೂರ್ಣಗೊಂಡು ಸಾಕಷ್ಟು ದಿನಗಳಾಗಿದ್ದರೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಇದು ಸಾರ್ವಜನಿಕರ ಟೀಕೆಗೆ ಗುರಿಯಾಗಿ, ಮಾಧ್ಯಮಗಳು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಉತ್ತರಕನ್ನಡ ಸಂಸದ ಅನಂತ ಕುಮಾರ ಹೆಗಡೆ ಫ್ಲೈಓವರ್ ಹಾಗೂ ಟನಲ್‌ ಅನ್ನು ಏಕಮುಖ ಸಂಚಾರಕ್ಕೆ ಮುಕ್ತಗೊಳಿಸಿ ಉದ್ಘಾಟಿಸಿದ್ದರು. ಇಷ್ಟು ದಿನ ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು ಮಾತ್ರ ಓಡಾಡುತ್ತಿದ್ದು, ಇದೀಗ ಏಕಾಏಕಿ ಏಕಮುಖ ಸಂಚಾರ ಜಾರಿಗೊಳಿಸಿರುವುದರ ಅರಿವಿಲ್ಲದೇ ಕೆಲ ವಾಹನ ಸವಾರರು ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಆಗಮಿಸುತ್ತಿದ್ದಾರೆ. ಹೀಗಾಗಿ, ಅಪಘಾತಗಳು ಉಂಟಾಗುವ ಆತಂಕ ಇದೆ ಎನ್ನುತ್ತಾರೆ ಸ್ಥಳೀಯರಾದ ಎಲೀಷಾ ಎಲಕಪಾಟಿ.

ಇದನ್ನೂ ಓದಿ: ವಿಜಯನಗರ: ಸುರಂಗ ಮಾರ್ಗದಲ್ಲಿ ನೀರು ಸೋರಿಕೆ, ಆತಂಕದಲ್ಲಿ ಜನತೆ

ಒಂದು ಫ್ಲೈಓವರ್‌ನಲ್ಲಿ ಸಂಚಾರ: ನಗರದ ಆರ್‌ಟಿಓ ಕಚೇರಿಯಿಂದ ಲಂಡನ್ ಬ್ರಿಡ್ಜ್​ವರೆಗೆ ಸುಮಾರು 2 ಕಿಮೀ ವರೆಗೆ ಎರಡು ಫ್ಲೈಓವರ್ ನಿರ್ಮಿಸಲಾಗಿದ್ದು ಅದರಲ್ಲಿ ಪೂರ್ಣಗೊಂಡಿರುವ ಒಂದು ಫ್ಲೈಓವರ್‌ನಲ್ಲಿ ಇದೀಗ ವಾಹನ ಸಂಚಾರ ಆರಂಭಿಸಲಾಗಿದೆ. ಇನ್ನೊಂದೆಡೆ, ಬಿಣಗಾ ಗ್ರಾಮದಿಂದ ಕಾರವಾರಕ್ಕೆ ಸಂಪರ್ಕಿಸಲು ಹೆದ್ದಾರಿಗೆ 2 ಟನಲ್‌ಗಳನ್ನ ನಿರ್ಮಿಸಲಾಗಿದ್ದು, ಅದರಲ್ಲಿ ಪೂರ್ಣಗೊಂಡಿರುವ ಒಂದು ಟನಲ್‌ನಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ. ಆದರೆ, ಈ ಮೊದಲು ಕೇವಲ ದ್ವಿಚಕ್ರ ವಾಹನ ಸವಾರರಿಗೆ ಟನಲ್ ಸಂಚಾರ ಲಭ್ಯವಿದ್ದಿದ್ದರಿಂದ ಪ್ರತಿನಿತ್ಯ ಶಾಲೆ, ಕಾಲೇಜು, ಕೆಲಸಕ್ಕೆ ತೆರಳಲು ಸಾಕಷ್ಟು ಮಂದಿ ಗ್ರಾಮಸ್ಥರು ಇದೇ ಮಾರ್ಗವನ್ನ ಬಳಕೆ ಮಾಡುತ್ತಿದ್ದರು. ಅವರು ಇದೀಗ ಮತ್ತೆ 5 ಕಿಮೀ ಸುತ್ತುವರೆದು ಕಾರವಾರಕ್ಕೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕಿ ರೂಪಾಲಿ ನಾಯ್ಕ, ಟನಲ್‌ನ ಏಕಮುಖ ಸಂಚಾರದಿಂದ ಪ್ರತಿನಿತ್ಯ ಓಡಾಡುವವರಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಹೆಚ್ಚು ಅಪಘಾತವಾಗುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ವೇಗ ನಿಯಂತ್ರಣ ಹಾಗೂ ಏಕಮುಖ ಸಂಚಾರಕ್ಕೆ ತೊಂದರೆಯಾಗದಂತೆ ಶೀಘ್ರದಲ್ಲೇ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈನ ಆಸ್ಪತ್ರೆ ಆವರಣದಲ್ಲಿ 132 ವರ್ಷದ ಸುರಂಗ ಪತ್ತೆ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.