ಭಟ್ಕಳ: ಎರಡು ದಿನದ ಹಿಂದೆ ಮನೆಯಿಂದ ಹೋದ ವ್ಯಕ್ತಿ ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ವೆಂಕಟರಮಣ ಶನಿಯಾರ ಮೊಗೇರ (66) ಎಂದು ತಿಳಿದು ಬಂದಿದೆ. ಇವರು ಗುರುವಾರ ಸಂಜೆ ಮನೆಯಿಂದ ಹೊರ ಹೋಗಿದ್ದು, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶಿರಾಲಿ ಚೆಕ್ ಸಮೀಪ ನಡೆದುಕೊಂಡು ಹೋಗಿರುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಆದರೆ ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವ ತೇಲುತ್ತಿದ್ದಿದ್ದನ್ನು ಗಮನನಿಸಿದ ದಾರಿಹೋಕರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ಗ್ರಾಮೀಣ ಠಾಣಾ ಪೊಲೀಸರು, ಮೀನುಗಾರರ ಸಹಾಯದದಿಂದ ಶವವನ್ನು ದಡಕ್ಕೆ ತಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಮೃತ ವ್ಯಕ್ತಿಯ ಮಗ ದೂರು ದಾಖಲಿಸಿದ್ದಾರೆ.