ETV Bharat / state

ಕುಮಟಾದಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಮಾದರಿಯ ವಸ್ತು - kumata bomb news

ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜ್‌ನ ಹಿಂಭಾಗದಲ್ಲಿ ಬಾಂಬ್​ ರೀತಿಯ ವಸ್ತು ನಿನ್ನೆ ಸಂಜೆ ಪತ್ತೆಯಾಗಿತ್ತು.

object like a bomb found in kumata
ಕುಮಟಾದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆ
author img

By

Published : Oct 28, 2021, 8:29 AM IST

Updated : Oct 28, 2021, 8:36 AM IST

ಕಾರವಾರ: ಕುಮಟಾ ಪಟ್ಟಣದ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜಿನ ಬಳಿ ನಿನ್ನೆ ರಾತ್ರಿ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಿಷ್ಕ್ರಿಯಗೊಳಿಸಿದರು. ಇದೊಂದು ಡಮ್ಮಿ ಬಾಂಬ್ ಎಂದು ಸಾಬೀತಾದ ಕಾರಣ ಸ್ಥಳೀಯರ ಆತಂಕ ದೂರವಾಯಿತು.

ಕುಮಟಾದಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಮಾದರಿಯ ವಸ್ತು

ಬುಧವಾರ ಸಂಜೆ ಕಾಲೇಜ್‌ನ ಹಿಂಭಾಗದಲ್ಲಿ ಬಾಂಬ್ ಹೋಲುವ ವಸ್ತುವನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾಲೇಜ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಅನುಮಾನಾಸ್ಪದ ವಸ್ತು ನೋಡಲು ಬಾಂಬ್ ರೀತಿ ಇದ್ದ ಕಾರಣ ಪೊಲೀಸರು ಕೂಡ ಆ ವಸ್ತುವಿನ ಬಳಿ ತೆರಳಲು ಹಿಂದೇಟು ಹಾಕಿದ್ದು ಕಂಡುಬಂದಿದೆ.

ಇದನ್ನೂ ಓದಿ: ವಾರದೊಳಗೆ ರಸ್ತೆ ಗುಂಡಿ ಮುಚ್ಚಿ: ಅಧಿಕಾರಿಗಳಿಗೆ ಸಚಿವ ಆರ್​.ಅಶೋಕ್ ಸೂಚನೆ

ನಂತರ ಅಗ್ನಿಶಾಮಕ ದಳ ಸೇರಿದಂತೆ ಶ್ವಾನದಳ ಕೂಡ ಸ್ಥಳದಲ್ಲಿ ಬೀಡುಬಿಟ್ಟು ಪರಿಶೀಲನೆ ನಡೆಸಿದ್ದರು. ಕೊನೆಗೆ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ತಂಡ ಪರಿಶೀಲನೆ ನಡೆಸಿ, ಇದೊಂದು ಡಮ್ಮಿ ಬಾಂಬ್ ಎಂದು ಹೇಳಿ ನಿಷ್ಕ್ರಿಯಗೊಳಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಡಮ್ಮಿ ಬಾಂಬ್ ತಯಾರಿಸಿರುವ ಶಂಕೆ ವ್ಯಕ್ತವಾಗಿದೆ.

Last Updated : Oct 28, 2021, 8:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.