ETV Bharat / state

ಪಾಳುಬಿದ್ಧಿದ್ದ ಕೆರೆಗೆ ಕಾಯಕಲ್ಪ; ವಿದೇಶಿ ಪ್ರವಾಸಿ ತಾಣಗಳಂತೆ ಕಂಗೊಳಿಸುತ್ತಿದೆ ಭೀಮಕೋಲ್ - ಪಂಚವಟಿ ವನ

ಪಾಳುಬಿದ್ದಿದ್ದ ಭೀಮಕೋಲ್ ಕೆರೆಗೆ ಜಿಪಂ ಅರಣ್ಯ ಇಲಾಖೆ ಕಾಯಕಲ್ಪ. ಹಣಕೋಣ ಭೀಮಕೋಲ್ ಕೆರೆ ಈಗ ಪ್ರವಾಸಿಗರ ಪ್ರಿಯ ಪ್ರವಾಸಿ ತಾಣ. ಸುತ್ತುವರಿದ ಹಚ್ಚ ಹಸಿರಿನ ಹೊದಿಕೆ, ವಿಶಾಲವಾದ ಕೆರೆ, ಭೂಮಿಗೆ ಚಾಚಿರುವಂತ ಬಾನು, ಹಾರಾಡುವ ಮೋಡಗಳ ಪ್ರಕೃತಿ ಸೌಂದರ್ಯ, ರಾಮಾಯಣದ ತರಹ ಪಂಚವಟಿ ವನ ಪ್ರವಾಸಿಗರ ಮನ ಸೆಳೆಯುತ್ತಿದೆ.

Bhimakol
ಭೀಮಕೋಲ್
author img

By

Published : Mar 21, 2023, 6:38 PM IST

ಭೀಮಕೋಲ್

ಕಾರವಾರ: ಅದು ಕಳೆದ ಕೆಲ‌ ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಕೆರೆ. ಅದರ ಸುತ್ತಮುತ್ತಲಿನ ಪ್ರದೇಶ ಗಿಡಗಂಟಿಗಳು ಬೆಳೆದು ಕುಡುಕರ ಪಾಲಿಗೆ ಪ್ರಮುಖ ಅಡ್ಡೆಯಾಗಿ ಮಾರ್ಪಟ್ಟಿತ್ತು. ಆದರೆ ಇದೀಗ ಈ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದ್ದು ಇಲ್ಲಿನ ಪಂಚವಟಿವನ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

Bhimakol lake
ಭೀಮಕೋಲ್ ಕೆರೆ

ಸದ್ಯ ಭೀಮಕೋಲ ಆಕರ್ಷಣೀಯ ಕೇಂದ್ರ: ಹೌದು, ಕಾರವಾರ ತಾಲೂಕು ಹಣಕೋಣ ವ್ಯಾಪ್ತಿಯ ಭೀಮಕೋಲ್ ಕೆರೆ ಇಂತಹದೊಂದು ಆಕರ್ಷಣೆಗೆ ಒಳಗಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಯೋಚಿತ ಕೆಲಸದಿಂದಾಗಿ ಪ್ರವಾಸಿಗರ ಪಾಲಿಗೆ ಸದ್ಯ ಭೀಮಕೋಲ್ ಆಕರ್ಷಣೀಯ ಕೇಂದ್ರವಾಗಿ ನಿತ್ಯವೂ ಪ್ರವಾಸಿಗರನ್ನು ತನ್ನತ್ತ್ತ ಆಕರ್ಷಿಸುತ್ತಿದೆ. ಇಲ್ಲಿನ ಹಚ್ಚ ಹಸಿರಿನ ಪರಿಸರ, ವಿಶಾಲವಾದ ಕೆರೆ, ಭೂಮಿಗೆ ಚಾಚಿರುವಂತ ಬಾನು, ಹಾರಾಡುವ ಮೋಡಗಳ ಪ್ರಕೃತಿ ಸೌಂದರ್ಯ ಬಂದಂತ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

Bhimakol
ಭೀಮಕೋಲ್

ನರೇಗಾ ಯೋಜನೆಯಡಿ ಅಭಿವೃದ್ಧಿ: ಇನ್ನು ಈ‌ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಕಳೆದ ಎರಡ್ಮೂರು ವರ್ಷಗಳ ಹಿಂದೆ ನರೇಗಾ ಯೋಜನೆಯಡಿ ಕೆರೆ ಸ್ವಚ್ಛ ಗೊಳಿಸಿ ಇದರ ದಡದಲ್ಲಿ ಚಿರೆಕಲ್ಲಿನ ಹಾಸು ನಿರ್ಮಿಸಿ ಮದ್ಯದಲ್ಲಿ ಹುಲ್ಲಿನ ಹಾಸು ಬೆಳೆಸಲಾಗಿತ್ತು.

ಅಲ್ಲದೆ ವಾಕಿಂಗ್ ಪಾತ್, ದಡದುದ್ದಕ್ಕೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಎಲ್ಲೋ ವಿದೇಶಗಳಲ್ಲಿ ಕಂಡುಬರುವ ರೀತಿ ಕಂಡುಬರುತ್ತಿದ್ದ ಕೆರೆ ಹಾಗೂ ಸುತ್ತಮುತ್ತಲಿನ ಸೌಂದರ್ಯ ಇಲ್ಲಿ ಅಭಿವೃದ್ಧಿ ಪಡಿಸಿದ ಬಳಿಕ ಮತ್ತಷ್ಟು ಪ್ರವಾಸಿಗರು ಕೆರೆಯತ್ತ ಆಕರ್ಷಿತರಾಗುವಂತಾಯಿತು.

Bhimakol
ಭೀಮಕೋಲ್

ಅರಣ್ಯ ಇಲಾಖೆಯಿಂದ ಪಂಚವಟಿ ವನ ನಿರ್ಮಾಣ:ಇನ್ನು ಕೆರೆ ಪಕ್ಕದಲ್ಲಿಯೇ ಇದ್ದ ಅರಣ್ಯ ಇಲಾಖೆ ಖಾಲಿ ಜಾಗ ಬಳಸಿಕೊಂಡು ಪ್ರವಾಸಿಗರ ಆಕರ್ಷಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಚಿಸಿದ್ದರು. ಅದರಂತೆ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ವನ ನಿರ್ಮಾಣಕ್ಕೆ ತೀರ್ಮಾನ ಮಾಡಿ ಕಳೆದ ಒಂದು ವರ್ಷದಿಂದ ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ನಿರ್ಮಿಸಲಾಗಿದೆ.

Bhimakol
ಭೀಮಕೋಲ್

ಅಲ್ಲದೆ ಕೆರೆ ಬಳಿ ತೆರಳಲು ಚೀರೆಕಲ್ಲಿನ ಹಾಸಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಜೊತೆಗೆ ಕೆರೆ ಪಕ್ಕದಲ್ಲಿಯೆ ಒಂದು ಕುಟೀರದ ರೀತಿ ಇನ್ನೊಂದನ್ನು ಅಣಬೆ ಆಕಾರದಲ್ಲಿ ಗೋಪುರ ಮಾಡಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಕೆರೆ ಸೌಂದರ್ಯ ಜೊತೆಗೆ ಅರಣ್ಯ ಇಲಾಖೆ ಪಂಚವಟಿವನ ಕೂಡ ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿದೆ.

ಇನ್ನು ಭೀಮಕೋಲ ಕೆರೆ ಅಭಿವೃದ್ಧಿಗೆ ಈ ಹಿಂದಿನ ಜಿಲ್ಲಾಪಂಚಾಯಿತಿ ಸಿಇಒ ಪ್ರಿಯಾಂಗ ಎಂ ಅವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ನೀಡಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಬಳಿಕ ಸಾಕಷ್ಟು ಪ್ರವಾಸಿಗರು ತೆರಳುವುದರಿಂದ ಇದರ ಪಕ್ಕದ ಅರಣ್ಯ ಇಲಾಖೆ ಜಾಗದಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ 14.5 ಲಕ್ಷ ಅನುದಾನದಲ್ಲಿ ಈ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.

ಮನ ತಣಿಸುವ ನಿಸರ್ಗದ ಸೌಂದರ್ಯ: ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಆಲ, ಅರಳಿ, ನೆಲ್ಲಿ, ಅತ್ತಿ ಮತ್ತು ಬಿಲ್ವಪತ್ರೆ ಮರಗಳ ಪಂಚ ಗಿಡಗಳನ್ನ ನೆಟ್ಟು ವನ ನಿರ್ಮಿಸಲಾಗಿದೆ. ಇದರೊಂದಿಗೆ ರಾಶಿ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಿಸಲಾಗಿದೆ.

ಇದರೊಂದಿಗೆ ಎರಡು ಕುಟೀರಗಳನ್ನು ನಿರ್ಮಿಸಿದ್ದು ಇಲ್ಲಿಗೆ ಬರುವಂತಹ ಪ್ರವಾಸಿಗರು ಇಲ್ಲಿಯೇ ಕುಳಿತು ನಿಸರ್ಗದ ಸೌಂದರ್ಯವನ್ನು ಸವಿಯಬಹುದಾಗಿದೆ. ಅಲ್ಲದೇ ಈಗಾಗಲೇ ಕೆರೆಯ ಇನ್ನೊಂದು ದಡದಲ್ಲಿ ವಾಕಿಂಗ್ ಪಾಥ್ ಇದ್ದು ಸಂಜೆ ವೇಳೆ ವಾಯುವಿಹಾರಕ್ಕೂ ಹೇಳಿ ಮಾಡಿಸಿದ ಸ್ಥಳವಾಗಿ ರೂಪುಗೊಂಡಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಓ ಮಂಜುನಾಥ ನಾವಿ.

ಬೋಟಿಂಗ್ ವ್ಯವಸ್ಥೆಗೆ ಚಿಂತನೆ:ಇನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿರುವ ಭೀಮಕೋಲ್ ಕೆರೆಗೆ ಎಲ್ಲೆಡೆಯಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಲ್ಲದೆ ದೇಶ ವಿದೇಶದಲ್ಲಿ ಕಾಣಸಿಗುವ ಪ್ರವಾಸಿ ತಾಣಗಳಂತೆ ಕಂಡುಬರುವ ಈ ತಾಣದಲ್ಲಿ ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲು ಕೂಡ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಅರಣ್ಯ ಸಮಿತಿಗೆ ನೀಡುವ ಬಗ್ಗೆ ಮತ್ತು 10 ರೂ ಶುಲ್ಕ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಇನ್ನು ಅರಣ್ಯ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೋಯಿಡಾ, ದಾಂಡೇಲಿ ಮಾರ್ಗವಾಗಿ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರನ್ನು ಈ ಭೀಮಕೋಲ್ ಪ್ರದೇಶ ನಿಸರ್ಗದ ದರ್ಶನ ಮಾಡಿಸುವ ತಾಣವಾಗಿ ಕೈಬೀಸಿ ಕರೆಯಲಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹಾಗೂ ಕುಟುಂಬಸ್ಥರು ಪ್ರವಾಸ ಕೈಗೊಳ್ಳಬಹುದಾದ ಪ್ರದೇಶವಾಗಿ ರೂಪಗೊಂಡಿದೆ ಎನ್ನುತ್ತಾರೆ ಸ್ಥಳೀಯ ತಿಮ್ಮಪ್ಪ ಹರಿಕಂತ್ರ.

ಒಟ್ಟಾರೇ ಕಾರವಾರ ಅಂದ್ರೆ ಕೇವಲ ಕಡಲತೀರ ಮಾತ್ರ ಅಂದುಕೊಂಡಿದ್ದವರಿಗೆ ಇದೀಗ ಭೀಮಕೋಲದಂತಹ ನೈಸರ್ಗಿಕ ತಾಣಗಳು ಕೈಬೀಸಿ ಕರೆಯಲು ಸಿದ್ಧವಾಗಿದ್ದು, ಪ್ರವಾಸಕ್ಕೆಂದು ಬರುವವರಿಗೆ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಉಣಬಡಿಸುವುದಂತೂ ಸತ್ಯ.

ಇದನ್ನೂಓದಿ:ಅರಣ್ಯ ಪ್ರದೇಶದಲ್ಲಿ ರೈಲಿನ ವೇಗ ತಗ್ಗಿಸುವ ಕುರಿತು ಆಕ್ಷೇಪಣೆ ಸಲ್ಲಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.