ETV Bharat / state

ಮಂಗನಕಾಯಿಲೆ ಇರುವ ಪ್ರದೇಶಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು: ಶಿವರಾಮ್ ಹೆಬ್ಬಾರ್ - Shivaram Hebbar

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಎಫ್.ಡಿ ಹಾಟ್ ಸ್ಪಾಟ್ ಆದ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ, ಅಧಿಕಾರಿಗಳೊಂದಿಗೆ ಕಾರ್ಮಿಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಭೆ ನಡೆಸಿದ್ರು.

ಹೆಬ್ಬಾರ್ ಸಭೆ
ಹೆಬ್ಬಾರ್ ಸಭೆ
author img

By

Published : Apr 14, 2020, 11:00 PM IST

ಶಿರಸಿ: ಮಂಗನಕಾಯಿಲೆ ಪ್ರದೇಶಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನ ಒದಗಿಸೋಕೆ, ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಕಾರ್ಮಿಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಜಿಲ್ಲೆಯ ಕೆಎಫ್​​ಡಿ ಹಾಟ್ ಸ್ಪಾಟ್ ಆದ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಹೆಬ್ಬಾರ್, ಜಿಲ್ಲೆಯ ಘಟ್ಟದ ಮೇಲಿನ ಭಾಗಗಳಲ್ಲಿ ಕೊರೊನಾ ಸಮಸ್ಯೆಯಿಲ್ಲ. ಆದ್ರೆ ಈ ಭಾಗದಲ್ಲಿ ಮಂಗನಕಾಯಿಲೆಯ ಆತಂಕ ಹೆಚ್ಚಾಗಿದೆ. ಈ ಭಾಗಕ್ಕೆ ದನಗಳ ಉಣುಗಿನ ಹತೋಟಿಗಾಗಿ ಅವಶ್ಯವಿರುವ ಲಸಿಕೆಯ ಕೊರತೆಯಿದೆ ಅನ್ನೋದು ತಿಳಿದು ಬಂದಿದೆ. ಲಸಿಕೆಯನ್ನ ಇನ್ನೆರಡು ದಿನಗಳಲ್ಲಿ ಒದಗಿಸಲಾಗುವುದು ಎಂದರು.

ವೆಂಟಿಲೇಟರ್ ಹೊಂದಿರೋ ಆ್ಯಂಬುಲೆನ್ಸ್ ಅತಿ ಅವಶ್ಯಕವಾಗಿ ಬೇಕಾಗಿದ್ದು, ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಒದಗಿಸಲಾಗುವುದು. ಅದೇ ರೀತಿ ಇಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ಇದು ಶೀಘ್ರವಾಗಿ ಆಗದ ಕೆಲಸವಾದ್ದರಿಂದ, ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.