ಉತ್ತರ ಕನ್ನಡ(ಭಟ್ಕಳ): ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಚಿನ್ನದ ಪಳ್ಳಿಯ ಇಮ್ರಾನ್ ಅವರು ಮೌಲಾನ ಅಬ್ದುಲ್ ಅಲೀಂ ಖತೀಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಇಮ್ರಾನ ಲಂಕಾ ಮಾತನಾಡಿ, ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದು ತೀವ್ರ ನಿರಾಶದಾಯಕವಾಗಿದೆ ಎಂದರು.
ಹಿಜಾಬ್ನ್ನು ತಮ್ಮ ನಂಬಿಕೆ ಮತ್ತು ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ನಂಬುವ ದೇಶದ ಮುಸ್ಲಿಂ ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸ್ವೀಕರಿಸಲಾಗದು ಎಂದು ಹೇಳಿದರು.
ತಂಜಿಮ್ ಕಚೇರಿಗೆ ಬಿಡುವು, ಬಂದ್ಗೆ ಕರೆ: ಹಿಜಾಬ್ ಕುರಿತಾದ ತೀರ್ಪು ಬಂದ ಹಿನ್ನೆಲೆ ಭಟ್ಕಳ ತಂಜೀಮ್ ಬುಧವಾರ ಕಾರ್ಯನಿರ್ವಹಿಸುವುದಿಲ್ಲ. ನಮ್ಮ ಇತರ ಸದಸ್ಯರು ಕೂಡ ಅವರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಿದ್ದಾರೆ. ನಾವು ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಸ್ವ ಇಚ್ಛಯಿಂದ ಬಂದ್ ಮಾಡಲು ಬಯಿಸಿದ್ರೆ, ಅವರು ಮಾಡಬಹುದು ಎಂದು ಹೇಳಿದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಪೂಜಾ ಸಾಮಗ್ರಿ ತರಲು ಹೋಗಿದ್ದ ತಂದೆ-ಮಗ ರಸ್ತೆ ಅಪಘಾತದಲ್ಲಿ ದುರ್ಮರಣ