ETV Bharat / state

ಸಂಸದ ಅನಂತಕುಮಾರ್ ಟ್ವಿಟ್ಟರ್​​​​​​​​  ಖಾತೆ ಲಾಕ್: ಟ್ವಿಟ್ಟರ್ ಭಾರತ ವಿರೋಧಿ ಎಂದ ಹೆಗಡೆ

ಸಂಸದ ಅನಂತಕುಮಾರ್ ಹೆಗಡೆ ಟ್ವಿಟ್ಟರ್​ ಖಾತೆಯನ್ನು ಲಾಕ್​​ ಮಾಡಲಾಗಿದ್ದು, ಅದನ್ನು ಅನ್​​ಲಾಕ್ ಮಾಡಲು ನಿಯಮ ಉಲ್ಲಂಘಿಸಿದ ಟ್ವೀಟ್ ಡಿಲೀಟ್ ಮಾಡುವಂತೆ ಸೂಚಿಸಿದೆ.

MP Anantakumar
ಸಂಸದ ಅನಂತಕುಮಾರ್
author img

By

Published : Apr 26, 2020, 2:25 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಟ್ವಿಟ್ಟರ್​​​ ಖಾತೆಯನ್ನು ಲಾಕ್ ಮಾಡಿದ್ದು, ಖಾತೆ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿ ಟ್ವಿಟ್ಟರ್​​ ಇದೀಗ ನೋಟಿಸ್ ನೀಡಿದೆ.

MP Anantakumar's Twitter account locked
ಅನಂತಕುಮಾರ್ ಟ್ವಿಟರ್ ಖಾತೆ ಲಾಕ್

ನೋಟಿಸ್​​ನಲ್ಲಿ ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದು, ಖಾತೆಯನ್ನು ಅನ್​​ಲಾಕ್ ಮಾಡಲು ನಿಯಮ ಉಲ್ಲಂಘಿಸಿದ ಟ್ವೀಟ್ ಡಿಲೀಟ್ ಮಾಡುವಂತೆ ಸೂಚಿಸಿದೆ.

MP Anantakumar's Twitter account locked
ಸಂಸದ ಅನಂತಕುಮಾರ್ ಹೆಗಡೆ
MP Anantakumar's Twitter account locked
ಟ್ವಿಟರ್ ಭಾರತ ವಿರೋಧಿ ಎಂದ ಹೆಗಡೆ
ಏಪ್ರಿಲ್ 8 ರಿಂದ ತಬ್ಲಿ ಘಿ ಜಮಾತ್​​ನ ವಿರುದ್ಧ ಅನಂತಕುಮಾರ ಹೆಗಡೆ ಅವರು ಬರಹಗಳ ಸರಣಿಯನ್ನು ಶುರು ಮಾಡಿದ್ದರು. ಸುಮಾರು ನಾಲ್ಕು ಸುಧೀರ್ಘ ಬರಹಗಳನ್ನು ಅವರು ಕೊರೊನಾ ವೈರಸ್ ಎಂಬ ಜಿಹಾದ್​​ನ್ನು ತಬ್ಲಿಘಿಗಳು ಹರಡುತ್ತಿದ್ದಾರೆ ಎಂಬ ಇತ್ಯಾದಿ ಅರ್ಥದಲ್ಲಿ ಪ್ರಕಟಿಸಿದ್ದರು. ಇದೇ ಟ್ವೀಟಿನ ನೆಪವಿಟ್ಟುಕೊಂಡು ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿರುವುದಾಗಿ ಅನಂತಕುಮಾರ್​​ ಹೆಗಡೆ ಹೇಳಿದ್ದಾರೆ.
MP Anantakumar
ಸಂಸದ ಅನಂತಕುಮಾರ್ ಟ್ವಿಟರ್ ಖಾತೆ ಲಾಕ್
MP Anantakumar
ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ

ಟ್ವಿಟರ್ ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್​​ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟರ್ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರ್ಯಗೊಳಿಸಿ, ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್​​ಗೆ ಹಣ ಪಾವತಿಸಿ ಜಾಹೀರಾತು ನೀಡಿದ್ದಾರೆ.

Twitter account
ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಲ್ಲಿನ ಟ್ವೀಟ್​​..

ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ತಬ್ಲಿಘಿ ಜಮಾತ್​​ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಅಕೌಂಟನ್ನು ರದ್ದು ಮಾಡಿದ್ದಾರೆ. ಟ್ವಿಟರ್ ಭಾರತ ವಿರೋಧಿಯಾಗಿದೆ ಎಂದು ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

ಇನ್ನು ನಾನು ಮಾಡಿರುವ ಟ್ವೀಟ್​​ ತೆಗೆದು ಹಾಕಿದರೆ ಅನ್ ಲಾಕ್ ಮಾಡುವುದಾಗಿ ಟ್ವಿಟರ್ ಹೇಳಿದೆ. ಆದರೆ ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ನಾನು ನೇರವಾಗಿ ವಿರೋಧಿಸುತ್ತೇನೆ. ಮಾಡಿರುವ ಟ್ವೀಟ್ ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧಿ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.