ಶಿರಸಿ : ಅಕ್ರಮವಾಗಿ ಮನೆ ಪ್ರವೇಶಿಸಿ ಬಲವಂತದಿಂದ ಮತ್ತು ಬರುವ ಔಷಧ ಸಿಂಪಡಿಸಿ ಮಗಳನ್ನು ಸ್ವತಃ ತಾಯಿಯೇ ಅಪಹರಿಸಿದ ಘಟನೆ ಶಿರಸಿಯ ಬಸವೇಶ್ವರ ನಗರದಲ್ಲಿ ನಡೆದಿದೆ.
![complaint copy](https://etvbharatimages.akamaized.net/etvbharat/prod-images/kn-srs-01-magala-apaharana-photo-ka10005_26122020104536_2612f_1608959736_768.jpg)
ರಿತಿಕಾ ಕಿಣಿ ಅಪಹರಣಗೊಂಡ ಮಹಿಳೆ. ಇತ್ತೀಚೆಗೆ ಮಣಿಕಂಠ ಕೊಡಿಯಾ ಎಂಬಾತ ಯುವತಿಯ ಮನೆಯವರ ವಿರೋಧದ ನಡುವೆಯೇ ಪ್ರೀತಿಸಿ, ವಿವಾಹವಾಗಿದ್ದನು. ಈ ವಿಷಯವನ್ನೇ ಮುಂದಿಟ್ಟುಕೊಂಡು ತಾಯಿ ಹಾಗೂ ಸಹಚರರು ಅಪಹರಿಸಿದ್ದಾಗಿ ದೂರು ದಾಖಲಾಗಿದೆ.
ಓದಿ : ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು
ಆರೋಪಿಗಳಾದ ರೂಪಾ ಶಿರಸಿಕರ, ಕಿರಣ ಬೆಲ್ಲದ್ ಹಾಗೂ ಇತರರು ಮನೆಗೆ ನುಗ್ಗಿ ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿದ್ದರು. ಇದರ ಜೊತೆಗೆ ರಿತಾಕಾಳಿಗೆ ಮತ್ತು ಬರುವ ಔಷಧಿಯನ್ನು ಸಿಂಪಡಿಸಿ ಅಪಹರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.