ETV Bharat / state

ಮೋದಿ ಏನೇ ಸರ್ಕಸ್ ಮಾಡಿದ್ರೂ ಮತ್ತೊಮ್ಮೆ ಪ್ರಧಾನಿಯಾಗಲ್ಲ: ಹೆಚ್​ಡಿಕೆ ಭವಿಷ್ಯ

ಮೋದಿ ಏನೇ ಸರ್ಕಸ್ ಮಾಡಿದರು, ಸುಳ್ಳು ಪ್ರಚಾರ ನಡೆಸಿದರೂ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ- ಲೋಕಸಭೆಗೆ ಈ ಬಾರಿ ರಾಜ್ಯದಿಂದ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆ ಆಗುತ್ತಾರೆ- ಕಾರವಾರದಲ್ಲಿ ಭವಿಷ್ಯ ನುಡಿದ್ರು ಸಿಎಂ ಕುಮಾರಸ್ವಾಮಿ

author img

By

Published : Apr 4, 2019, 7:10 PM IST

ಹೆಚ್​ಡಿಕೆ

ಕಾರವಾರ: ಕೇಂದ್ರದಲ್ಲಿ ಈ ಬಾರಿ ಯಾವುದೇ ಪಕ್ಷಗಳಿಗೆ ಬಹುಮತ ಬರುವುದಿಲ್ಲ. ಕೇಂದ್ರದ ಪ್ರಮುಖ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಏನೇ ಸರ್ಕಸ್ ಮಾಡಿದರೂ, ಸುಳ್ಳು ಪ್ರಚಾರ ನಡೆಸಿದರೂ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಎಂದು ಮುಖ್ಯಂಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ಈ ಬಾರಿ ರಾಜ್ಯದಿಂದ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳೇ ಹೆಚ್ಚಾಗಿ ಪ್ರವೇಶ ಮಾಡುತ್ತಾರೆ. ಅಭಿವೃದ್ಧಿ ಸಂಬಂಧ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಮುಖ ಸಮಸ್ಯೆಗಳಿಗೆ ತೊಡಕಾಗಿರುವ ಕಾನೂನುಗಳನ್ನು ತಿದ್ದುಪಡಿ ತರುವ ಯೋಚನೆಯನ್ನು ಈಗಾಗಲೇ ಮಾಡಿದ್ದೇವೆ ಎಂದರು.

ಮೋದಿ ಏನೇ ಸರ್ಕಸ್ ಮಾಡಿದರು ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ

ಸಂಸದ ಅನಂತಕುಮಾರ್ ಹೆಗಡೆ ಸತತ ಐದು ಬಾರಿ ಆಯ್ಕೆಯಾದರೂ ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ. ಅರಣ್ಯ ಹಕ್ಕುದಾರರ ಬಗ್ಗೆ ಒಂದೇ ಒಂದು ಬಾರಿ ಸಂಸತ್​​ನಲ್ಲಿ ಮಾತನಾಡಿಲ್ಲ. ಕರ್ನಾಟಕದಲ್ಲಿ ರೈತರ ಸಾಲಮನ್ನಾ ಬಗ್ಗೆ ಪ್ರಶ್ನಿಸುತ್ತಾರೆ. ಆದರೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕಿನಿಂದ ೪೩ ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಲಾಗಿದೆ. ಇಷ್ಟೊಂದು ಮಾತನಾಡುವ ಅನಂತಕುಮಾರ್ ಕೇಂದ್ರ ಸಚಿವರಾಗಿ ಅಂಕೋಲಾ ಹುಬ್ಬಳ್ಳಿ ರೈಲ್ವೆ, ತಾಳಗುಪ್ಪ-ಸಿದ್ದಾಪುರ ರೈಲ್ವೆ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಐಟಿ ಅಧಿಕಾರಿಗಳು ಸತ್ಯ ಹರಿಶ್ಚಂದ್ರರಲ್ಲ:
ಇನ್ನು ಐಟಿ ಅಧಿಕಾರಿಗಳೇನು ಸತ್ಯ ಹರಿಶ್ಚಂದ್ರರಲ್ಲ. ಅವರ ಕಥೆಗಳು ನಮಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಐಟಿ ಅಧಿಕಾರಿಗಳು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಅವರ ಮನೆ ಮೇಲೆ ದಾಳಿ ನಡೆಸಿದಾಗ ಕೋಟಿ ಕೋಟಿ ಅಕ್ರಮ ಹಣ ಪತ್ತೆಯಾಗಿದೆ. ಹಾಸನ ಹಾಗೂ ಮಂಡ್ಯದಲ್ಲಿ ದಾಳಿ ನಡೆಸುವ ಅಧಿಕಾರಿಗಳು ಬಿಜೆಪಿ ಮುಖಂಡರ ಮೇಲೆ ದಾಳಿ ನಡೆಸಲಿ ಎಂದು ಸಿಎಂ ಸವಾಲು ಹಾಕಿದರು.

ದೇಶಪಾಂಡೆಗೆ ಅಸಮಾಧಾನ ಇಲ್ಲ:
ಮೈತ್ರಿ ಅಭ್ಯರ್ಥಿ ಘೋಷಣೆಯಾದಾಗ ಸಾಮಾನ್ಯವಾಗಿ ನಮ್ಮ ಪಕ್ಷಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲವೆಂಬ ಅಸಮಾಧಾನ ಸಹಜ. ಆದರೆ ಅದೆಲ್ಲವು ಇದೀಗ ಬಗೆಹರಿದಿದೆ. ದೇಶಪಾಂಡೆ ಅವರು ಕಾರಣಾಂತರಗಳಿಂದ ಇಂದು ಹಾಜರಿರಲಿಲ್ಲ. ಆದರೆ ಅವರ ಬೆಂಬಲ ನಮಗಿದೆ. ಅಭ್ಯರ್ಥಿ ಘೋಷಿಸುವಾಗ ತಮ್ಮನ್ನು ಕೇಳದ್ದಕ್ಕೆ ಸ್ವಲ್ಪ ಅಸಮಾಧಾನವಿತ್ತು. ಅದನ್ನು ಬಹಿರಂಗವಾಗಿಯೇ ಹೇಳಿದ್ದರು. ಆದರೆ ಇದೀಗ ಅದೆಲ್ಲಾ ಬಗೆಹರಿದಿದ್ದು, ಸ್ಥಳೀಯವಾಗಿರುವ ಭಿನ್ನಾಭಿಪ್ರಾಯವನ್ನು ಸಧ್ಯದಲ್ಲಿಯೇ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಗುವುದು ಎಂದು ಸಿಎಂ ಇದೇ ವೇಳೆ ತಿಳಿಸಿದರು.

Intro:ಕಾರವಾರ: ಸ್ಕ್ರೀಪ್ಟ್ ಏಪ್ಟಿಪಿ ಮೂಲಕ ಕಳುಹಿಸಲಾಗಿದೆ ಸರ್

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.