ಭಟ್ಕಳ: ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ ಸ್ವರೂಪವಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ.
ಮಿಶ್ರ ತಳಿ ಆಕಳುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಮನೆಗೆ ಒಂದು ಗೋವು ಸಾಕಲೇಬೇಕಿದ್ದು, ಇದರಿಂದ ಮನೆಯಲ್ಲಿ, ಮನಸಲ್ಲಿ ಸಕಾರಾತ್ಮಕ ಅಂಶಗಳು ನಮ್ಮಲ್ಲಿ ಸೇರಲಿವೆ. ದನಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ಇದರ ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದೆ. ಇದರಿಂದ ಗೋ ಹತ್ಯೆ ನಿಲ್ಲಲಿದೆ ಎಂದರು.
ಮಿಶ್ರ ತಳಿ ಪ್ರದರ್ಶನದಿಂದ ಹೈನುಗಾರಿಕೆ ಬಗ್ಗೆ ಆಸಕ್ತಿ ಇರುವ ರೈತರಿಗೆ ಗೋ ತಳಿಯ ಬಗ್ಗೆ ಮಾಹಿತಿ, ಮೇವಿನ ಸಸಿಯ ಬಗ್ಗೆ ವಿವರ ಸಿಗಲಿದೆ. ಸರ್ಕಾರದ ಸಂಪೂರ್ಣ ಸೌಲಭ್ಯಗಳು ರೈತರಿಗೆ ಸಿಕ್ಕಲ್ಲಿ ಮಾತ್ರ ಅದು ಸಾರ್ಥಕವಾಗಲಿದೆ ಎಂದರು.