ETV Bharat / state

ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ: ಶಾಸಕ ಸುನೀಲ ನಾಯ್ಕ - MLA Sunil Naik Statement

ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು, ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

MLA Sunil Naik
ಶಾಸಕ ಸುನೀಲ ನಾಯ್ಕ
author img

By

Published : May 26, 2021, 8:41 AM IST

ಭಟ್ಕಳ: ಸಾಮಾನ್ಯ ಜ್ಞಾನವಿಲ್ಲದೆ ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ ಮಾಜಿ ಶಾಸಕರೇ ಎಂದು ಶಾಸಕ ಸುನೀಲ‌ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಸುನೀಲ ನಾಯ್ಕ

ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು, ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಸತತ 4 ದಿನದ ಚಂಡಮಾರುತದ ಅಬ್ಬರ ಇರುವ ವೇಳೆ ಯಾರು ಕಾಮಗಾರಿ ಮಾಡಿಸಲು ಸಾಧ್ಯವಿದೆ. ಆದರೆ ಸಮಸ್ಯೆಯಾದ ಗಂಟೆಯೊಳಗೆ ಹಾನಿಯಾದ ಎಲ್ಲಾ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿವ ಕೆಲಸ ಮಾಡಿದ್ದೇನೆ.

ತಾವೇನು ಜವಾಬ್ದಾರಿಯುತ ಮಾಜಿ ಶಾಸಕರಾಗಿ ಇಂತಹ ಸಂದರ್ಭಗಳಲ್ಲಿ ರಾಜಕೀಯದ‌ ತೆವಲಿನ ಹೇಳಿಕೆ ನೀಡುವುದಲ್ಲ. ನಿಮ್ಮ ಸವಾಲುಗಳೆನಿದ್ದರೂ 2 ವರ್ಷದ ಬಳಿಕ ಬರುವ ಚುನಾವಣೆಯ ಅಖಾಡದಲ್ಲಿ‌ ಎದುರು‌ ನಿಲ್ಲಿ. ಜನರಿಗೆ ಶಾಶ್ವತ ಪರಿಹಾರದ ಕೆಲಸ ಮಾಡುವತ್ತ ನಾನು ಕೆಲಸ ಮಾಡುತ್ತಿದ್ದೇನೆ. ಜನರನ್ನು ದಾರಿ‌‌ ತಪ್ಪಿಸುವ ಕೆಲಸ‌ ಮಾಡಿದರೆ ನಿಮ್ಮ ವ್ಯಕ್ತಿತ್ವವೇ ಜನರ ಮುಂದೆ ಹರಾಜಾಗಲಿದೆ. ಸ್ವಲ್ಪವಾದರೂ ಮಾನ ಮರ್ಯಾದೆ ಇಟ್ಟುಕೊಳ್ಳಿ ಎಂದು‌ ಗುಡುಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.