ಕಾರವಾರ: ರಾಜ್ಯ ರಾಜಕೀಯದಲ್ಲಿ ಯಾವುದೇ ನಾಯಕತ್ವದ ಬದಲಾವಣೆ ಇಲ್ಲ. ಸಂಪುಟ ವಿಸ್ತರಣೆ ಮತ್ತು ಪುನಾರಚನೆ, ಖಾತೆ ಬದಲಾವಣೆ ಬಗ್ಗೆ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳೂ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನದ ಮಾತುಗಳ ಮೂಲಕ ನಮ್ಮಲ್ಲಿ ಹೊಸ ಉತ್ಸಾಹ ತುಂಬಿಸಿದ್ದಾರೆ. ಸರ್ಕಾರ ಮತ್ತು ಪಾರ್ಟಿ ಸುಸಂಘಟಿತವಾಗಬೇಕೆಂದು ಶಕ್ತಿ ತುಂಬಿದ್ದಾರೆ. ಪಕ್ಷದ ಪ್ರಭಾರಿಗಳಾದ ಅರುಣ್ ಸಿಂಗ್ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ, ಖಾತೆ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಎಲ್ಲವೂ ಸರಿಯಾಗಿ ಇದ್ದಾಗಲೇ ಈ ರೀತಿಯ ಚರ್ಚೆ ನಡೆಯುತ್ತದೆ. ನಾಯಕತ್ವದ ಬದಲಾವಣೆ ಪಕ್ಷದವರ ಹೇಳಿಕೆ ಅಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹಿರಿಯರಾದ ಬಿ.ಎಲ್. ಸಂತೋಷ್ ಉತ್ತರಿಸಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಶಕ್ತಿ ತುಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಎಲ್ಲರೂ ಜವಾಬ್ದಾರಿ ಹೊರಲು ಸಿದ್ಧರಾಗಿ ಎಂದಿದ್ದಾರೆ. ಪಕ್ಷದ ನೆಲೆಕಟ್ಟಿನ ಹಿನ್ನೆಲೆ, ಸೈದ್ಧಾಂತಿಕ ವಿಚಾರದಲ್ಲೂ ಇದು ಸರಿಯಾಗಿದೆ. ಕೆಲವರಿಗೆ ಈ ರೀತಿ ಹೇಳಿಕೆ ಹೊಸದು ಎನ್ನಿಸುತ್ತದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ಕ್ಯಾಬಿನೆಟ್ ದರ್ಜೆ ಪಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಸವ ಜಯಂತಿ ನಿಮಿತ್ತ ಡ್ಯಾನ್ಸ್ ಮಾಡಿದ ರಮೇಶ ಕತ್ತಿ: ಡ್ಯಾನ್ಸ್ ವಿಡಿಯೋ ವೈರಲ್