ETV Bharat / state

ಶಾಸಕರ ಮನವಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಲಾಗುವುದು: ಸಚಿವ ಶೆಟ್ಟರ್ - ಕಾರವಾರ ಸುದ್ದಿ

ಶಾಸಕರ ಮನವಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಿ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

Minister jagadish shetter meeting with offials in karwar
ಶಾಸಕರುಗಳ ಮನವಿಯಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಲಾಗುವುದು: ಸಚಿವ ಜಗದೀಶ್​ ಶೆಟ್ಟರ್
author img

By

Published : Jun 19, 2020, 7:42 PM IST

ಕಾರವಾರ(ಉತ್ತರಕನ್ನಡ): ಕೈಗಾರಿಕಗಳು ಕೇವಲ ಬೆಂಗಳೂರಿಗೆ ಕೇಂದ್ರಿಕೃತವಾಗಿದ್ದು, ಇಂತಹ ಯೋಚನೆಯಿಂದ ಹೊರ ಬರಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾಕೆ ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ಕಾರವಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ನೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಟೈರ್ 2, ಟೈರ್ 3 ಸಿಟಿಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಶಾಸಕರ ಮನವಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಿ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದಿಂದ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರಿಗೂ ಅನುಕೂಲವಾಗಲಿದೆ. ಆದರೆ ಇದೀಗ ಈ ವಿಚಾರ ಕೋರ್ಟ್​ನಲ್ಲಿದೆ. ಈ ಬಗ್ಗೆ ಜನರೇ ಜಾಗೃತರಾಗಬೇಕು. ಸರ್ಕಾರ ಕೂಡ ಕಾನೂನು ಹೋರಾಟಕ್ಕೆ ಆದ್ಯತೆ ನೀಡಿ, ಕೋರ್ಟ್‌ಗೆ ಮನವರಿಕೆ ಮಾಡೋ ಕೆಲಸ ಮಾಡಲಿದೆ ಎಂದರು.

ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಉತ್ತರ ಕನ್ನಡ ಮಾತ್ರವಲ್ಲದೇ ಅದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಯೋಜನೆ ಜಾರಿ ಸಂಬಂಧ ಪೂರ್ವಭಾವಿಯಾಗಿ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದ್ದು, ಕೂಡಲೇ ವಿಮಾನ ನಿಲ್ದಾಣಕ್ಕೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.