ETV Bharat / state

'ಬಹಿರಂಗ ಹೇಳಿಕೆ ಬಿಟ್ಟು ಸಿಎಂ, ರಾಜ್ಯಾಧ್ಯಕ್ಷರ ಬಳಿ ಮಾತನಾಡಿ'

ಪಕ್ಷದ ಹಿತದೃಷ್ಟಿಯಿಂದ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೆಚ್​.ವಿಶ್ವನಾಥ್​ ಹಾಗೂ ಸಿ.ಪಿ.ಯೋಗೇಶ್ವರ್​ಗೆ ಸಚಿವ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.

dsd
ಹೆಚ್​. ವಿಶ್ವನಾಥ್​ ಹಾಗೂ ಸಿಪಿ ಯೋಗೇಶ್ವರ್​ಗೆ ಸಚಿವ ಜಗದೀಶ ಶೆಟ್ಟರ್ ಕಿವಿಮಾತು
author img

By

Published : Dec 3, 2020, 1:35 PM IST

ಶಿರಸಿ : ಪಕ್ಷದ ಅಡಿಯಲ್ಲಿ ಬರುವವರು ಬಹಿರಂಗವಾಗಿ ಮಾತನಾಡದೇ ಪಕ್ಷದಲ್ಲಿ ಚರ್ಚಿಸಿ, ನಮ್ಮ ಮಾತುಗಳು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.

ಹೆಚ್​. ವಿಶ್ವನಾಥ್​ ಹಾಗೂ ಸಿಪಿ ಯೋಗೇಶ್ವರ್​ಗೆ ಸಚಿವ ಜಗದೀಶ ಶೆಟ್ಟರ್ ಕಿವಿಮಾತು

ಮಾಜಿ ಸಚಿವ ಹೆಚ್​.ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್​ ಬಹಿರಂಗ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರ ವಿಚಾರ ಹೇಳಲು ಅವಕಾಶವಿದೆ. ಯಾವುದೇ ವಿಷಯಕ್ಕೆ ಬೇಸರವಿದ್ದಲ್ಲಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳಿಗೆ ತಿಳಿಸಲಿ. ಅವರು ವಿಶ್ವನಾಥ್​ ಇರಲಿ ಅಥವಾ ಮತ್ತೊಬ್ಬರಿರಲಿ. ಸಂಯಮ ಕಾಯ್ದುಕೊಂಡು ಹೋಗಬೇಕು ಎಂದರು.

ಗ್ರಾಮ ಪಂಚಾಯತ್​ ಚುನಾವಣೆಯ ಹಿನ್ನೆಲೆ 5-6 ತಂಡಗಳನ್ನು ರಚನೆ ಮಾಡಿಕೊಂಡು 4 ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ಬಿಜೆಪಿ ಗ್ರಾಮ ಪಂಚಾಯತ್​ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಶಾಸಕರ, ಸಂಸದರ ಚುನಾವಣೆಗೆ ನೀಡಿದಷ್ಟೇ ಮಹತ್ವ ನೀಡಲಾಗಿದೆ. ಆ ಕಾರಣಕ್ಕೆ ಸಮಾವೇಶ ನಡೆಸಿ ಕಾರ್ಯಕರ್ತರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.