ETV Bharat / state

ಕಸದಿಂದ ತುಂಬಿ ತುಳುಕುತ್ತಿರುವ ಮಾವಳ್ಳಿ ಪಂಚಾಯತ್​ ನ್ಯಾಷನಲ್ ಕಾಲೋನಿ - Mavalli Panchayat National Colony

ಭಟ್ಕಳ ತಾಲೂಕಿನ ಮುರ್ಡೇಶ್ವರದ ಮಾವಳ್ಳಿ -1 ಪಂಚಾಯತ್​ನ ನ್ಯಾಷನಲ್ ಕಾಲೋನಿ ಸಮೀಪದಲ್ಲಿನ ಶಾಲಾ ಆವರಣ ಹಾಗೂ ಹಿಂದೂ ರುದ್ರಭೂಮಿಯ ಪಕ್ಕ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚಾಗಿ ದುರ್ವಾಸನೆ ಬರುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Mavalli Panchayat National Colony
ಕಸದಿಂದ ತುಂಬಿ ತುಳುಕುತ್ತಿರುವ ಮುರ್ಡೇಶ್ವರದ ಮಾವಳ್ಳಿ ಪಂಚಾಯತ್​ ನ್ಯಾಶನಲ್ ಕಾಲೋನಿ
author img

By

Published : Jun 30, 2020, 9:43 AM IST

ಭಟ್ಕಳ: ತಾಲೂಕಿನ ಮುರ್ಡೇಶ್ವರ ಮಾವಳ್ಳಿ-1 ಗ್ರಾಮ ಪಂಚಾಯತ್​ ವ್ಯಾಪ್ತಿಯ ನ್ಯಾಷನಲ್ ಕಾಲೋನಿಯಲ್ಲಿ ಪ್ರತಿ ವರ್ಷ ಹರಕೆಯಂತೆ ರಸ್ತೆಯ ಪಕ್ಕದ ಮೈದಾನದಲ್ಲಿ ಟನ್​ಗಟ್ಟಲೇ ಕಸದ ರಾಶಿ ಬೀಳುತ್ತಿದೆ. ಇದರ ನಡುವೆ ಜನರು ತಮ್ಮ ಬದುಕು ಸಾಗಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವಂತೆ ಸ್ಥಳೀಯರು ಪಂಚಾಯತ್​​​ಗೆ ಮನವಿ ನೀಡಿ ಸ್ಥಳೀಯರು ಬೇಸತ್ತು ಹೋಗಿದ್ದಾರೆ.

ಕಸದಿಂದ ತುಂಬಿ ತುಳುಕುತ್ತಿರುವ ಮುರ್ಡೇಶ್ವರದ ಮಾವಳ್ಳಿ ಪಂಚಾಯತ್​ ನ್ಯಾಷನಲ್ ಕಾಲೋನಿ

ತಾಲೂಕಿನ ಮುರ್ಡೇಶ್ವರದ ಮಾವಳ್ಳಿ-1 ಪಂಚಾಯತ್​ನ ನ್ಯಾಷನಲ್ ಕಾಲೋನಿ ಸಮೀಪದಲ್ಲಿನ ಶಾಲಾ ಆವರಣ ಹಾಗೂ ಹಿಂದೂ ರುದ್ರಭೂಮಿಯ ಪಕ್ಕ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚಾಗಿ ದುರ್ವಾಸನೆ ಬರುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಅಕ್ಕ-ಪಕ್ಕದಲ್ಲಿನ ನಿವಾಸಿಗಳೇ ಬೀದಿಯಲ್ಲಿ ಕಸ ಬಿಸಾಡಿ ಹೋಗುತ್ತಿದ್ದಾರೆ. ಎಸೆದ ಕಸ ಎಲ್ಲೆಂದರಲ್ಲಿ ಹರಡಿದ್ದು, ಅದನ್ನು ತೆರವುಗೊಳಿಸದ ಕಾರಣದಿಂದಾಗಿ ಕೊಳೆತು ನಾರುತ್ತಿದೆ. ಇದರಿಂದ ಇಡೀ ಪರಿಸರವೇ ಕಲುಷಿತಗೊಂಡಿದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದ ಸ್ಥಳಿಯ ಪಂಚಾಯತ್​ ಕಾರಣದಿಂದ ಸುತ್ತಮುತ್ತಲಿನವರು ಕಸ ಸೇರಿದಂತೆ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ರಸ್ತೆ ಪಕ್ಕದಲ್ಲೇ ಮಳೆಯ ನೀರು ಸರಾಗವಾಗಿ ಹರಿಯದೇ ನೀರು ತುಂಬಿಕೊಳ್ಳುತ್ತಿರುವುದರಿಂದ ಅಲ್ಲೇ ಕೊಳೆತು ರೋಗ ರುಜಿನಗಳಿಗೆ ದಾರಿ ಮಾಡಿಕೊಡುತ್ತಿದೆ. ಕಸದ ರಾಶಿ ತುಂಬಿದ್ದರೂ ಅದನ್ನು ತೆರವುಗೊಳಿಸಲು ಸ್ಥಳೀಯ ಪಂಚಾಯಿತಿ ಮುಂದಾಗುತ್ತಿಲ್ಲ. ಇವೆಲ್ಲದರ ನಡುವೆ ಕೊರೊನಾ ಸೋಂಕಿನ ಭೀತಿ ಆರಂಭವಾಗಿದ್ದು, ಈ ಭಾಗದ ಜನರಿಗೆ ಕಸ ವಿಲೇವಾರಿಯಾಗದಿರುವುದು ತಲೆನೋವಾಗಿ ಪರಿಣಮಿಸಿದೆ. ಕಳೆದ ವಾರ ಇಲ್ಲಿಯ 4ನೇ ಹಾಗೂ 5ನೇ ಕ್ರಾಸ್​​​​ ನಿವಾಸಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಇಲ್ಲಿನ ಸಾರ್ವಜನಿಕರಿಗೆ ಆತಂಕ ಎದುರಾಗಿದೆ.

ಕಸ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಕೂಡ ಹರಿಯದೆ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಈ ಪ್ರದೇಶ ಮಾರ್ಪಾಡಾಗುತ್ತಿದೆ. ಸೊಳ್ಳೆಗಳು ಈ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು ಸ್ಥಳೀಯರಿಗೆ ಇದೀಗ ಸಾಂಕ್ರಾಮಿಕ ರೋಗದ ಭಯ ಶುರುವಾಗಿದೆ. ಜೊತೆಗೆ ಪಕ್ಕದಲ್ಲೇ ಕಸದ ರಾಶಿಯಲ್ಲಿರುವ ತ್ಯಾಜ್ಯವನ್ನು ಬಿಡಾಡಿ ನಾಯಿಗಳ ಕಚ್ಚಿ ಎಲ್ಲೆಂದರಲ್ಲಿ ಹೊತ್ತು ಹೋಗುತ್ತಿದ್ದು ಇನ್ನಷ್ಟು ಭಯಕ್ಕೆ ಕಾರಣವಾಗಿದೆ.

ಟ್ವಿಟರ್​ನಲ್ಲಿ ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ: ಇಲ್ಲಿನ ನ್ಯಾಷನಲ್ ಕಾಲೋನಿ ಯುವಕರು ಹಾಗೂ ಸ್ಥಳೀಯರು ಕಸ ವಿಲೇವಾರಿ ಹಾಗೂ ಪ್ರತಿ ವರ್ಷದ ಕಸದ ರಾಶಿ ಬೀಳುತ್ತಿರುವ ಬಗ್ಗೆ ಶಾಸಕರ ಗಮನಕ್ಕೆ ಬರುವಂತೆ ಟ್ವಿಟರನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿನ ಮೈದಾನದಲ್ಲಿಯೇ ಶಾಸಕ ಸುನೀಲ ನಾಯ್ಕ ಅವರು ಕ್ರೀಡಾಪಟು ಆಗಿದ್ದ ವೇಳೆ ಕ್ರಿಕೆಟ್ ಆಟವಾಗಿದ್ದು ಈಗ ನಮಗೆ ಇದರ ಅವಕಾಶ ಇಲ್ಲವಾಗಿದೆ. ಕಾರಣ ಇಲ್ಲಿ ಸರಿಯಾದ ಕಸ ವಿಲೇವಾರಿಗೆ ಸಿಗದ ಪರಿಹಾರವಾಗಿದೆ. ಈ ತಕ್ಷಣ ಜನಪ್ರತಿನಿಧಿಗಳು ಅಥವಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಶಾಶ್ವತ ಪರಿಹಾರ ನೀಡಬೇಕೆಂದು ಅಭಿಯಾನ ಆರಂಭಿಸಿದ್ದಾರೆ.

Mavalli Panchayat National Colony
ಟ್ವಿಟರ್​ನಲ್ಲಿ ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಪಂಚಾಯತ್​ ಎದುರು ಕಸ ಬೀಳಲಿದೆ: ಸ್ಥಳೀಯ ಎಲ್ಲ ಜನಪ್ರತಿನಿಧಿಗಳಿಗೆ ,ಸ್ಥಳೀಯ ಪಂಚಾಯತ್ ಪಿಡಿಒ ಅವರಿಗೆ ಈಗಾಗಲೇ ಸಾಕಷ್ಟು ಬಾರಿ ವಿಷಯ ತಿಳಿಸಲಾಗಿದೆ. ಇಲ್ಲಿನ ಕಸದ ಸಮಸ್ಯೆ ಸಲುವಾಗಿ ಉಸ್ತುವಾರಿ ಮಂತ್ರಿಗಳಿಗೆ, ಸ್ಥಳೀಯ ಶಾಸಕರಿಗೆ, ಸ್ಥಳೀಯ ಇಲಾಖೆಗೆ ಸಾಮಾಜಿಕ ಜಾಲತಾಣಗಳ ಮುಖೇನ ಗಮನ ಸೆಳೆದಿದ್ದೇವೆ. ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಎರಡು ಮೂರು ದಿನದಲ್ಲಿ ಈ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ, ಇಲ್ಲಿಯ ಕಸವನ್ನು ಪಂಚಾಯತ್ ಮುಂದೆ ತೆಗೆದುಕೊಂಡು ಹೋಗಿ ಹಾಕುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.