ಕಾರವಾರ: ರಸ್ತೆ ದಾಟುವಾಗ ನೆರೆ ನೀರಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಶವ ಇಂದು ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸೇತುವೆ ಬಳಿ ಪತ್ತೆಯಾಗಿದೆ.
ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ಮೃತ ದುರ್ದೈವಿ. ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿಯಲ್ಲಿ ನಿನ್ನೆ ನೀರು ತುಂಬಿತ್ತು. ಈ ವೇಳೆ, ಬೈಕ್ ತಳ್ಳಿಕೊಂಡು ತನ್ನ ಮಾವನೊಂದಿಗೆ ತೆರಳುವಾಗ ಆಯಾತಪ್ಪಿ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಅದೃಷ್ಟವಶಾತ್ ಮೃತ ವ್ಯಕ್ತಿಯ ಮಾವ ಬಚಾವ್ ಆಗಿದ್ದರು.
ಇಂದು ಗುಳ್ಳಾಪುರ ಸೇತುವೆ ಬಳಿ ಬೈಕ್ ಸವಾರನ ಶವ ಪತ್ತೆಯಾಗಿದ್ದು, ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.