ಕಾರವಾರ (ಉ.ಕ): ಕೊರೊನಾದಿಂದ ಗುಣಮುಖರಾಗಿದ್ದರೂ ಜನ ತಮ್ಮ ಬಳಿ ಮಾತನಾಡದೇ ಇರುವುದರಿಂದ ಮನನೊಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಿರವಾಡದ ಬಳಿ ನಡೆದಿದೆ.
ಶಿರವಾಡದ ಹಳೆಕೋಟ್ ನಿವಾಸಿ ರತ್ನಾಕರ ನಾಯ್ಕ( 47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಿಂಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟು ಗುಣಮುಖರಾಗಿ ಮನೆಗೆ ಮರಳಿದ್ದರು. ಆದರೆ ಊರಿನಲ್ಲಿ ಕೊರೊನಾದಿಂದ ಗುಣಮುಖರಾದ ಬಳಿಕವೂ ಜನರು ಸರಿಯಾಗಿ ಮಾತನಾಡಿಸದೆ ಹತ್ತಿರ ಸುಳಿಯುತ್ತಿರಲಿಲ್ಲ. ಇರುವುದರಿಂದ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮೀಣ ಠಾಣೆಯ ಪಿಎಸ್ಐ ರೇವಣ ಸಿದ್ದಪ್ಪ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ದೂರು ದಾಖಲಾಗಿದೆ.