ETV Bharat / state

ಬಂದರು ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ: ಮಧ್ವರಾಜ್ - Commercial Port Expansion Works Inspection

ಕಾರವಾರದ ರವೀಂದ್ರನಾಥ್​ ಟಾಗೋರ್ ಕಡಲತೀರದ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪರಿಶೀಲನೆ ನಡೆಸಿದರು.

Madhvaraj reviewed the port expansion works
ಬಂದರು ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಮಧ್ವರಾಜ್
author img

By

Published : Jan 17, 2020, 3:09 AM IST

ಕಾರವಾರ: ಇಲ್ಲಿನ ರವೀಂದ್ರನಾಥ್​ ಟಾಗೋರ್ ಕಡಲತೀರಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಭೇಟಿ ನೀಡಿ, ಮೀನುಗಾರರಿಗೆ ತೊಂದರೆಯಾಗಲಿರುವ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಪರಿಶೀಲನೆ ನಡೆಸಿದರು.

ಬಂದರು ವಿಸ್ತರಣೆ, ಅಲೆ ತಡೆಗೋಡೆ ನಿರ್ಮಾಣದ ಕುರಿತ ನಕ್ಷೆ ಪರಿಶೀಲಿಸಿದ ಅವರು, ಬಂದರು ಅಧಿಕಾರಿಗಳು ಹಾಗೂ ಮೀನುಗಾರರೊಂದಿಗೆ ಚರ್ಚೆ ನಡೆಸಿದರು. ಈ ಯೋಜನೆಯಿಂದ ಮೀನುಗಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.

ಈಗಾಗಲೇ ನೌಕಾನೆಲೆಗಾಗಿ 12 ಬೀಚ್​ಗಳನ್ನು ಕಳೆದುಕೊಂಡಿದ್ದೇವೆ. ಈಗಿರುವ ಇದೊಂದು ಬೀಚ್​ಅನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ಒಂದು ವೇಳೆ ಯೋಜನೆ ಜಾರಿಯಾದರೆ ಈ ಬೀಚ್​ನಿಂದ ಬದುಕು ಕಟ್ಟಿಕೊಂಡಿರುವ ಮೀನುಗಾರರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂದರು ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಮಧ್ವರಾಜ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರವಾರದ ಕಡಲತೀರ ಅತಿ ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಮೀನು ಸಿಗುವ ಸ್ಥಳ. ಇಲ್ಲಿನ ಮೀನುಗಾರರು ಎಷ್ಟು ಅದೃಷ್ಟವಂತರೋ, ಅಷ್ಟೆ ನತದೃಷ್ಟರು ಕೂಡ. ಈಗಾಗಲೇ ನೌಕಾನೆಲೆಗಳ ಯೋಜನೆಗಳಿಗಾಗಿ ಕಡಲ ತೀರದ ಜಾಗಗಳನ್ನು ಬಿಟ್ಟುಕೊಟ್ಟು, ಮೀನುಗಾರರು ಬದುಕು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಇರುವ ಒಂದು ಬೀಚ್ ಅನ್ನು ಕೂಡ ವಾಣಿಜ್ಯ ಬಂದರಿನ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಈ ಬಗ್ಗೆ ಸಚಿವರೊಂದಿಗೆ ಮಾತನಾಡಿದಾಗ ನೀವು ಸ್ಥಳ ಪರಿಶೀಲನೆ ನಡೆಸಿ, ಮೀನುಗಾರರಿಗೆ ತೊಂದರೆ ಆಗುತ್ತಿದ್ದರೆ ಹೇಳಿ ಅಂತಾ ಸಚಿವರು ಹೇಳಿದ್ದರು. ಆದರೆ, ಇಲ್ಲಿ ನೋಡಿದರೇ ಈ ಯೋಜನೆಯಿಂದ ಮೀನುಗಾರರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದರು.

ಪ್ರಸ್ತುತ ಮೀನುಗಾರರು ಮುಂದೇನು ಮಾಡಬೇಕು ಎಂಬ ಆತಂಕದಲ್ಲಿದ್ದಾರೆ. ಈ ಕಾರಣದಿಂದ ಮೀನುಗಾರರ ಸಚಿವರಾಗಿ ಬಂದು ಸಮಸ್ಯೆ ಆಲಿಸುವಂತೆ ಒತ್ತಾಯಿಸಿದ್ದೇನೆ. ಅಧಿಕಾರಿಗಳು ಸಚಿವರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಇಂತಹ ಸಮಸ್ಯೆ ಎದುರಾಗಿದೆ. ಮೀನುಗಾರರಿಗೆ ತೊಂದರೆಯಾಗುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.

Intro:

Body:ಬಂದರು ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಮಧ್ವರಾಜ್... ಸ್ಥಳಕ್ಕೆ ಭೇಟಿ ನೀಡಲು ಮೀನುಗಾರಿಕಾ ಸಚಿವರಿಗೆ ಒತ್ತಾಯ

ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ನಡೆಯುವ ರವೀಂದ್ರನಾಥ ಟಾಗೋರ್ ಕಡಲತೀರಕ್ಕೆ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಯೋಜನೆಯಿಂದ ಮೀನುಗಾರರಿಗೆ ತೊಂದರೆಯಾಗುವ ಕುರಿತು ಪರಿಶೀಲನೆ ನಡೆಸಿದ್ದು, ಮೀನುಗಾರರಿಂದ ಮಾಹಿತಿ ಪಡೆದಿದ್ದಾರೆ.
ಬಂದರು ವಿಸ್ತರಣೆ, ಅಲೆತಡೆಗೋಡೆ ನಿರ್ಮಾಣದ ಕುರಿತ ಮ್ಯಾಪ್ ಪರಿಶೀಲಿಸಿದ ಅವರು ಬಂದರು ಅಧಿಕಾರಿಗಳು ಹಾಗೂ ಮೀನುಗಾರರೊಂದಿಗೆ ಚರ್ಚೆ ನಡೆಸಿದರು. ಯೋಜನೆಯಿಂದ ಕಡಲತೀರದಲ್ಲಿ ನೆಲೆಸಿರುವ ಮೀನುಗಾರರಿಗೆ ತೊಂದರೆಯಾಗಲಿದೆ. ಈಗಾಗಲೇ ನೌಕಾನೆಲೆಗಾಗಿ ೧೨ ಬೀಚ್ ಕಳೆದುಕೊಳ್ಳಲಾಗಿದೆ. ಇದೀಗ ಇದೊಂದೆ ಬೀಚ್ ಇದ್ದು, ಮೀನುಗಾರರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈ ಯೋಜನೆ ಜಾರಿ ಆದಲ್ಲಿ ಮೀನುಗಾರರಿಗೆ ಸಾಕಷ್ಟು ತೊಂದರೆಯಾಗಲಿದೆ ಮನವರಿಕೆ ಮಾಡಿಕೊಟ್ಟರು. ತಕ್ಷಣ ಬಂದರು ಹಾಗೂ ಮೀನುಗಾರಿಕಾ ಸಚಿವರಿಗೆ ಪೋನ್ ಮಾಡಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಮೀನುಸಿಗುವ ಸ್ಥಳ ಅಂದ್ರೆ ಕಾರವಾರದ ಕಡಲತೀರ. ಆದರೆ ಇಲ್ಲಿಯ ಮೀನುಗಾರರು ಎಷ್ಟು ಅದೃಷ್ಟವಂತರೊ ಅಷ್ಟೆ ನಯದೃಷ್ಟರು ಕೂಡ ಹೌದು. ಈಗಾಗಲೇ ನವಬಕಾನೆಲೆಯಂತ ಯೋಜನೆಗಳಿಗೆ ಕಡಲತೀರಗಳನ್ನು ನೀಡಿ ಬದುಕು ಕಳೆದುಕೊಂಡಿದ್ದಾರೆ. ಆದರೆ ಇದೀಗ ಇರುವ ಒಂದು ಬೀಚ್ ಕೂಡ ವಾಣಿಜ್ಯ ಬಂದರಿನ ವಿಸ್ತರಣೆಗೆ ಬಳಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸಚುವರ ಬಳಿ ಮಾತನಾಡಿದಾಗ ನೀವು ಸ್ಥಳ ಪರಿಶೀಲನೆ ನಡೆಸಿ ಮೀನುಗಾರರಿಗೆ ತೊಂದರೆಯಾಗುವಂತಿದ್ದಲ್ಲಿ ಹೇಳಿ ಎಂದು ಹೇಳಿದ್ದರು.‌ ಆದರೆ ಇಲ್ಲಿ ನೋಡಿದರೇ ಯೋಜನೆಯಿಂದ ಮೀನುಗಾರರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ಬಡ ಮೀನುಗಾರರು ಮುಂದೇ ಏನು ಮಾಡಬೇಕು ಎನ್ನುವ ಸ್ಥಿತಿ ಇಲ್ಲಿದೆ. ಈ ಕಾರಣದಿಂದ ಸಚಿವರಲ್ಲಿ ಮೀನುಗಾರ ಸಚಿವರಾಗಿ ಬಂದು ಸಮಸ್ಯೆ ಆಲಿಸುವಂತೆ ಒತ್ತಾಯಿಸಿದ್ದೇನೆ. ಅಧಿಕಾರಿಗಳು ಸಚಿವರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಇಂತಹ ಸಮಸ್ಯೆ ಎದುರಾಗಿದೆ. ಆದ್ದರಿಂದ ಮೀನುಗಾರರಿಗೆ ತೊಂದರೆಯಾಗುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.