ETV Bharat / state

ಲಾಕ್​​​​​ಡೌನ್ ಇನ್ನೂ ಮುಗಿದಿಲ್ಲ... ಸಿಟಿ ರೌಂಡ್ಸ್ ಮೂಲಕ ಪೊಲೀಸರ ವಾರ್ನಿಂಗ್​​​

author img

By

Published : Apr 29, 2020, 6:18 PM IST

ಕೊರೊನಾ ವೈರಸ್​​ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಲಾಕ್​ಡೌನ್​ ಘೋಷಣೆ ಮಾಡಿದೆ. ಆದರೆ ಜನರು ಮಾತ್ರ ಈ ಲಾಕ್​ಡೌನ್​ನಿಂದ ಸುಸ್ತಾಗಿ ರಸ್ತೆಯಲ್ಲಿ ತಿರುಗಾಡಲು ಆರಂಭಿಸಿದ್ದಾರೆ, ಈ ಹಿನ್ನೆಲೆ ಇಂದು ಕಾರವಾರ ನಗರದಲ್ಲಿ ಪೊಲೀಸ್​ ಸಿಬ್ಬಂದಿ ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ಸಿಟಿ ರೌಂಡ್ಸ್​​ ಹಾಕಿದ್ದು, ಲಾಕ್​ಡೌನ್​ ಇನ್ನೂ ಮುಗಿದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

Lockdown not yet completed
ಪೊಲೀಸರಿಂದ ಸಿಟಿ ರೌಂಡ್ಸ್​​

ಕಾರವಾರ: ಲಾಕ್​​​​​ಡೌನ್ ಹಿನ್ನೆಲೆಯಲ್ಲಿ ಜನರು ಅನಗತ್ಯ ಓಡಾಡದಂತೆ ಎಚ್ಚರಿಸಲು ಕಾರವಾರದ ಗ್ರಾಮೀಣ, ನಗರ ಹಾಗೂ ಸಂಚಾರ ಠಾಣೆಯ ಪೊಲೀಸರು ಸಿಟಿ ರೌಂಡ್ಸ್ ಹಾಕಿದರು. ಈ ಮೂಲಕ ಜನರಿಗೆ ಇನ್ನೂ ಲಾಕ್​ಡೌನ್​ ಮುಗಿದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರಿಂದ ಸಿಟಿ ರೌಂಡ್ಸ್​​

ಮೇ 3ರವರೆಗೆ ಜಿಲ್ಲೆಯಲ್ಲಿ ಲಾಕ್​​​​ಡೌನ್ ಜಾರಿಯಲ್ಲಿದೆ. ಆದರೂ ಕಾರವಾರದಲ್ಲಿ ಜನರು ಅನವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಪೊಲೀಸರ ಸರ್ಪಗಾವಲಿನ ಮದ್ಯೆಯೂ ದಿನೇ ದಿನೆ ಮಾರುಕಟ್ಟೆಗಾಗಿ ರಸ್ತೆ ಇಳಿಯುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಾರವಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಿಪಿಐ ಸಂತೋಷ್ ಶೆಟ್ಟಿ, ಡಿವೈಎಸ್ ಅರವಿಂದ್ ಕಲ್ಗುಜ್ಜಿ, ನಗರ ಠಾಣೆಯ ಪಿಎಸ್ಐ ಸಂತೋಷ್ ಕುಮಾರ್, ಗ್ರಾಮೀಣ ಠಾಣೆಯ ಪಿಎಸ್ಐ ರೇವಣಸಿದ್ದಪ್ಪ ಜೇರನಕಲಗಿ, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಜಕ್ಕಣ್ಣನವರ್ ನೇತೃತ್ವದಲ್ಲಿ ಜೀಪ್ ಗಳಲ್ಲಿ ಸೈರನ್ ಹಾಕಿಕೊಂಡು ಕಾರವಾರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.