ETV Bharat / state

ಕೊರೊನಾ ತಂದ ಸಂಕಷ್ಟ.. ರೈತರಿಗೆ ಕಣ್ಣೀರಾದ ಸಿಹಿ ಈರುಳ್ಳಿ! - Karavara news

ಇದರಿಂದ ಕಿತ್ತಿರುವ ಅದೆಷ್ಟೋ ಈರುಳ್ಳಿ ಹಾಳಾಗುತ್ತಿದೆ. ಕೀಳದೆ ಹಾಗೆ ಬಿಟ್ಟ ಈರುಳ್ಳಿ ಸಹ ಮಣ್ಣು ಪಾಲಾಗುತ್ತಿದೆ. ಸಾಲ ಮಾಡಿ ಬೆಳೆ ಬೆಳೆದವರಿಗೆ ಮುಂದೇನು ಏನು ಅನ್ನೋ ಚಿಂತೆ ಕಾಡುತ್ತಿದೆ. ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯವಾಗಿದೆ.

Onion growers
ಈರುಳ್ಳಿ ಬೆಳೆಗಾರರು
author img

By

Published : Apr 10, 2020, 8:22 PM IST

ಕಾರವಾರ : ಪ್ರತಿವರ್ಷ ರೈತರ ಪಾಲಿಗೆ ಬಂಗಾರವಾಗಿದ್ದ ಈರುಳ್ಳಿ ಈ ಭಾರಿ ಕೊರೊನಾ ಹೊಡೆತಕ್ಕೆ ಮಾರುಕಟ್ಟೆಯನ್ನೇ ಕಳೆದುಕೊಂಡಿದೆ. ಇದ್ದ ಈರುಳ್ಳಿಯೂ ಮಣ್ಣುಪಾಲಾಗುವ ಆತಂಕ ಇದೀಗ ರೈತರನ್ನು ಕಾಡತೊಡಗಿದೆ.

ಕುಮಟಾ ತಾಲೂಕಿನ ಅಳ್ವೇಕೋಡಿ ಸೇರಿದಂತೆ ಸುತ್ತಮುತ್ತಲಿನಲ್ಲಿ ಬೆಳೆಯುವ ಈರುಳ್ಳಿ ಅಂದ್ರೆ ಎಲ್ಲಿಲ್ಲದ ಬೇಡಿಕೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಭರ್ಜರಿ ಮಾರಾಟವಾಗುತ್ತಿದ್ದ ಈರುಳ್ಳಿ ಈ ಬಾರಿ ಕೊರೊನಾದಿಂದಾಗಿ ಮಾರುಕಟ್ಟೆ ಕಳೆದುಕೊಂಡಿದೆ. ಈಗಿರುವ ಇದ್ದ ಬೆಳೆಯೂ ಹಾನಿಯಾಗುವ ಆತಂಕ ಎದುರಾಗಿದೆ.

ಸಂಕಷ್ಟದಲ್ಲಿ ಸಿಹಿ ಈರುಳ್ಳಿ ಬೆಳೆಗಾರರು..

ಕುಮಟಾ, ಹೊನ್ನಾವರ ಭಾಗದ ಕೆಲವೇ ಕೆಲವು ಪ್ರದೇಶಗಳಲ್ಲಿ ಬೆಳೆಯುವ ಈರುಳ್ಳಿ ಮಾತ್ರ ಸಿಹಿಯಾಗಿರುತ್ತದೆ. ಇದರಿಂದ ಈ ಈರುಳ್ಳಿ ಅಂದ್ರೆ ಎಲ್ಲಿಲ್ಲದ ಬೇಡಿಕೆ. ಇದರಿಂದ ಈ ಭಾಗದ ಉತ್ಸಾಹಿ ರೈತರು ಅವರಿವರ ಭೂಮಿಯನ್ನು ನಾಲ್ಕು ತಿಂಗಳ ಅವಧಿಗೆ ಬಾಡಿಗೆ ಪಡೆದು ಬೆಳೆ ಬೆಳೆಯುತ್ತಾರೆ. ಆದರೆ, ಈ ಬಾರಿ ಬೆಳೆ ಬೆಳೆದು ಇನ್ನೇನು ಮಾರಾಟ ಮಾಡಬೇಕು ಎನ್ನುವಾಗಲೇ ಕೊರೊನಾ ಕಹಿ ನೀಡಿದೆ.

ಇದರಿಂದ ಕಿತ್ತಿರುವ ಅದೆಷ್ಟೋ ಈರುಳ್ಳಿ ಹಾಳಾಗುತ್ತಿದೆ. ಕೀಳದೆ ಹಾಗೆ ಬಿಟ್ಟ ಈರುಳ್ಳಿ ಸಹ ಮಣ್ಣು ಪಾಲಾಗುತ್ತಿದೆ. ಸಾಲ ಮಾಡಿ ಬೆಳೆ ಬೆಳೆದವರಿಗೆ ಮುಂದೇನು ಏನು ಅನ್ನೋ ಚಿಂತೆ ಕಾಡುತ್ತಿದೆ. ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯವಾಗಿದೆ.

ದೇಶವನ್ನು ಕಾಡುತ್ತಿರೋ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದರೆ, ಈ ಲಾಕ್‌ಡೌನ್ ಇದೀಗ ದೇಶದ ಬೆನ್ನೆಲುಬಾಗಿರೋ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಈ ಸರ್ಕಾರ. ರೈತರು ಬೆಳೆದ ಬೆಳೆಗಳಿಗೆ ಅಧಿಕಾರಿಗಳು ಸೂಕ್ತ ಮಾರಾಟಕ್ಕೆ ಒದಗಿಸಿ ಹಾನಿಯನ್ನು ತಪ್ಪಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.