ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ.
![Landslide In Maneshwar Temple](https://etvbharatimages.akamaized.net/etvbharat/prod-images/kn-kwr-02-tappida-anahuta-7202800_24092020151449_2409f_1600940689_68.jpg)
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಾಣೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿರುವ ಗುಡ್ಡ ಕುಸಿದಿದ್ದು, ಈ ವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಪಕ್ಕದಲ್ಲಿ ಬೃಹದಾಕಾರದ ಮರವಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
![Landslide In Maneshwar Temple](https://etvbharatimages.akamaized.net/etvbharat/prod-images/kn-kwr-02-tappida-anahuta-7202800_24092020151449_2409f_1600940689_1067.jpg)
ಪಕ್ಕದಲ್ಲೇ ಮನೆಗಳಿದ್ದು, ಗುಡ್ಡದ ಬಲಭಾಗಕ್ಕೆ ಜಾರಿದ್ದರೆ ಮನೆಯ ಮೇಲೆ ಬೀಳುವ ಸಂಭವವಿತ್ತು. ಎಡಭಾಗಕ್ಕೆ ಜಾರಿದ್ದಲ್ಲಿ ದೇವಸ್ಥಾನದ ಮೇಲೆ ಬೀಳುವ ಅಪಾಯ ಇತ್ತು. ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.