ETV Bharat / state

ಅಪ್ರಾಪ್ತ ಬಾಲಕಿಯರ ಅಪಹರಣ... ಮೂವರ ಬಂಧನ - pocso act

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಉತ್ತರ ಕನ್ನಡದ ಯಲ್ಲಾಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

kidnappers-arrest
author img

By

Published : Sep 21, 2019, 3:01 AM IST

ಶಿರಸಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಪಹರಣ ಮಾಡಿದ್ದ ಮೂವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಉತ್ತರ ಕನ್ನಡದ ಯಲ್ಲಾಪುರ ಪೊಲೀಸರು ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದಿನ ಅಸ್ಲಂ ಇಸಾಕ್ ತಂಬೋಳಿ, ಅಂಕೋಲಾದ ಹಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ, ಮಂಚಿಕೇರಿಯ ಮೊತೇಶ ಸಂತಾನ ಸಿದ್ಧಿ ಬಂಧಿತರು.

ಸೆ.12ರಂದು ಕಂಪ್ಯೂಟರ್ ತರಗತಿಗೆ ಬಂದ ಅಪ್ರಾಪ್ತ ಬಾಲಕಿಯನ್ನು ಅಸ್ಲಂ ಅಪಹರಿಸಿದ್ದ. ದೇವಸ್ಥಾನಕ್ಕೆ ಹೋಗಿದ್ದ ಬಾಲಕಿಯನ್ನು ದೇವೇಂದ್ರ ಮತ್ತು ಮೊತೇಶ ಅಪಹರಿಸಿದ್ದರು.

ಕಾಣೆಯಾದ ಬಾಲಕಿಯರನ್ನು ಪತ್ತೆಹಚ್ಚಿ, ಮಹಾರಾಷ್ಟ್ರದ ಪೂನಾದಲ್ಲಿ ಆರೋಪಿ ಅಸ್ಲಂನನ್ನು, ಯಲ್ಲಾಪುರದ ಕಸಬೆಯಲ್ಲಿ ದೇವೇಂದ್ರನನ್ನು ಮತ್ತು ಯಲ್ಲಾಪುರ ತಾಲೂಕಿನ ಬಿಳಕಿಯಲ್ಲಿ ಮೊತೇಶನನ್ನು ಬಂಧಿಸಲಾಗಿದೆ.

Intro:ಶಿರಸಿ :
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಪಹರಣ ಮಾಡಿದ್ದ ಮೂವರು ಆರೋಪಿಗಳನ್ನು ಉತ್ತರ ಕನ್ನಡದ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೇಲೆ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಮಹಾರಾಷ್ಟ್ರದ ಉಸ್ಮಾನಾಬಾದಿನ ಅಸ್ಲಂ ಇಸಾಕ್ ತಂಬೋಳಿ, ಅಂಕೋಲಾ ತಾಲೂಕಿನ ಹಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ , ಸಹಾಯ ಮಾಡಿದ್ದ ಮಂಚಿಕೇರಿಯ ಮೊತೇಶ ಸಂತಾನ ಸಿದ್ದಿ ಬಂಧಿತ ಆರೋಪಿಗಳಾಗಿದ್ದಾರೆ.

Body:ಸೆ.12 ರಂದು ಕಂಪ್ಯೂಟರ್ ಕ್ಲಾಸಿಗೆಂದು ಬಂದ ಅಪ್ರಾಪ್ತ ಬಾಲಕಿಯನ್ನು ಅಸ್ಲಂ ಅಪಹರಿಸಿದ್ದ. ದೇವಸ್ಥಾನಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ದೇವೇಂದ್ರ ಮತ್ತು ಮೋತೇಶ ಅಪಹರಿಸಿದ್ದರು. ಕಾಣೆಯಾದ ಅಪ್ರಾಪ್ತ ಬಾಲಕಿಯರನ್ನು ಪತ್ತೆ ಮಾಡಿ, ಆರೋಪಿಯರಾದ ಅಸ್ಲಂ ನನ್ನು ಮಹಾರಾಷ್ಟ್ರದ ಪೂನಾದಲ್ಲಿ, ದೇವೇಂದ್ರ ನ್ನು ಯಲ್ಲಾಪುರದ ಕಸಬೆಯಲ್ಲಿ ಮತ್ತು ಮೊತೇಶ ನನ್ನು ಯಲ್ಲಾಪುರ ತಾಲೂಕಿನ ಬಿಳಕಿಯಲ್ಲಿ ಬಂಧಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ಯಲ್ಲಿ ಪ್ರಕರಣ.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.