ETV Bharat / state

ಕೆಡಿಸಿಸಿ ಚುನಾವಣೆ: ಸಚಿವ ಹೆಬ್ಬಾರ್ ಅಧ್ಯಕ್ಷ ಗಾದಿಗೇರುವುದು ಬಹುತೇಕ ಖಚಿತ ! - Minister Shivaram Hebbar

ನವೆಂಬರ್​​ 21ರಂದು ನಡೆಯಲಿರುವ ಕೆಡಿಸಿಸಿ ಚುನಾವಣೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್​ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಸಚಿವ ಹೆಬ್ಬಾರ್
ಸಚಿವ ಹೆಬ್ಬಾರ್
author img

By

Published : Nov 17, 2020, 11:32 PM IST

ಶಿರಸಿ: ಉತ್ತರಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ( ಕೆಡಿಸಿಸಿ ) ನೂತನ ಆಡಳಿತ ಮಂಡಳಿಯ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನ.21 ರಂದು ನಡೆಯಲಿದೆ. ನೂತನ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್​ ಆಯ್ಕೆಯಾಗುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗ್ತಿದೆ.

ಜಿಲ್ಲೆಯ ರೈತರ ಶಕ್ತಿ ಕೇಂದ್ರವಾದ ಡಿಸಿಸಿ ಬ್ಯಾಂಕ್ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. 16 ನಿರ್ದೇಶಕರ ಸ್ಥಾನದಲ್ಲಿ 6 ಸ್ಥಾನ ಅವಿರೋಧವಾಗಿತ್ತು. ನಂತರ ನಡೆದ 10 ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಭಾರೀ ಹಣಾಹಣಿಯ ನಡುಗೆ ಮತದಾರರು ನೂತನ ಸದಸ್ಯರಿಗೆ ಹೆಚ್ಚಿನ ಮಣೆ ಹಾಕಿದ್ದರು.

ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ, ಒಟ್ಟಾರೆ ಮೂರು ಬಾರಿ ಅಧ್ಯಕ್ಷರಾಗಿರುವ ಎಸ್.ಎಲ್. ಘೋಟ್ನೆಕರ್ ಅವರನ್ನು ಯಾವುದೇ ಕಾರಣಕ್ಕೂ ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಉದ್ದೇಶದಿಂದ ಸಹಕಾರ ಭಾರತೀಯ ಹೆಸರಿನಲ್ಲಿ ವಿವಿಧ ಬಿಜೆಪಿ ಸೇರಿದಂತೆ ಪಕ್ಷಗಳ ಸಹಕಾರಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದೇ ರೀತಿ ಕಾಂಗ್ರೆಸ್ ಮತ್ತು ಘೋಟ್ನೆಕರ್ ಸಹ ಬಹುತಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು.

ಆದರೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಭಾರೀ ಬಹುಮತ ಬಂದಿದ್ದು, 16 ನಿರ್ದೇಶಕ ಸ್ಥಾನದಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇನ್ನು ಘೋಟ್ನೆಕರ್ ಬಣದಿಂದ ಕೇವಲ 4 ಸದಸ್ಯರು ಆಯ್ಕೆಯಾಗಿದ್ದು, ಬಹುಮತ ಬಿಜೆಪಿ ಕಡೆಗೆ ವಾಲಿದಂತಾಗಿದೆ. ಇದರಿಂದ ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್​​​ಗೆ ಭಾರೀ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.‌

ಲೆಕ್ಕಾಚಾರ: ಇನ್ನು ಆಡಳಿತ ಮಂಡಳಿಯ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನ ಪಡೆಯಲು ಬಹುಮತ ಪಡೆಯಲು 10 ಮತಗಳ ಅಗತ್ಯವಿದೆ. 16 ಆಯ್ಕೆಯಾದ ನಿರ್ದೇಶಕರು, ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ ಬ್ಯಾಂಕ್ ಪ್ರತಿನಿಧಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸೇರಿ ಒಟ್ಟೂ 19 ನಿರ್ದೇಶಕರಾಗುತ್ತಾರೆ. ಇದರಿಂದ ಬಿಜೆಪಿಗೆ ಬೆಂಬಲಿತ ಸಹಕಾರ ಭಾರತಿಗೆ ಬಹುಮತವಿದ್ದು, ಅದರ ಸದಸ್ಯರೇ ಅಧ್ಯಕ್ಷ / ಉಪಾಧ್ಯಕ್ಷರಾಗಲಿದ್ದಾರೆ.

ಸಹಕಾರ ಭಾರತಿ: ಸಹಕಾರ ಭಾರತಿಯಲ್ಲಿ ನಿರ್ದೇಶಕರಾದ ಶಿವರಾಮ ಹೆಬ್ಬಾರ್ , ಆರ್.ಎಮ್.ಹೆಗಡೆ ಬಾಳೇಸರ, ಶಣ್ಮುಖ ಗೌಡ, ಶಿವಾನಂದ ಹೆಗಡೆ ಕಡತೋಕ, ಸುರೇಶ್ಚಂದ್ರ ಹೆಗಡೆ, ವಿಶ್ವನಾಥ ಭಟ್, ಗಜು ಪೈ, ಮೋಹನದಾಸ ನಾಯಕ, ಪ್ರಕಾಶ ಗುನಗಿ, ಬೀರಣ್ಣ ನಾಯಕ, ರಾಮಕೃಷ್ಣ ಹೆಗಡೆ ಕಡವೆ ಹಾಗೂ ಎಲ್.ಟಿ. ಪಾಟೀಲ್ ಗುರುತಿಸಿಕೊಂಡಿದ್ದಾರೆ. ಇನ್ನು ಘೋಟ್ನೆಕರ್ ಬಣದಲ್ಲಿ ಕೃಷ್ಣ ದೇಸಾಯಿ, ಮಂಕಾಳ ವೈದ್ಯ, ಜಿ.ಆರ್.ಹೆಗಡೆ ಸೋಂದಾ ಇದ್ದಾರೆ. ಇದರಿಂದ ಸಹಕಾರ ಭಾರತಿಯು ಸ್ಪಷ್ಟವಾಗಿ ಮೇಲುಗೈ ಸಾಧಿಸಿದಂತಾಗಿದೆ.

ಸಾಧ್ಯತೆಗಳು: ಅಧ್ಯಕ್ಷರ ಆಯ್ಕೆಯ ಸಾಧ್ಯತೆಗಳಲ್ಲಿ ಶಿವರಾಮ್ ಹೆಬ್ಬಾರ್ ಅವರು ಮೇಲುಗೈ ಸಾಧಿಸಿದ್ದಾರೆ. ಅವರು ಗಾದಿಗೆ ಏರುವುದು ಬಹುತೇಕ ಅಂತಿಮವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕರಾವಳಿ ಭಾಗಕ್ಕೆ ಪ್ರಾಶಸ್ತ್ಯ ನೀಡಿ ಶಿವಾನಂದ ಹೆಗಡೆ ಕಡತೋಕ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದರೆ ಹೆಬ್ಬಾರ್ ಸ್ಪರ್ಧಿಸದೇ ಹೋದಲ್ಲಿ ಸಹಕಾರ ಭಾರತಿಯ ನಿರ್ಣಯ ಮೋಹನದಾಸ ನಾಯಕರಾಗುವ ಸಾಧ್ಯತೆಯಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ವಂದ್ರ ಹೆಗಡೆ ಆಯ್ಕೆಯಾಗುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.