ETV Bharat / state

ನೌಕಾನೆಲೆ ಪಾಸ್ ಹಿಡಿದು ನಿತ್ಯ ಓಡಾಡುವ ಸಿಬ್ಬಂದಿ: ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲು - Seabird navel base

ಲಾಕ್​​ಡೌನ್​ ನಡುವೆ ಕಾರವಾರ ನೌಕಾನೆಲೆ ಸಿಬ್ಬಂದಿ ಪಾಸ್ ಹಿಡಿದುಕೊಂಡು ಓಡಾಡುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ರಸ್ತೆಗಿಳಿಯುವುದರಿಂದ ಇವರ ನಿಯಂತ್ರಣ ಪೊಲೀಸರಿಗೆ ಸವಾಲಾಗಿದೆ.

Karwar Navel base Laborers violating Covid Guidelines
ಕೋವಿಡ್ ನಿಯಮ ಉಲ್ಲಂಘನೆ
author img

By

Published : Jun 5, 2021, 7:21 AM IST

Updated : Jun 5, 2021, 9:38 AM IST

ಕಾರವಾರ: ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಅನಗತ್ಯವಾಗಿ ವಾಹನಗಳು ರಸ್ತೆಗಿಳಿಯದಂತೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಪಾಸ್ ಹಿಡಿದು ಓಡಾಡುವ ನೌಕಾನೆಲೆ ಸಿಬ್ಬಂದಿಯನ್ನು ಸಂಬಾಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಕೆಲಸ ಮಾಡುವ ಸಾವಿರಾರು ಜನ ಪಾಸ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇದರಿಂದ ಬೆಳಗಿನ ಹೊತ್ತು ರಸ್ತೆಯಲ್ಲಿ ವಾಹನ ದಟ್ಟಣೆಯಾಗುತ್ತಿದೆ. ಪಾಸ್ ಇರುವುದರಿಂದ ನೌಕಾನೆಲೆ ಸಿಬ್ಬಂದಿಗೆ ಓಡಾಡಲು ಅವಕಾಶ ಇದೆ. ಆದರೆ, ಎಲ್ಲರ ಪಾಸ್ ಪರಿಶೀಲಿಸಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗುತ್ತಾರೆ. ಇನ್ನು, ಕೆಲ ವಾಹನಗಳಲ್ಲಿ ಮಿತಿ ಮೀರಿ ಜನರನ್ನು ತುಂಬಿಕೊಂಡು ಹೋಗಲಾಗ್ತಿದೆ. ಪಾಸ್ ಇರುವುದರಿಂದ ಇವರನ್ನು ತಡೆಯಬೇಕೋ, ಬಿಡಬೇಕೋ ಎಂಬ ಗೊಂದಲದಲ್ಲಿ ಪೊಲೀಸರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುದರಿಂದ ಬಾಯಿ ಮಾತಿಗೆ ಮಾತ್ರ ಲಾಕ್​ಡೌನ್ ಎಂಬಂತಾಗಿದೆ.

ಪೊಲೀಸರಿಗೆ ತಲೆನೋವಾದ ನೌಕಾನೆಲೆ ಸಿಬ್ಬಂದಿ

ಏಷ್ಯಾದ ಅತಿ ದೊಡ್ಡ ನೌಕಾನೆಲೆ ಎನಿಸಿಕೊಂಡಿರುವ ಸೀಬರ್ಡ್ ನೌಕಾನೆಲೆಯಲ್ಲಿ ಲಾಕ್​ಡೌನ್​ ನಡುವೆ ಹಲವು ಕಾಮರಿಗಳು ನಡೆಯುತ್ತಿವೆ. ಎಲ್ಎಂಡಿ, ನವಯುಗ, ಐಟಿಡಿಸಿ, ನಾರ್ಗಾಜುನ ಸೇರಿದಂತೆ ಹಲವು ಕಂಪನಿಗಳು ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿವೆ. ಒಂದೊಂದು ಕಂಪನಿಯಲ್ಲೂ ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಇವರೆಲ್ಲರೂ ಪಾಸ್​ ಹಿಡಿದುಕೊಂಡು ಓಡಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಇನ್ನು, ನೌಕಾನೆಲೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸದ ವೇಳೆ ಮಾಸ್ಕ್​ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಲೇಬರ್ ಕ್ಯಾಂಪ್​ಗಳಲ್ಲಿ ಕೆಲವರಿಗೆ ಕೋವಿಡ್ ಲಕ್ಷಣಗಳಿದ್ದರೂ ನಿಷ್ಕಾಳಜಿ ವಹಿಸಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ಒಂದೆರಡು ಬಾರಿ ಲೇಬರ್ ಕ್ಯಾಂಪ್​​ಗಳಿಗೆ ತೆರಳಿ ಪರಿಶೀಲನೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದೇವೆ ಎಂದು ಹೇಳುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳು ಕಂಟೇನ್​ಮೆಂಟ್​ ಝೋನ್​ಗಳಾಗಿವೆ. ಕಾರವಾರ ನಗರ ಕೂಡ ಕಂಟೇನ್​ಮೆಂಟ್ ವ್ಯಾಪ್ತಿಯಲ್ಲಿ ಬರುವುದರಿಂದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ನೌಕಾನೆಲೆ ಸಿಬ್ಬಂದಿ ಓಡಾಡುತ್ತಿರುವುದರಿಂದ ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

Last Updated : Jun 5, 2021, 9:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.