ETV Bharat / state

ಆದಾಯ ಕೊರತೆ ಮಧ್ಯೆಯೇ ಕಾಮಗಾರಿ ಕೈಗೊಂಡ ಕಾರವಾರ ನಗರಸಭೆ: ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ

ಕಾರವಾರ ನಗರಸಭೆಯು ಆದಾಯ ಕೊರತೆ ಮಧ್ಯೆಯೇ ಕಾಮಗಾರಿ ಕೈಗೊಂಡಿದೆ. ಇದರಿಂದ ಗುತ್ತಿಗೆದಾರರಿಗೆ ಬಾಕಿ ಉಳಿದ ಕೋಟ್ಯಂತರ ರೂಪಾಯಿ ಪಾವತಿಸಬೇಕಾದ ಸವಾಲು ಎದುರಾಗಿದೆ.

Municipal council
ಬಾಕಿ ಉಳಿದ ಕೋಟ್ಯಂತರ ರೂಪಾಯಿ
author img

By ETV Bharat Karnataka Team

Published : Nov 8, 2023, 10:54 AM IST

ಕಾರವಾರ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆ ಕಳೆದ ಕೆಲ ವರ್ಷಗಳಿಂದ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಆರೋಪ ಮತ್ತು ಪ್ರತ್ಯಾರೋಪಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಆದರೆ ಕಾರವಾರ ನಗರಸಭೆಯೊಂದರಲ್ಲಿ ಕಳೆದ ಅವಧಿಯಲ್ಲಿ ಹಣವೇ ಇಲ್ಲದಿದ್ದರೂ ನಡೆಸಿದ ಕೋಟ್ಯಂತರ ರೂಪಾಯಿ ಕಾಮಗಾರಿಗಳಿಂದಾಗಿ ಇದೀಗ ಗುತ್ತಿಗೆದಾರರಿಗೆ ಮಾತ್ರವಲ್ಲದೆ ನಗರಸಭೆ ವಾಹನಗಳಿಗೆ ಡೀಸೆಲ್ ತುಂಬಿಸುವುದಕ್ಕೂ ಹಣವಿಲ್ಲದ ಸ್ಥಿತಿ ಉಂಟಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯಲ್ಲಿ ಇಂತಹ ಸ್ಥಿತಿ ಎದುರಾಗಿದೆ. ನಗರಸಭೆಯಲ್ಲಿ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಡಲಾಗಿತ್ತು. ಇದರ ಪರಿಣಾಮ ಪೂರ್ಣಗೊಂಡ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಬಿಲ್ ಪಾವತಿಗೆ ನಗರಸಭೆ ಪರದಾಡುತ್ತಿದೆ. ಕಳೆದ ಕೆಲ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳು, ಅಂಗಡಿಗಳು ಹಾಗೂ ಮನೆಗಳಿಂದ ತೆರಿಗೆ ಸಂಗ್ರಹ ಕಾರ್ಯ ಸರಿಯಾಗಿ ಆಗದ ಪರಿಣಾಮ ನಗರಸಭೆಯ ಆದಾಯ ಕುಂಠಿತವಾಗಿದೆ.

ಬಾಕಿ ಹಣ ಪಾವತಿಗೆ ಆಗ್ರಹ: ಇದೀಗ ನಗರಸಭೆಯ ಕಸ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳ ಇಂಧನ ಹಾಕಿಸಲೂ ಸಹ ಹಣವಿಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಬಂಕ್ ಮಾಲೀಕರು ಹಣವಿಲ್ಲದೇ ಇಂಧನ ನೀಡಲು ನಿರಾಕರಿಸಿದ್ದಾರೆ. ನಗರಸಭೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ 11 ಕೋಟಿ ರೂ ಪಾವತಿಸಬೇಕಾಗಿದೆ. ಬೀದಿ ದೀಪ ನಿರ್ವಹಣೆ ಬಿಲ್ ಕೂಡ ಬಾಕಿ ಇದೆ. ಕೂಡಲೇ ಬಾಕಿ ಹಣ ಪಾವತಿಗೆ ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದರು.

ಅಧಿಕಾರಿಗಳಿಗೆ ಖಡಕ್ ಸೂಚನೆ: ನಗರಸಭೆಗೆ 8 ಕೋಟಿ ಆದಾಯ ಇದ್ದು, ಬಾಕಿ ಉಳಿಸಿಕೊಂಡಿರುವವರಿಂದ ತೆರಿಗೆ ವಸೂಲಿ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ ಈಗಾಗಲೇ ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ಕರ ವಸೂಲಿಗೆ ಖಡಕ್ ಸೂಚನೆ ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರವಾರ ನಗರಸಭೆಯಲ್ಲಿಯೂ ಬಿಜೆಪಿ ಆಡಳಿತ ಇತ್ತು. ಅಧ್ಯಕ್ಷರ ಎರಡೂವರೆ ವರ್ಷದ ಅವಧಿ ಮುಗಿದಿದ್ದರಿಂದ ಮೀಸಲಾತಿ ಸಮಸ್ಯೆಯಾಗಿ ಆರು ತಿಂಗಳಿಂದ ಆಡಳಿತಾಧಿಕಾರಿ ನೇಮಕವಾಗಿದೆ. ಹಿಂದಿನ ಅವಧಿಯಲ್ಲಿ ಹಣ ಇಲ್ಲದೆ ಇದ್ದರೂ ಕಾಮಗಾರಿ ನಡೆಸಿದ್ದರಿಂದ ನಗರಸಭೆಯಲ್ಲಿ ಖಜಾನೆ ಖಾಲಿಯಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿಯಾಗಿದ್ದಾರೆ. ಅಧಿಕಾರಿಗಳ ಸಭೆ ನಡೆಸಿರುವ ಅವರು ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನ‌ ಕಂಡುಬರುತ್ತಿದ್ದು, ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಅಲ್ಲದೇ ತೆರಿಗೆ ಸಂಗ್ರಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆದಾಯ ಸಂಗ್ರಹ ಮಾಡದೇ ಕಾಮಗಾರಿ ನಡೆಸಿದ ಪರಿಣಾಮ ಇಂತಹದೊಂದು ಸಮಸ್ಯೆಗೆ ಕಾರಣವಾಗಿದ್ದು, ಸದ್ಯ ನಗರಸಭೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರು ಸೇರಿದಂತೆ ಇತರೆ ಬಿಲ್ ಪಾವತಿಗೆ ನಗರಸಭೆ ಕ್ರಮವಹಿಸಬೇಕಿದೆ.

ಇದನ್ನೂ ಓದಿ: ಮಹಿಳೆಯರಿಗೆ ಸರ್ಕಾರದಿಂದ ಹೊಸ ಉಳಿತಾಯ ಯೋಜನೆ: ಸಚಿವ ಎಂ.ಬಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.