ETV Bharat / state

ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು ಸಂರಕ್ಷಿಸಿಟ್ಟಿದೆ ಕಾರವಾರದ ಈ ಕುಟುಂಬ! - ಕಾರವಾರ ಹಳದಿಪುರಕರ್ ಕುಟುಂಬ,

ಬ್ರಿಟಿಷರ ಕಪಿಮುಷ್ಠಿಯಲ್ಲಿ ಭಾರತವಿದ್ದಾಗ ದೇಶಕ್ಕೆ ಸ್ವಾತಂತ್ರ್ಯ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಮಹಾತ್ಮ ಗಾಂಧಿ. ರಾಷ್ಟ್ರಪಿತ ಕಾರವಾರಕ್ಕೆ ಬಂದು ಹೋದ ನೆನಪು ಇನ್ನೂ ಜೀವಂತವಾಗಿದೆ.

Karwar Haldipurkar family protected Gandhi's memorable
ಮಹಾತ್ಮ ಗಾಂಧೀಜಿ ಕಾರವಾರಕ್ಕೆ ಬಂದ ನೆನಪು ಇಂದಿಗೂ ಅವಿಸ್ಮರಣೀಯ
author img

By

Published : Oct 2, 2021, 5:10 PM IST

ಕಾರವಾರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕಾರವಾರಕ್ಕೆ ಬಂದು ಹೋದ ನೆನಪು ಇನ್ನೂ ಹಚ್ಚ ಹಸಿರಾಗಿದೆ. ಕಳೆದ 87 ವರ್ಷಗಳ ಹಿಂದೆ ಅವರು ಇಲ್ಲಿಗೆ ಆಗಮಿಸಿದ್ದರು. ಆ ಹೆಜ್ಜೆ ಗುರುತುಗಳನ್ನು ಉತ್ತರ ಕನ್ನಡ ಜಿಲ್ಲೆಯ ಕುಟುಂಬವೊಂದು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಕಾರವಾರದ ಹಳದಿಪುರಕರ್ ಕುಟುಂಬ ಕಳೆದ ಎಂಟು ದಶಕಗಳಿಂದ ಮಹಾತ್ಮ ಗಾಂಧೀಜಿ ಜಿಲ್ಲೆಗೆ ಆಗಮಿಸಿ ತೆರಳಿದ ಸ್ಮರಣೀಯ ಗಳಿಗೆಗಳನ್ನು ಜೀವಂತವಾಗಿ ಇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

Karwar Haldipurkar family protected Gandhi's memorable
ಗಾಂಧೀಜಿಯವರು ಕಾರವಾರಕ್ಕೆ ಬಂದ ಹೆಜ್ಜೆ ಗುರುತು

1934 ಫೆ. 27ರ ಸ್ವಾತಂತ್ರ್ಯ ಚಳವಳಿ ವೇಳೆ ಗಾಂಧೀಜಿಯರು ಉಡುಪಿಗೆ ಆಗಮಿಸಿದ್ದ ವೇಳೆ ಕಾರವಾರ ಮುನ್ಸಿಪಾಲಿಟಿಯ ಆಗಿನ ಅಧ್ಯಕ್ಷ ಪಿ.ಎಸ್. ಮುಜುಂದಾರ್, ಹಿಂದೂ ಮಹಾಸಭಾದ ಅಧ್ಯಕ್ಷ ಎಂ.ಬಿ. ಬರ‍್ಕರ್, ಉದ್ಯಮಿ ಕೆ.ಆರ್. ಹಳದಿಪುರಕರ್ ಹಾಗೂ ಹೊರ ಜಿಲ್ಲೆಗಳ ಹಲವು ಗಣ್ಯರು ಅವರನ್ನು ಕುಂದಾಪುರದಿಂದ ಜಿಲ್ಲೆಗೆ ಸ್ವಾಗತಿಸಿ ಕಾರವಾರಕ್ಕೆ ಕರೆತಂದಿದ್ದರು. ಈ ವೇಳೆ ಹಳದಿಪುರಕರ್ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಹಳದಿಪುರಕರ್ ಅವರ ಮನೆಯಲ್ಲಿ ತಂಗಿದ್ದ ಗಾಂಧೀಜಿ ಮಾರನೇ ದಿನ (ಮರುದಿನ) ಬೆಳಗ್ಗೆ ಪ್ರಾರ್ಥನೆ ಕೈಗೊಂಡಿದ್ದರು. ಈಗ ನೌಕರರ ವಸತಿ ಸಂಕೀರ್ಣ ಇರುವ ಜಾಗದಲ್ಲಿ ಸಾರ್ವಜನಿಕ ಸಭೆ ನಡೆಸಿ, ಅಸ್ಪೃಶ್ಯತೆಯ ಕುರಿತು ಮಾತನಾಡಿದ್ದರು. ಸುಮಾರು 2 ಸಾವಿರ ಜನರು ಗಾಂಧೀಜಿ ಅವರ ಭಾಷಣ ಆಲಿಸಿದ್ದರು. ಬಳಿಕ ಮಹಾತ್ಮ ಗಾಂಧೀಜಿ ಕಾರವಾರಕ್ಕೆ ಆಗಮಿಸಿದ ನೆನಪಿಗಾಗಿ ಜಿಲ್ಲಾ ಸ್ಥಳೀಯ ಆಡಳಿತದಿಂದ ಸಾಗವಾನಿ ಮರದಿಂದ ಮಾಡಿದ ಹಾಗೂ ಮುನ್ಸಿಪಾಲಿಟಿಯಿಂದ ಬೆಳ್ಳಿಯ ಸ್ಮರಣಿಕೆ ನೀಡಲಾಗಿತ್ತು. ಆದರೆ ಅದನ್ನು ಸ್ವೀಕರಿಸದೆ ಸ್ಥಳದಲ್ಲೇ ಗಾಂಧೀಜಿಯವರು ಹರಾಜು ಹಾಕಿದ್ದರು.

ಅಂದಿನ ದಿನದಲ್ಲಿ ಹಳದಿಪುರಕರ್ ಕುಟುಂಬ ಎರಡೂ ಸ್ಮರಣಿಕೆಯನ್ನು 532 ರೂ. ನೀಡಿ ಖರೀದಿಸಿತ್ತು. ಮಾತ್ರವಲ್ಲದೆ 120 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹಳದಿಪುರಕರ್ ಕುಟುಂಬದ ಮನೆಯಲ್ಲಿ ಇಂದಿಗೂ ಗಾಂಧೀಜಿ ಬಂದಾಗಿನ ಚಿತ್ರಗಳು, ಅವರಿಗೆ ನೀಡಿದ ಸ್ಮರಣಿಕೆಗಳು ಮನೆಯಲ್ಲಿ ವೀಕ್ಷಣೆಗೆ ಲಭ್ಯ ಇವೆ. ಈ ಮೂಲಕ ಗಾಂಧೀಜಿ ಕಾರವಾರಕ್ಕೆ ಬಂದಿದ್ದಕ್ಕೆ ಇರುವ ಕುರುಹುಗಳನ್ನು ರಕ್ಷಣೆ ಮಾಡುವಲ್ಲಿ ಈ ಕುಟುಂಬ ಮಹತ್ವದ ಪಾತ್ರ ವಹಿಸಿದೆ.

ಇದನ್ನೂ ಓದಿ: ಮೈಸೂರಲ್ಲಿ ಚಾಕು​​, ಮಚ್ಚು ಹಿಡಿದು 2 ಗುಂಪುಗಳ ನಡುವೆ ಮಾರಾಮಾರಿ.. ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.