ETV Bharat / state

ಮಿಗ್ 21, ತೇಜಸ್ ಹಾರಾಟ... ರೋಮಾಂಚನ ಮೂಡಿಸಿದ ಹಾಲಕ್ಕಿ ಹಗರಣ - undefined

ಮಿಗ್ 21 ಹಾಗೂ ಹೆಚ್ಎಎಲ್ ತೇಜಸ್ ಹಾರಾಟ.. ಸರವೇಗದಲ್ಲಿ ಬಂದು ಪಟ್ಟಣವನ್ನು ಸುತ್ತುವರಿದ ಸೈನಿಕರಿಂದ ಗುಂಡಿನ ದಾಳಿ.. ವಾಘಾ ಗಡಿ‌ ಮೂಲಕ ಭಾರತವನ್ನು ಪ್ರವೇಶಿಸುವ ವಿಂಗ್ ಕಂಮಾಂಡರ್ ಅಭಿನಂದನ್​... ಇದು ಬೆಳಾಂಬರ ಹಾಲಕ್ಕಿ ಸಮಾಜದವರ ಹಗರಣದ ವಿಶೇಷ...

ಹಾಲಕ್ಕಿ ಹಗರಣ
author img

By

Published : Mar 24, 2019, 8:08 PM IST

Updated : Mar 24, 2019, 9:27 PM IST

ಕಾರವಾರ: ಅಲ್ಲಿ ಇದ್ದಕ್ಕಿದ್ದಂತೆ ಮಿಗ್ 21 ಹಾಗೂ ಹೆಚ್ಎಎಲ್ ತೇಜಸ್ ಹಾರಾಟ ಆರಂಭವಾಗಿತ್ತು. ಸರವೇಗದಲ್ಲಿ ಬಂದ ಸೈನಿಕರು ಪಟ್ಟಣವನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದರು. ಜತೆಗೆ ವಿಂಗ್ ಕಮಾಂಡರ್ ಅಭಿನಂದನ್ ಕೂಡ ಕಾಣಿಸಿಕೊಂಡಿದ್ದು ಕೆಲ ಕಾಲ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಘಟನೆಯ ಸಂಪೂರ್ಣ ಚಿತ್ರಣ ನೆರೆದವರ ಕಣ್ಣಿಗೆ ಬಿದ್ದು ಭಾರತ ಮಾತಾಕಿ ಎಂಬ ಜಯಘೋಷ ಮುಗಿಲು ಮುಟ್ಟಿತ್ತು....

ಹೌದು, ಇಂತಹದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ಉತ್ತರ ಕನ್ನಡದ ಅಂಕೋಲಾ ಪಟ್ಟಣದಲ್ಲಿ. ಹೋಳಿ ಅಂಗವಾಗಿ ಬ್ರಿಟಿಷರ ಕಾಲದಿಂದ ಆಡಿಕೊಂಡು ಬರುತ್ತಿರುವ ಅಂಕೋಲಾದ ಬೆಳಾಂಬರ ಹಾಲಕ್ಕಿ ಸಮಾಜದವರ ಹಗರಣ ನೆರೆದಿದ್ದ ಸಾವಿರಾರು ಜನರ ಮೆಚ್ಚುಗೆಗೆ ಕಾರಣವಾಯಿತು. ಸಮಾಜದ ಅಂಕುಡೊಂಕುಗಳನ್ನು ಸಾಂಪ್ರದಾಯಿಕ ಜನಪದ ಕಲೆಯ ಮೂಲಕ ತಿದ್ದುವ ಪ್ರಯತ್ನವಾಗಿ ನಡೆಸಿದ ಪ್ರತಿ ಮಾದರಿಗಳು ಜನರಲ್ಲಿ ರೋಮಾಂಚನ ಮೂಡಿಸಿತು.

ಹಗರಣದಲ್ಲಿ ಪ್ರಮುಖವಾಗಿ ಉಗ್ರರ ನೆಲೆಬೀಡಾದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ ದೇಶದ ಹೆಮ್ಮೆಯ ಮಿಗ್ 21 ಹಾಗೂ ಹೆಚ್ಎಎಲ್ ತೇಜಸ್‌ ವಿಮಾನ ಮಾದರಿಗಳ ಹಾರಾಟ, ವಿಂಗ್ ಕಂಮಾಂಡರ್ ಅಭಿನಂದನ್ ವಾಘಾ ಗಡಿ‌ ಮೂಲಕ ಭಾರತವನ್ನು ಪ್ರವೇಶಿಸುವ ರೂಪಕ, ದೇಶದ ಹೆಮ್ಮೆಯ ಯೋಧರು ಫುಲ್ವಾಮಾ ದಾಳಿ ಬಳಿಕ ಹೋರಾಟ ನಡೆಸಿದ ಸನ್ನಿವೇಶ, ಉಗ್ರರ ಅಡಗುತಾಣಗಳನ್ನು ಬಾಂಬ್​ಗಳ ಮೂಲಕ ಉಡಾಯಿಸುವ ಸನ್ನಿವೇಶಗಳು ರೋಮಾಂಚನವಾಗಿದ್ದವು.

ಹಾಲಕ್ಕಿ ಹಗರಣ

ಜೊತೆಗೆ ಪಬ್ ಜಿ ಗೇಮ್, ಆದಿವಾಸಿಗಳು ಬೇಟೆ ಆಡಿಕೊಂಡು ಬಂದ ಬೃಹತ್ ಪ್ರಾಣಿಗಳ ಪ್ರದರ್ಶನ, ಮಂಗನ ಕಾಯಿಲೆ ಬಗ್ಗೆ ಜಾಗೃತಿ, ರಕ್ತದಾನ, ಹಿಂದುಳಿದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುವ‌ ಮತ್ತು ನಾಗರ ಪಂಚಮಿಯ ಆಚರಣೆ, ಹಾಲಕ್ಕಿ ಮಹಿಳೆಯರ ವೇಶ ರಾಕ್ಷಸರ ಸಂಹಾರ ಮಾಡುವ ಸನ್ನಿವೇಶ ಹೀಗೆ ಹಲವು ರೂಪಕಗಳು ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆ ಪಡೆದವು.

ಬ್ರೀಟಿಷರನ್ನು ಅಣುಕಿಸಲು ಮಾಡುವ ಹಗರಣ:

ಬ್ರೀಟಿಷರ ತಪ್ಪುಗಳನ್ನು ಎತ್ತಿ ತೋರಿಸಲು ಭಾಷೆ ಬಾರದ ಜನರು ಈ ರೀತಿ ಹಗರಣಗಳ ಮೂಲಕ ಕುಟುಕುತ್ತಿದ್ದರು. ಬೆಳಾಂಬರದ ಹಾಲಕ್ಕಿ ಸಮುದಾಯದವರು ಹೋಳಿಗೆ ಸುಗ್ಗಿಯನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಸುಗ್ಗಿಯ ಜನಪದ ಕಲೆಯನ್ನು ಕಂಡು ಈ ಹಿಂದೆ ಬ್ರಿಟಿಷ್ ಅಧಿಕಾರಿಯೊಬ್ಬರು ಹರ್ಷಿತರಾಗಿ ತಾಮ್ರ ಫಲಕ ನೀಡಿದ್ದರು. ಅಲ್ಲದೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಇಂತಹ ಪ್ರದರ್ಶನಗಳಿಗೆ ಬ್ರಿಟೀಷರು ಹೋಳಿ‌ ಸಂದರ್ಭದಲ್ಲಿ ಅವಕಾಶ ನೀಡಿದ್ದರು. ಅದರಂತೆ ಜಾನಪದ ಶೈಲಿಯಲ್ಲಿ ಪ್ರತಿ ವರ್ಷವೂ ಅಂಕೋಲಾದಲ್ಲಿ ಪ್ರದರ್ಶನಗೊಳ್ಳುವುದಲ್ಲದೆ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಪ್ರಯತ್ನ ಇಂದಿಗೂ ನಡೆಯುತ್ತದೆ.

ಗುಪ್ತವಾಗಿ ತಯಾರಿ:

ವಿಡಂಬನಾ ಹಗರಣಗಳ ತಯಾರಿಯನ್ನು ಹಾಲಕ್ಕಿ ಸಮಾಜದವರು ಕಳೆದ ಹಲವು ದಿನಗಳ ಹಿಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತರೆ. ಹಬ್ಬದಂದು ಹಗರಣಗಳ ವೇಷ ಹೊರ ಬೀಳುವವರೆಗೂ ಅದನ್ನು ಗುಪ್ತವಾಗಿ ಇಡಲಾಗುತ್ತದೆ. ಪ್ರದರ್ಶನದ ಬಳಿಕವೇ ಇದರ ಮೆರಗು ಅರಿವಾಗುತ್ತದೆ.

ಅಲ್ಲದೆ ಹೋಳಿ ಬಂದರೆ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಡುಕ ಶುರುವಾಗುತ್ತದೆ. ಸಾವಿರಾರು ಜನರು ನೋಡುವುದರಿಂದ ಎಲ್ಲಿ ತಮ್ಮ ಮಾನವನ್ನು ಹಗರಣಗಳ ಮೂಲಕ ತೆಗೆಯುತ್ತಾರೋ ಎಂದು ಹೆದರಿಕೊಳ್ಳುತ್ತಾರೆ.

ಒಟ್ಟಾರೆ ನೂರಾರು ವರ್ಷಗಳಿಂದ ಆಡಿಕೊಂಡು ಬರುತ್ತಿರುವ ಅಂಕೋಲಾದ ಹೋಳಿ‌ ವಿಶಿಷ್ಟವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Intro:( ಸುದ್ದಿ ಪ್ರಕಟಗೊಳ್ಳದ ಕಾರಣ ಮತ್ತೊಮ್ಮೆ ಕಳುಹಿಸಲಾಗಿದೆ ಸರ್)

ಕಾರವಾರ: ಅಲ್ಲಿ ಇದ್ದಕ್ಕಿದ್ದಂತೆ ಮಿಗ್ ೨೧ ಹಾಗೂ ಎಚ್ಎಎಲ್ ತೇಜಸ್ ಹಾರಾಟ ಆರಂಭವಾಗಿತ್ತು. ಸರವೇಗದಲ್ಲಿ ಬಂದ ಸೈನಿಕರು ಪಟ್ಟಣವನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದರು. ಜತೆಗೆ ವಿಂಗ್ ಕಮಾಂಡರ್ ಅಭಿನಂದನ್ ಕೂಡ ಕಾಣಿಸಿಕೊಂಡಿದ್ದು ಕೆಲ ಕಾಲ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಘಟನೆ ಸಂಪೂರ್ಣ ಚಿತ್ರಣ ನೆರೆದವರ ಕಣ್ಣಿಗೆ ಬಿದ್ದು ಭಾರತ ಮಾತಾಕಿ ಜಯ ಘೋಷ ಮುಗಿಲು ಮುಟ್ಟಿತ್ತು...
ಹೌದು ಇಂತಹದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ಅಂಕೋಲಾ ಪಟ್ಟಣದಲ್ಲಿ. ಹೋಳಿ ಅಂಗವಾಗಿ ಬ್ರೀಟಿಷ್ ಕಾಲದಿಂದ ಆಡಿಕೊಂಡು ಬರುತ್ತಿರುವ ಅಂಕೋಲಾದ ಬೆಳಾಂಬರ ಹಾಲಕ್ಕಿ ಸಮಾಜದವರ ಹಗರಣ ನೆರೆದಿದ್ದ ಸಾವಿರಾರು ಜನರ ಮೆಚ್ಚುಗೆಗೆ ಕಾರಣವಾಯಿತು. ಸಮಾಜದ ಅಂಕುಡೊಂಕುಗಳನ್ನು ಸಾಂಪ್ರದಾಯಿಕ ಜನಪದ ಕಲೆಯ ಮೂಲಕ ತಿದ್ದುವ ಪ್ರಯತ್ನವಾಗಿ ನಡೆಸಿದ ಪ್ರತಿ ಮಾದರಿಗಳು ಜನರಲ್ಲಿ ರೋಮಾಂಚನ ಸೃಷ್ಟಿಸಿದ್ದಲ್ಲದೆ ಕೂತುಹಲದಿಂದ ವೀಕ್ಷಣೆ ನಡೆಸಿದರು.
ಹಗಣದಲ್ಲಿ ಪ್ರಮುಖವಾಗಿ ಉಗ್ರರ ನೆಲೆಬೀಡಾದ ಪಾಕಿಸ್ತಾನಕ್ಕೆ ತಕ್ಕ ಸಾಸ್ತಿ ಮಾಡಿದ ದೇಶದ ಹೆಮ್ಮೆಯ ಮಿಗ್ ೨೧ ಹಾಗೂ ಎಚ್ಎಎಲ್ ತೇಜಸ್‌ ವಿಮಾನ ಮಾದರಿಗಳ ಹಾರಾಟ, ವಿಂಗ್ ಕಂಮಾಂಡರ್ ಅಭಿನಂದನ್ ವಾಘಾ ಘಡಿ‌ ಮೂಲಕ ಭಾರತವನ್ನು ಪ್ರವೇಶಿಸುವ ರೂಪಕ, ದೇಶದ ಹೆಮ್ಮೆಯ ಯೋಧರು ಫುಲ್ವಾಮಾ ದಾಳಿ ಬಳಿಕ ಹೋರಾಟ ನಡೆಸಿದ ಸನ್ನಿವೇಶ, ಉಗ್ರರ ಅಡಗು ತಾಣಗಳನ್ನು ಬಾಂಬ್ ಗಳ ಮೂಲಕ ಉಡಾಯಿಸುವ ಸನ್ನಿವೇಶಗಳು ನೆರೆದವರ ಮನದಲ್ಲಿ ರೋಮಾಂಚನ ಹುಟ್ಟಿಸಿತ್ತು.
ಜೊತೆಗೆ ಪಬ್ ಜಿ ಗೇಮ್, ಆದಿವಾಸಿಗಳು ಭೇಟೆ ಆಡಿಕೊಂಡು ಬಂದ ಬೃಹತ್ ಪ್ರಾಣಿಗಳ ಪ್ರದರ್ಶನ, ಮಂಗನ ಕಾಯಿಲೆ ಬಗ್ಗೆ ಜಾಗೃತಿ, ರಕ್ತದಾನ, ಹಿಂದುಳಿದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುವ‌ ಮತ್ತು ನಾಗರ ಪಂಚಮಿಯ ಆಚರಣೆ, ಹಾಲಕ್ಕಿ ಮಹಿಳೆಯರ ವೇಶ ರಾಕ್ಷಸರ ಸಂಹಾರ ಮಾಡುವ ಸನ್ನಿವೇಶ ಹೀಗೆ ಹಲವು ರೂಪಕಗಳು ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆಗೆ ಕಾರಣವಾಯಿತು.
ಬ್ರೀಟಿಷರನ್ನು ಅಣುಕಿಸಲು ಮಾಡುವ ಹಗರಣ:
ಬ್ರೀಟಿಷರ ತಪ್ಪುಗಳನ್ನು ಎತ್ತಿ ತೋರಿಸಲು ಭಾಷೆ ಬರದ ಜನರು ಈ ರಿತಿ ಹಗರಣಗಳ ಮೂಲಕ ಕುಟುಕುತ್ತಿದ್ದರು. ಬೆಳಾಂಬರದ ಹಾಲಕ್ಕಿ ಸಮುದಾಯದವರು ಹೋಳಿಗೆ ಸುಗ್ಗಿಯನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಸುಗ್ಗಿಯ ಜನಪದ ಕಲೆಯನ್ನು ಕಂಡು ಈ ಹಿಂದೆ ಬ್ರೀಟಿಷ್ ಅಧಿಕಾರಿಯೊಬ್ಬರು ಹರ್ಷಿತರಾಗಿ ತಾಮ್ರ ಫಲಕ ನೀಡಿದ್ದರು. ಅಲ್ಲದೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಇಂತಹ ಪ್ರದರ್ಶನಗಳಿಗೆ ಬ್ರಿಟೀಷರು ಹೋಳಿ‌ ಸಂದರ್ಭದಲ್ಲಿ ಅವಕಾಶ ನೀಡಿದ್ದರು. ಅದರಂತೆ ಜಾನಪದ ಶೈಲಿಯಲ್ಲಿ ಪ್ರತಿ ವರ್ಷವೂ ಅಂಕೋಲಾದಲ್ಲಿ ಪ್ರದರ್ಶನಗೊಳ್ಳುವುದಲ್ಲದೆ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಪ್ರಯತ್ನ ಇಂದೀಗೂ ನಡೆಯುತ್ತದೆ.
ಗುಪ್ತವಾಗಿ ತಯಾರಿ:
ವಿಡಂಬನಾ ಹಗರಣಗಳ ತಯಾರಿಯನ್ನು ಹಾಲಕ್ಕಿ ಸಮಾಜದವರು ಕಳೆದ ಹಲವು ದಿನಗಳ ಹಿಂದಿನಿಂದಲೇ ಸಿದ್ದತೆ ಮಾಡಿಕೊಳ್ಳುತ್ತರೆ. ಹಬ್ಬದಂದು ಹಗರಣಗಳ ವೇಷ ಹೊರ ಬಿಳ್ಳುವವರೆಗೂ ಅದನ್ನು ಗುಪ್ತವಾಗಿ ಇಡಲಾಗುತ್ತದೆ. ಪ್ರದರ್ಶನ ಬಳಿಕವೆ ಇದರ ಮೆರಗು ಅರಿವಾಗುತ್ತದೆ. ಅಲ್ಲದೆ ಹೋಳಿ ಬಂದರೆ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಡುಕ ಸುರುವಾಗುತ್ತದೆ. ಸಾವಿರಾರು ಜನರು ನೋಡುವುದರಿಂದ ಎಲ್ಲಿ ತಮ್ಮ ಮಾನವನ್ನು ಹಗರಣಗಳ ಮೂಲಕ ತೆಗೆಯುತ್ತಾರೊ ಎಂದು ಹೆದರಿಕೊಳ್ಳುತ್ತಾರೆ.
ಒಟ್ಟಿನಲ್ಲಿ ನೂರಾರು ವರ್ಷಗಳಿಂದ ಆಡಿಕೊಂಡು ಬರುತ್ತಿರುವ ಅಂಕೋಲಾದ ಹೋಳಿ‌ ವಿಶಿಷ್ಟವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Body:ಕ

Conclusion:ಕ
Last Updated : Mar 24, 2019, 9:27 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.